ದಿನದ ಸುದ್ದಿ
ರಸ್ತೆಯ ಗುಂಡಿ ಮುಚ್ಚಿ ಸಾರ್ವಜನಿಕರ ಮೆಚ್ಚುಗೆ ಪಡೆದ ಪೊಲೀಸ್ ಪೇದೆ..!
ಸುದ್ದಿದಿನ, ಬೆಂಗಳೂರು : ಕಳೆದ ವಾರ ಸುರಿದ ಮಳೆಗೆ ವಿವೇಕ್ ನಗರದ 1ನೇ ಮೈನ್ ನಲ್ಲಿ ರಸ್ತೆ ಗುಂಡಿಗಳು ಮತ್ತೆ ಬಾಯಿ ತೆರೆದಿದ್ದಕಾರಣ ಟ್ರಾಫಿಕ್ ಜಾಮ್ ಹೆಚ್ಚಾಗಿತ್ತು, ಇದರ ನಿಯಂತ್ರಣಕ್ಕೆ ರಸ್ತೆಯಲ್ಲಿನ ಗುಂಡಿಯನ್ನು ಮುಚ್ಚಿ ಅಶೋಕ್ ನಗರ ಟ್ರಾಫಿಕ್ ಹೆಡ್ ಕಾನ್ಸ್ ಟೇಬಲ್ ಸುರೇಶ್ ಮುಚ್ಚಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕಳೆದ ವಾರ ಸುರಿದ ಮಳೆಗೆ ವಿವೇಕ್ ನಗರದ 1ನೇ ಮೈನ್ ನಲ್ಲಿ ರಸ್ತೆ ಗುಂಡಿಗಳು ಮತ್ತೆ ಬಾಯಿ ತೆರೆದಿದ್ದವು. ಈ ಹಿಂದೆ ಈ ರಸ್ತೆಯಲ್ಲಿದ್ದ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿತ್ತು ಬಿಬಿಎಂಪಿ.ಕಳೆದ ವಾರ ಮಳೆ ಬಂದಾಗ್ಲೂ ರಸ್ತೆ ಬದಿ ಮಣ್ಣನ್ನು ಅನ್ಲೋಡ್ ಮಾಡಿ ಹೋಗಿದ್ದರು ಬಿಬಿಎಂಪಿ ಅಧಿಕಾರಿಗಳು. ಅಶೋಕನಗರ ಮಾರ್ಗವಾಗಿ ವಿವೇಕನಗರ ರಸ್ತೆ ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುತ್ತೆ. ಈ ಹಿನ್ನಲೆಯಲ್ಲಿ ವಿವೇಕನಗರ 1 ನೇ ಮೈನ್ ಯಾವಾಗಲೂ ಜಾಮ್ ಆಗಿರತ್ತೆ. ಅಲ್ಲದೇ ರಸ್ತೆ ಗುಂಡಿಯಿಂದ ಇನ್ನಷ್ಟು ಜಾಮ್ ಹೆಚ್ಚಾಗಿತ್ತು. ಈ ವೇಳೆ ಅದೇ ರಸ್ತೆ ಟ್ರಾಫಿಕ್ ನಿಯಂತ್ರಣಕ್ಕೆ ನಿಯುಕ್ತಿಗೊಂಡಿದ್ದ ಟ್ರಾಫಿಕ್ ಪೇದೆ ಸುರೇಶ್. ಗುಂಡಿ ಮುಚ್ಚಿದ್ದಾರೆ.