ಬಹಿರಂಗ

ಮಹುವಾ ಮೊಯ್ತ್ರಾ: ಕಗ್ಗತ್ತಲಿನಲ್ಲೊಂದು ಕೊಲ್ಮಿಂಚು..!

Published

on

ಮೊನ್ನೆ ಲೋಕಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರ ಅರೆಚಾಟದ ಅಡಚಣೆಗಳ ನಡುವೆ ಈ ಬಂಗಾಲಿ ಹೆಣ್ಣುಮಗಳು ಮೊರೆದದ್ದು ಇಂದು ಜಗತ್ತಿನಾದ್ಯಂತ ಪ್ರತಿದ್ವನಿಸಿ ಪ್ರಜಾಪ್ರಭುತ್ವವಾದಿಗಳು ಈಕೆಯನ್ನು ಮುಕ್ತಕಂಠದಿಂದ ಪ್ರಶಂಸಿಸುತಿದ್ದಾರೆ.! ಸಾಮಾಜಿಕ ಜಾಲತಾಣ ಈಕೆಯ ಮೌಲ್ಯಯುತ ಮಾತುಗಳನ್ನು “speech of the year” ಎಂದು ಗುರುತಿಸಿದೆ!!

ಈ ಸುಂದರ ಹೆಣ್ಣುಮಗಳ ಹೆಸರು ‘ಮಹುವಾ ಮೊಯ್ತ್ರಾ’ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ಸಿನಿಂದ ಮೊದಲ ಸಲ ಚುನಾಯಿತಳಾದ ಲೋಕಸಭಾ ಸದಸ್ಯೆ. ಕೇವಲ ನಲವತ್ತನಾಲ್ಕು ವರ್ಷ ವಯಸ್ಸು.

ಮೊನ್ನೆ ನಮ್ಮ ಪ್ರಜ್ವಲ್ ರೇವಣ್ಣ ತನಗೆ ಸಿಕ್ಕ‌ ಸಣ್ಣ ಅವಕಾಶ ಮತ್ತು ಮಿತಿಗಳಲ್ಲಿ ಮಾತನಾಡಿದ್ದನ್ನು ಕಂಡು ಸ್ವಲ್ಪ ಚೇತರಿಸಿಕೊಂಡಿದ್ದ ನಮ್ಮ ಮನಸ್ಸುಗಳು, ನಂತರ ಮಹುವಾ ಮಾತನಾಡಿದ್ದನ್ನು ಕಂಡು “ಈ ದೇಶಕ್ಕೆ ಇನ್ನೂ ಒಳ್ಳೆಯ ಭವಿಷ್ಯವಿದೆ” ಎಂಬ ನಂಬಿಕೆಯೊಂದಿಗೆ ಅಪಾರ ಸಂತೋಷದಲ್ಲಿ ತೇಲಾಡಿದೆವು.!!
‌‌‌‌
ಈಕೆ ಈಗಿನ ಸರ್ಕಾರವನ್ನು ಈ ಕೆಳಕಂಡ ಏಳು ಬಲವಾದ ಆಧಾರಸಹಿತ ಕಾರಣಗಳನ್ನು ನೀಡಿ, ಈ ದೇಶ ‘ಪ್ಯಾಸಿಸಂ’ ಕಡೆಗೆ ನಡೆಯುತ್ತಿರುವುದನ್ನು ಸಾಭೀತುಪಡಿಸಲು ತೊಡಗಿದಳು!?

ಆ ಏಳೂ ಕಾರಣಗಳನ್ನು ಇಲ್ಲಿ ಯಥಾವತ್ತಾಗಿ ನೀಡುತಿದ್ದೇನೆ ಗಮನಿಸಿ(ಸಮಯದ ಅಭಾವದಿಂದ ತರ್ಜುಮೆ ಮಾಡಲಾಗಲಿಲ್ಲ, ಕ್ಷಮಿಸಿ)

1. “There is a powerful and continuing nationalism that is searing into our national fabric,” she said. “It is superficial, it is xenophobic and it is narrow. It’s the lust to divide and not the desire to unite.”

2. She pointed to a “resounding disdain for human rights “, which she said had led to a 10-fold increase in the number of hate crimes between 2014 and 2019.

3. Ms Moitra criticised the government for its “unimaginable subjugation and control of mass media”. She said India’s TV channels spend “the majority of airtime broadcasting propaganda for the ruling party”.

4. She attacked the government for what she said was an ” obsession with national security “. An “atmosphere of fear” pervaded the country, with new enemies being created every day.

5. “The government and religion are now intertwined . Do I even need to speak about this? Need I remind you that we have redefined what it means to be a citizen?” she demanded, saying laws had been amended to target Muslims.

6. She said “a complete disdain for intellectuals and the arts” and “the repression of all dissent” was the most dangerous sign of all – and it was “pushing India back to the Dark Ages”.

7. The last sign, Ms Moitra said, was the “erosion of independence in our electoral system “.

ಮೇಲಿನ ಏಳೂ ಕಾರಣಗಳು, ಅಂತರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಪ್ಯಾಸಿಸಂ ನ ಅಪಾಯಕಾರಿ ಮುಖ್ಯ ಲಕ್ಷಣಗಳಿಗೆ ಹೊಂದಿಕೊಳ್ಳುತ್ತವೆ !? (ಇಲ್ಲಿ ನೀಡಿರುವ ‘early warning signs of fascism’ ಪೋಸ್ಟರ್ ಅನ್ನು ಗಮನಿಸಿ…)

ಮಹುವಾ ಮಾತನಾಡಿದ್ದು ಅಷ್ಟೆಲ್ಲಾ ಗದ್ದಲದ ನಡುವೆ ಕೇವಲ ಹತ್ತು ನಿಮಿಷ. ಗದ್ದಲ ಮಾಡುತ್ತಿದ್ದವರನ್ನು “professional Hacklers” ಎಂದು ಜರೆಯುತ್ತಾ, ಸ್ಪೀಕರ್ ‌ಅವರಿಗೆ ಸದನವನ್ನು ಹದ್ದುಬಸ್ತಿನಲ್ಲಿಡುವಂತೆ ಸೂಚಿಸುತಿದ್ದದ್ದು, ಆಕೆಯ ದೈರ್ಯ, ಬಾಷೆ, ಆಕೆಯ ಶಬ್ದಪ್ರಯೋಗ, ವಿಷಯದ ಸಿದ್ದತೆ ಮತ್ತು ಸ್ಪಷ್ಟತೆ ಕಂಡಾಗ ಎಲ್ಲೋ ಒಂದು ಬೆಳಕಿನ ಕಿರಣ ಕಾಣತೊಡಗಿತು…

ಸಿ.ಎಸ್.ದ್ವಾರಕಾನಾಥ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version