ದಿನದ ಸುದ್ದಿ
ದಾವಣಗೆರೆ | ಮಹಿಳಾ ಮುಖ್ಯ ಕಾನ್ಸ್ಟೇಬಲ್ ಆರ್.ರೇಣುಕಮ್ಮ ಅವರಿಗೆ ಪ್ರಶಂಸನೀಯ ಪತ್ರ
ಸುದ್ದಿದಿನ,ದಾವಣಗೆರೆ : ಅಕ್ಟೋಬರ್ 25 ರಂದು ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಆರ್.ರೇಣುಕಮ್ಮ ಮಹಿಳಾ ಮುಖ್ಯ ಕಾನ್ಸ್ಟೇಬಲ್ ಇವರಿಗೆ ಮಹಿಳಾ ಪೊಲೀಸ್ ಠಾಣೆಯ ಉತ್ತಮ ಬರಹಗಾರರಾಗಿ ಇತರೆ ಸಾಮಾನ್ಯ ಕರ್ತವ್ಯಗಳನ್ನು ಹಾಗೂ ಬಂದೋಬಸ್ ಕರ್ತವ್ಯಗಳನ್ನು ಚಾಕಚಕ್ಯತೆಯಿಂದ ನಿರ್ವಹಿಸುತ್ತಿರುವುದಕ್ಕಾಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹನುಮಂತರಾಯ ಪ್ರಶಂಸನೀಯ ಪತ್ರವನ್ನು ನೀಡಿ ಅಭಿನಂದನೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಠಾಣೆಗೆ ಬಂದ ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ಸೌಜನ್ಯತೆ ಮತ್ತು ಸ್ನೇಹಯುತವಾಗಿ ವರ್ತಿಸುವುದು ಕರ್ತವ್ಯದಲ್ಲಿ ತೋರಿದ ತಾಳ್ಮೆ, ಸಂಯಮ, ಸಮಯ ಪ್ರಜ್ಞೆ ಮತ್ತು ಅಪ್ರತಿಮ ಕರ್ತವ್ಯ ನಿಷ್ಠೆ ಪ್ರಶಂಸನೀಯವಾದ್ದು. ಮುಂದೆಯೂ ಸಹ ಇವರು ಇದೇ ರೀತಿಯಾಗಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಲಿ ಶ್ಲಾಘಿಸಿ ಪ್ರಶಂಸನೀಯ ಪತ್ರವನ್ನು ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243