ದಿನದ ಸುದ್ದಿ
ದಾವಣಗೆರೆ | ನಾಳೆ ವಿದ್ಯುತ್ ವ್ಯತ್ಯಯ
ಸುದ್ದಿದಿನ,ದಾವಣಗೆರೆ : 66/11 ಕೆ.ವಿ. ಟಿ.ವಿ.ಪಿ ಎಲೆಬೇತೂರು ಶಾಖಾ ವ್ಯಾಪ್ತಿಯ ಕೇಂದ್ರ ದಿಂದ ಹೊರಡುವ ಎಫ್-1-ಚಿತ್ತಾನಹಳ್ಳಿ, ಎಫ್-3-ಕಕ್ಕರಗೊಳ್ಳ, ಎಫ್-4 ಅವರಗೊಳ್ಳ, ಎಫ್-5-ದೇವರಹಟ್ಟಿ ಎಫ್-14-ಯರಗುಂಟೆ, ಎಫ್-17-ಅಮೃತನಗರ ಮತ್ತು ಎಫ್-20-ಕೋಡಿಹಳ್ಳಿ ವಿದ್ಯುತ್ ಮಾರ್ಗಗಳ ವ್ಯಾಪ್ತಿಯಲ್ಲಿ ಎ.ಬಿ ಕೇಬಲ್ ಕಾಮಗಾರಿ ಮತ್ತು ಜಿ.ಓ.ಎಸ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ. ಮೇ.25 ರಂದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಯರಗುಂಟೆ, ಅಶೋಕನಗರ, ಕರೂರು, ದೊಡ್ಡಬೂದಿಹಾಳು, ಚಿಕ್ಕಬೂದಿಹಾಳು, ದೇವರಹಟ್ಟಿ, ಚಿತ್ತಾನಹಳ್ಳಿ, ಕಲ್ಪನಹಳ್ಳಿ, ಕಕ್ಕರಗೊಳ್ಳ, ಅವರಗೊಳ್ಳ ಮತ್ತು ಅಮ್ಮನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
66/11 ಕೆ.ವಿ ದಾವಣಗೆರೆ ವಿದ್ಯುತ್ ವಿತರಣಾಕೇಂದ್ರದಿಂದ ಹೊರಡುವ ಸಾಯಿ ಎಫ್.21 ಫೀಡರ್‍ನಲ್ಲಿ ನಗರದ ಮಹಾನಗರ ಪಾಲಿಕೆ ವತಿಯಿಂದ ಒಳಚರಂಡಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ. ಮೇ.27 ರ ಬೆಳಿಗ್ಗೆ 10 ರಿಂದ ಸಂಜೆ 4.00 ಗಂಟೆಯವರೆಗೆ ಸಿದ್ದವೀರಪ್ಪ ಬಡಾವಣೆಯ 10, 11, ಮತ್ತು 12ನೇ ಕ್ರಾಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243