ದಿನದ ಸುದ್ದಿ

ಇಂದು ರಾಷ್ಟ್ರವಿಭಜನೆಯ ಕರಾಳ ದಿನ; ತ್ಯಾಗ, ಬಲಿದಾನ ಸ್ಮರಣೆ

Published

on

ಸುದ್ದಿದಿನ ಡೆಸ್ಕ್ : ಇಂದು ’ವಿಭಜನೆಯ ಕರಾಳ ನೆನಪಿನ ದಿನ’(Partition Horrors Remembrance Day). 1947ರಲ್ಲಿ ಭಾರತ ( India ) ವಿಭಜನೆಯ ವೇಳೆ ಸಂಕಷ್ಟಕ್ಕೀಡಾದ ಜನತೆ ಅನುಭವಿಸಿದ ಕಷ್ಟ ಮತ್ತು ಅವರ ತ್ಯಾಗಗಳನ್ನು ಸ್ಮರಿಸುವ ದಿನವಾಗಿದೆ.

ಪ್ರತಿ ವರ್ಷ ಆಗಸ್ಟ್ 14 ರಂದು ಈ ದಿನ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದು ಅವರನ್ನು ಸ್ಮರಿಸಲಾಗುತ್ತದೆ. ’ವಿಭಜನೆಯ ಕರಾಳ ನೆನಪಿನ ದಿನ’ದ ಅಂಗವಾಗಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ದೇಶ ವಿಭಜನೆಯ ದಿನ ಅತ್ಯಂತ ನೋವಿನ ಸಂಗತಿಯಾಗಿದ್ದು, ಇದನ್ನು ಎಂದಿಗು ಮರೆಯಲು ಸಾಧ್ಯವಿಲ್ಲ; ಲಕ್ಷಾಂತರ ನಮ್ಮ ಸೋದರ-ಸೋದರಿಯರು ಹಿಂಸಾಚಾರ ಮತ್ತು ದೌರ್ಜನ್ಯದಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಅವರೆಲ್ಲರಿಗೂ ಶ್ರದ್ಧಾಂಜಲಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಮುಂಬರುವ ದಿನಗಳಲ್ಲಿ ಒಗ್ಗಟ್ಟಿನ ಸ್ಫೂರ್ತಿಯನ್ನು ಬಲಪಡಿಸೋಣ. ಸಾಮಾಜಿಕ ಸೌಹಾರ್ಧತೆ, ಮಾನವ ಸಬಲೀಕರಣಕ್ಕೆ ಒತ್ತು ನೀಡೋಣ ಎಂದು ಅವರು ಆಶಿಸಿದ್ದಾರೆ.

ಇದನ್ನೂ ಓದಿ | ಸ್ವಾತಂತ್ರ್ಯ ದಿನಾಚಾರಣೆ ಹಿನ್ನೆಲೆ; ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ಪ್ರಕಟ

ಈ ದಿನದ ಅಂಗವಾಗಿ ದೆಹಲಿಯಲ್ಲಿಂದು ಸಂಜೆ ನಡೆಯಲಿರುವ ಮೌನ ಜಾಥಾದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಭಾಗವಹಿಸಲಿದ್ದಾರೆ. ಜಂತರ್-ಮಂಥರ್‌ನಿಂದ ಆರಂಭವಾಗಲಿರುವ ಜಾಥಾ, ಕನ್ಹಾಟ್ ಪ್ಲೇಸ್‌ನ ಎ ಬ್ಲಾಕ್‌ನಲ್ಲಿ ಅಂತ್ಯಗೊಳ್ಳಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version