ದಿನದ ಸುದ್ದಿ
ಪೆನ್ಶನ್ ಪಡೆಯುವವರಿಗೆ ಇಲ್ಲಿದೆ ಸಿಹಿ ಸುದ್ದಿ..!
ಸುದ್ದಿದಿನ,ದಾವಣಗೆರೆ: ನಿವೃತ್ತ ಸರ್ಕಾರಿ ನೌಕರರು ಪ್ರತಿವರ್ಷ ಪೆನ್ಶನ್ ಪಡೆಯಲು ಜೀವನ ಪ್ರಮಾಣ ದೃಡೀಕರಣ ಪತ್ರವನ್ನು ನವೆಂಬರ್ ತಿಂಗಳಲ್ಲಿ ಸಲ್ಲಿಸುವುದು ಖಡ್ಡಾಯವಾಗಿರುತ್ತದೆ.
ಈ ಕಾರಣಕ್ಕಾಗಿ ನಿವೃತ್ತರು ಬ್ಯಾಂಕುಗಳಿಗೆ ಅಡ್ಡಾಡಬೇಕಾಗಿದ್ದು ಅನಾರೋಗ್ಯ, ಸಮಯ, ಹಣ ವ್ಯಯಿಸುವುದು ಅನಿವಾರ್ಯವಾಗಿತ್ತು. ಆದರೆ ಇನ್ನು ಮುಂದೆ ನಿವೃತ್ತರ ಮನೆ ಬಾಗಿಲಿಗೆ ಟಪಾಲು ತರುವ ಪೋಸ್ಟ್ ಮಾಸ್ಟರ್ ಈ ಜೀವನ ಪ್ರಮಾಣ ಪತ್ರವನ್ನು ಮನೆಬಾಗಿಲಲ್ಲೇ ಪಡೆದು ಆನ್ಲೈನ್‌ನಲ್ಲಿ ತಲುಪಿಸಲಿದ್ದು ಎಲ್ಲ ನಿವೃತ್ತ ನೌಕರರಿಗೂ ಅನುಕೂಲವಾಗಲಿದ್ದು, ಫೋಟೋ ಹಾಗೂ ಬೆರಳಚ್ಚನ್ನು ಮನೆಬಾಗಿಲಲ್ಲೇ ಪಡೆಯುವ ಕಾರ್ಯವನ್ನು ನಿರ್ವಹಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243