ರಾಜಕೀಯ
ಬೆಳಗಾವಿಯವರು ಸಿಎಂ ಆಗಿಲ್ಲ ಅಷ್ಟೆ ; ಆದ್ರೆ ಸಿಎಂ ಮಾಡೋದು ಗೊತ್ತಿದೆ : ಪ್ರಭಾಕರ್ ಕೋರೆ
ಸುದ್ದಿದಿನ, ಬೆಂಗಳೂರು : ಜಾರಕಿಹೊಳಿ, ಲಕ್ಷ್ಮಿಹೆಬ್ಬಾಳ್ಕರ್ ಜಟಾಪಟಿ ವಿಚಾರ ಅವರ ಪಾರ್ಟಿ ಸಂಬಂಧಿಸಿದ್ದು. ಲಕ್ಷ್ಮಿ ಹೆಬ್ಬಾಳ್ಕರ್ ಲಿಂಗಾಯತಳು, ನಾನು ಲಿಂಗಾಯತ ಅಂತಾ ಸಂಬಂಧ ಕಲ್ಪಿಸೋದು ಸರಿಯಲ್ಲ. ನನಗೂ ಅದಕ್ಕೂ ಸಂಬಂಧವಿಲ್ಲ, ನಾನು ನಿನ್ನೆಯಷ್ಟೇ ವಿದೇಶದಿಂದ ಬಂದಿದ್ದೇನೆ ಎಂದು ವಿಧಾನಸೌಧದಲ್ಲಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಮಾಧ್ಯಮಗಳಿಗೆ ತಿಳಿಸಿದರು.
ಸಿಎಂ ಕೆಳಗೆ ಇಳಿಸೋದು ಗೊತ್ತು, ಸಿಎಂ ಮಾಡೋದು ಗೊತ್ತು. ವೀರೇಂದ್ರ ಪಾಟೀಲ್ ಅವರನ್ನೇ ಸಿಎಂ ಮಾಡಿದ್ದೇ ಬೆಳಗಾವಿ ರಾಜಕಾರಣ, ಕೆಳಗೆ ಇಳಿಸಿದ್ದು ಬೆಳಗಾವಿ ರಾಜಕಾರಣವೇ ಗೊತ್ತಿರಲಿ. ಬೆಳಗಾವಿ ಅವರು ಸಿಎಂ ಆಗಲಿಲ್ಲ ಅಷ್ಟೇ, ಸಿಎಂ ಮಾಡೋದು ಗೊತ್ತಿದೆ. ಬೆಳಗಾವಿ ರಾಜಕಾರಣ ಫೈಟ್ ಅವರ ಪಕ್ಷಕ್ಕೆ ಬಿಟ್ಟಿದ್ದು. ಆದ್ರೆ ಅವರ ಕಿತ್ತಾಟದಿಂದ ನಮಗೇನು ಲಾಭ ಸಿಗುತ್ತೆ ಅನ್ನೋದನ್ನ ಕಾಯ್ತಾ ಇದೀವಿ ಎಂದು ಖಡಕ್ ಆಗಿ ನುಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401