ರಾಜಕೀಯ
ಅವರ ಬಲೂನು ಹೆಚ್ಚು ಕಾಲ ಉಳಿಯಲಾರದು
ಪ್ರೀತಿಯ ಸ್ನೇಹಿತರೇ
ಈ ಫಲಿತಾಂಶ Writing on the wall ಆಗಿತ್ತು. ಅನಿರೀಕ್ಷಿತವಲ್ಲ. ‘ಹಾಗಿರಲಿಲ್ಲ, ವಿರೋಧ ಪಕ್ಷಗಳು ಸ್ವಲ್ಪ ಎಡವಿದವು, ಪುಲ್ವಾಮಾ ಅಟ್ಯಾಕ್ನಿಂದ ಎಲ್ಲವೂ ಬದಲಾಯಿತು. ಸ್ವಲ್ಪ ಬೇರೆ ರೀತಿ ಮಾಡಿದ್ದರೆ ಸನ್ನಿವೇಶವೇ ಬೇರೆ ರೀತಿ ಇರುತ್ತಿತ್ತು’ ಎಂದು ಯಾರಾದರೂ ಹೇಳಿದರೆ, ನಾವಿನ್ನೂ ಭ್ರಮೆಯಿಂದ ಹೊರಬಂದಿಲ್ಲ ಎಂದಷ್ಟೇ ಅರ್ಥ. ಏಕೆಂದರೆ, ಅವರದ್ದೊಂದು ಪರಿಣಾಮಕಾರಿ ಕಂಪ್ಲೀಟ್ ಪ್ಯಾಕೇಜ್.
ಕೇಂದ್ರೀಕೃತವಾದ ವ್ಯವಸ್ಥಿತ ಪ್ಲಾನಿಂಗ್ ಮತ್ತು ಅಷ್ಟೇ ವ್ಯವಸ್ಥಿತವಾಗಿ ವಿಕೇಂದ್ರೀಕೃತ ಇಂಪ್ಲಿಮೆಂಟೇಷನ್. ಆಗುತ್ತಿರುವುದು ಇಷ್ಟೇ. ನಾವೊಂದು ಹೊಸ ಕಾಲದಲ್ಲಿ ಬದುಕುತ್ತಿದ್ದೇವೆ. ಆ ಹೊಸ ಕಾಲಕ್ಕೆ ಅವರು ಚೆನ್ನಾಗಿ ಹೊಂದಿಕೊಂಡಿದ್ದಾರೆಂದರೆ ತಪ್ಪಾಗುತ್ತದೆ. ಹೊಸ ಕಾಲವನ್ನು ನಿರ್ಮಿಸುವುದರಲ್ಲೂ ಅವರು ಪಾತ್ರ ವಹಿಸುತ್ತಿದ್ದಾರೆ. ಅದನ್ನು ನಿರ್ಮಿಸಲು ಅವರಿಗೇ ಬಿಟ್ಟರೆ ದ್ವೇಷ, ತಾರತಮ್ಯ ಮತ್ತು ಪರಿಸರನಾಶದ ಆಧಾರದ ಮೇಲೆ ಅಸಹನೀಯವಾದುದನ್ನು ಕಟ್ಟಿಬಿಡುತ್ತಾರೆ. ಅಪ್ರಜಾತಾಂತ್ರಿಕತೆಯು ಇನ್ನಷ್ಟು ನಾರ್ಮಲ್ ಆಗುತ್ತದೆ.
ಆದರೆ, ಪ್ರಪಂಚ ಮುಳುಗಿ ಹೋಗಿಲ್ಲ. ಅವರ ಬಲೂನೂ ಹೆಚ್ಚು ಕಾಲ ಉಳಿಯಲಾರದು. ಸರಿಯಾದ ಪರ್ಯಾಯವನ್ನು ಕಟ್ಟಿ ನಿಲ್ಲಿಸಿದರೆ ಮಾತ್ರ ಆ ಬಲೂನು ಒಡೆದು ಹೋಗುತ್ತದೆ. ಪರ್ಯಾಯವೆಂಬುದು ಕೇವಲ ಪರ್ಯಾಯ ರಾಜಕೀಯ ಪಕ್ಷವಲ್ಲ, ‘ಸಾಂಪ್ರದಾಯಿಕ ರೀತಿಯ’ ಚಳವಳಿಯೂ ಅಲ್ಲ.
ಹೊಸ ಕಾಲದ ಸಂಸ್ಕೃತಿ, ಮೌಲ್ಯ, ಆರ್ಥಿಕತೆ ಮತ್ತು ರಾಜಕಾರಣವನ್ನು ನಿರ್ಮಿಸುವ ಇನಿಷಿಯೇಟಿವ್ ನಾವು ತೆಗೆದುಕೊಳ್ಳಬೇಕು. ಪ್ರತಿಯೊಂದು ಆಯಾಮದಲ್ಲೂ ಹೊಸತು ಮತ್ತು ಒಳಿತು ಇರುವಂತೆ ಮಾಡಬೇಕು. ಇದರ ಬಗ್ಗೆ ನನಗಿರುವ ವಿಶ್ವಾಸ ಇದು – ಆ ಕೆಲಸಕ್ಕೆ ಇಳಿದಾಗ, ಅದನ್ನು ನಾವೆಷ್ಟು ಸೊಗಸಾಗಿ ಮಾಡಬಲ್ಲವೆಂಬುದು ನಮಗೇ ಆಶ್ಚರ್ಯ ತರಿಸಲಿದೆ.
ಹಿಂದಿನೆಲ್ಲಾ ಅನುಭವಗಳು, ದರ್ಶನಗಳು, ಆಂದೋಲನದ ಒಳ್ಳೆಯ ಮತ್ತು ಸೋಲಿನ ಪಾಠಗಳು ನಮ್ಮ ಜೊತೆಗಿದ್ದೇ ಇವೆ. ಅವು ಅಡ್ಡಿಯಾಗದಂತಷ್ಟೇ ನೋಡಿಕೊಳ್ಳಬೇಕು ಅಷ್ಟೇ. ಇವೆಲ್ಲದರೊಂದಿಗೆ ನಾವು ಶುರು ಮಾಡಿಯೇ ಬಿಟ್ಟರೆ, ಬಹಳ ಬೇಗ – ಅಂದರೆ 8ರಿಂದ 10 ವರ್ಷಗಳಲ್ಲಿ – ನಾವು ಹೊಸ ಭಾರತವನ್ನು ಕಟ್ಟುವಲ್ಲಿ ಮಹತ್ವದ ತಿರುವಿಗೆ ಕಾರಣವಾಗುತ್ತೇವೆ. ಇದರಲ್ಲಿ ಸಂಶಯವೇ ಇಲ್ಲ. ಹೇಗೆಂಬುದರ ಚರ್ಚೆ ಶುರು ಮಾಡಿದರೆ, ನೀವೆಲ್ಲರೂ ಬಹಳಷ್ಟನ್ನು ಅದಕ್ಕೆ ಸೇರಿಸುತ್ತೀರೆಂಬ ವಿಶ್ವಾಸ ನನಗಿದೆ.
ಕಡೆಯ ಮಾತು ಓದುವುದು ನಿಮಗೆ ಕಷ್ಟವಾಗಬಹುದು. ಆದರೆ, ಅದರಿಂದ ಒಳ್ಳೆಯದಾಗುತ್ತದೆ. ನರೇಂದ್ರ ಮೋದಿ, ಅಮಿತ್ಷಾ ಮತ್ತು ಅವರ ಪರಿವಾರಕ್ಕೆ ಅಭಿನಂದನೆಗಳನ್ನು ಹೇಳುವುದರ ಮೂಲಕ ನಮ್ಮ ಕೆಲಸವನ್ನು ಆರಂಭಿಸೋಣ. ಹೊಸ ಭಾರತ ನಿರ್ಮಾಣದಲ್ಲಿ ಗೆಲ್ಲುವ ಸವಾಲು ಸ್ವೀಕರಿಸಿ ಕಣಕ್ಕಿಳಿಯೋಣ.
To all ‘Minority friends’, We are all together in this fight. Even now we are majority. Let’s join hands. We belong to this nation and this nation belongs to us. And we shall build a new India.
–ವಾಸು ಹೆಚ್.ವಿ
ಕರ್ನಾಟಕ ಜನಶಕ್ತಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243