ಲೈಫ್ ಸ್ಟೈಲ್

ಜಾಗತಿಕ ಸಮಸ್ಯೆಯಾಗಿ ಪ್ಲಾಸ್ಟಿಕ್..!

Published

on

  • ಡಿ. ಬಾಲಾಜಿ, ಹಟ್ಟಿ ಚಿನ್ನದ ಗಣಿ, ಎಸ್ ಡಬ್ಲೂ ಎಮ್ ಆರ್ ಟಿ

ನೋಡಿ ಸ್ವಾಮಿ ನಾವಿರೋದು ಹೀಗೆ ಎಲ್ಲಿ ಬೇಕೆಂದರೆ ಅಲ್ಲಿ ಬಿಸಾಡುತ್ತೇವೆ. ಪ್ಲಾಸ್ಟಿಕ್ ಬಳಕೆ ಮಾಡಿ ಈ ತರಾ ಬಿಸಾಡಿದರೆ ಏನ್ ಆಗುತ್ತೆ ಅಂಥಾ ಯೋಚನೆ ಮಾಡಿ ಸ್ವಲ್ಪ.

ಈ ಜನಗಳು ಹೇಗೆ ಅಂದ್ರೆ ಕೆಲಸ ಮುಗಿದ ಮೇಲೆ ಅದು ಯಾವ ರೀತಿ ವಿಂಗಡನೆ ಮಾಡಿ ತಮ್ಮ ತಮ್ಮ ವ್ಯಾಪ್ತಿಯ ಪಂಚಾಯತಿ/ಪುರಸಭೆ/ನಗರಸಭೆ/ಬಿಬಿಎಂಪಿ ವಾಹನಗಳಿಗೆ ಕೊಡಬೇಕು ಅಂತಹ ಯೋಚನೆನ ಮಾಡದೆ ಸುಮ್ಮನೆ ಎಲ್ಲೆಂದರಲ್ಲಿ “Blogspot” ಮಾಡಿ ಅದು ದೊಡ್ಡದಾಗಿ ಹರಡುವಂತೆ ಮಾಡುತ್ತಾರೆ. ಈ ರೀತಿ ಮಾಡಿದರೆ ಸ್ವಚ್ಚ ಭಾರತ ದೇಶ ಅಸ್ತಿತ್ವಕ್ಕೆ ಬರಲು ಹೇಗೆ ಸಾಧ್ಯವಾಗುತ್ತದೆ. ಆಲೋಚಿಸಿ!

ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರದ ಮೇಲೆ ದುಷ್ಪರಿಣಾಮಗಳು ಬೀರುತ್ತವೆ. ಇದರಿಂದ ಗಾಳಿ ನೀರು, ಮಣ್ಣು ಮತ್ತು ವಾತಾವರಣ ಕಲುಷಿತಗೊಂಡು ರೋಗಗಳು ಹರಡುತ್ತವೆ. ಹಾಗಾಗಿ ಪ್ರತಿಯೊಬ್ಬರು ಜಾಗೃತರಾಗಿ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ.

ಪ್ಲಾಸ್ಟಿಕ್ ಬಳಕೆ ಮಾಡಿದ್ರೆ ನಮ್ಮ ಆರೋಗ್ಯಕ್ಕೆ ಏನೇನೂ ದುಷ್ಪರಿಣಾಮ ಬೀರುತ್ತದೆ ಎಂದು ಗಂಭೀರವಾಗಿ ಚಿಂತಿಸಿ, ತಿಳಿದುಕೊಳ್ಳಿ. ಉದಾಹರಣೆಗೆ, ಮಲೇರಿಯಾ ಮತ್ತು ಡೆಂಗ್ಯೂ ಮುಂತಾದ ರೋಗಗಳಿಗೆ ಕಾರಣವಾಗುತ್ತದೆ ಇನ್ನೂ ಇತ್ಯಾದಿ ರೋಗಗಳು ಬರುವ ಸಾಧ್ಯತೆ ಹೆಚ್ಚಿದೆ ಇನ್ಮುಂದೆ ಆದರೂ ಸಹ ಎಚ್ಚೆತ್ತುಕೊಳ್ಳಿ. ಈ ಪ್ಲಾಸ್ಟಿಕ್ ಇಂದ ಆಗುವ ಭೂಮಿಯ ಮೇಲೆ ವಾಸವಾಗಿರುವ ಜೀವಗಳಿಗೆ ಇನ್ನಷ್ಟು ದುಪ್ಪಟ್ಟು ಅಪಾಯಕಾರಿಯೇ ಸರಿ ಎನ್ನಬಹುದು.

ಡಿ. ಬಾಲಾಜಿ, ಹಟ್ಟಿ ಚಿನ್ನದ ಗಣಿ, ಎಸ್ ಡಬ್ಲೂ ಎಮ್ ಆರ್ ಟಿ

ದಯವಿಟ್ಟು ನಾವು ಯಾವುದೇ ರೀತಿಯಿಂದಲೂ ಪ್ಲಾಸ್ಟಿಕ್‌ನ ಬಳಸುವುದು ಉತ್ತಮವಲ್ಲ. ಇದರಿಂದಾಗುವ ಇನ್ನಷ್ಟು ದುಷ್ಪರಿಣಾಮಗಳು ಏನು ಅಂದ್ರೆ ಪರಿಸರಕ್ಕೆ ಹಾನಿಕಾರಕವಾಗಿದೆ. ಇದು ಬೇಗನೆ ಹಾಳಾಗುವುದಿಲ್ಲ ಮತ್ತು ಸುಟ್ಟರೆ ಸುಸ್ಥಿರ ಇದ್ದ ವಾತಾವರಣದ ಹೃದಯವನ್ನು ನಾವೇ ಕಲಕಿ ಹಾಳು ಮಾಡಿ ಹಾನಿ ಮಾಡಿದಂತಾಗುತ್ತದೆ. ಅದು ನಮ್ಮ ಕೈಯಾರೆ ಮಾಡಬಾರದೆಂಬ ನಮ್ಮ ಆಶಯ! ದಯವಿಟ್ಟು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದರ ಕಡೆ ಗಮನಹರಿಸಿ, ಸಾಧ್ಯವಾಗುವುದಾದರೆ ಸಂಪೂರ್ಣ ತ್ಯಜಿಸಿ. ಪ್ಲಾಸ್ಟಿಕ್ ಪರಿಸರದ ಸಮಸ್ಯೆಗಳಿಗೆ ಮತ್ತಷ್ಟು ದುಪ್ಪಟ್ಟು ಪ್ರಚೋದಿಸುತ್ತದೆ. ಪ್ಲಾಸ್ಟಿಕ್ ಮಾಲಿನ್ಯವು ಕೂಡ ನಮ್ಮ ಹವಾಮಾನದ ಮೇಲೆ ಹಲವಾರು ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ.

ದಯವಿಟ್ಟು ನಾವು ಇನ್ಮುಂದೆ ಪರಿಸರ, ಭೂಮಿ ಮತ್ತು ಪ್ರಾಣಿ, ಪಕ್ಷಿಗಳ ಮೇಲೆ ತುಸು ಹೆತ್ತ ಚಿಕ್ಕಮಕ್ಕಳ ಮೇಲೆ ತೋರಿಸುವ ಪ್ರೀತಿಯನ್ನೇ ತೋರಿಸೋಣ, ಮುಂದಿನ ಜನಾಂಗಕ್ಕೆ ಸ್ವಚ್ಛ ಪರಿಸರ ನೀಡಲು ಕಾರ್ಯಪ್ರವೃತ್ತರಾಗೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version