ದಿನದ ಸುದ್ದಿ

‘ಪ್ರಧಾನಮಂತ್ರಿ ಆವಾಸ್ ಯೋಜನೆ’ಯಡಿ ಮನೆ ನಿರ್ಮಿಸಲು ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ಹರಿಹರ ನಗರಸಭೆ ವ್ಯಾಪ್ತಿಯಲ್ಲಿ ವಾಸಿಸುವ ಸಾರ್ವಜನಿಕರಿಗೆ ಸರ್ವರಿಗೂ ಸೂರು ಒದಗಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಮನೆ ನಿರ್ಮಿಸಿಕೊಳ್ಳಲು ರೂ.1.50 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ವಾರ್ಷಿಕ ರೂ. 3 ಲಕ್ಷ ಆದಾಯವಿರುವ ಹಾಗೂ ಸ್ವಂತ ಜಾಗ/ನಿವೇಶನ ಹೊಂದಿರುವ ಸಾರ್ವಜನಿಕರು ಅರ್ಜಿ ಸಲ್ಲಿಸಿ 1.5 ಲಕ್ಷ ಸಹಾಯಧನವನ್ನು ಪಡೆಯಬಹುದು. ನಿಗದಿತ ಅರ್ಜಿ ನಮೂನೆಯನ್ನು ಕಚೇರಿಯಲ್ಲಿ ಪಡೆಯಬಹುದು.

ಒಂದು ಕುಟುಂಬದಲ್ಲಿ ಅವರವರ ಹೆಸರಲ್ಲಿ ನಿವೇಶನ ಹೊಂದಿರುವ ಎಲ್ಲಾ ವಯಸ್ಕ ಸದಸ್ಯರೂ ಸ್ವಂತ ಮನೆ ನಿರ್ಮಾಣ ಮಾಡಿದರೆ ಅವರೆಲ್ಲರಿಗೂ ಈ ಯೋಜನೆಯಡಿ ಸಹಾಯಧನವನ್ನು ನೀಡಲಾಗುವುದು.

ಪಕ್ಕಾ ಮನೆ ಇಲ್ಲದಿದ್ದರೆ ಹಾಗೂ ಅಂತಹವರ ವಾರ್ಷಿಕ ಆದಾಯ ರೂ. 3 ಲಕ್ಷ ಒಳಗಿದ್ದಲ್ಲಿ ಒಂದು ಕುಟುಂಬವು ಮನೆಯನ್ನು ಪಡೆಯಬಹುದು. ಪ್ರಗತಿಯಲ್ಲಿರುವ ಮನೆಗಳ ಮಾಲೀಕರೂ ಕೂಡ ಯೋಜನೆಯ ಲಾಭ ಪಡೆಯಬಹುದು.

ಅರ್ಜಿದಾರರು ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳು, ಫೊಟೋ, ಕುಟುಂಬ ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಆಧಾರಕಾರ್ಡ್(ಅರ್ಜಿದಾರರ ಮತ್ತು ಅವರ ಅವಲಂಬಿತರ), ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪುಸ್ತಕ, ಇನ್ನಿತರೇ ಅಗತ್ಯ ದಾಖಲೆಗಳನ್ನು ಕಚೇರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಆಶ್ರಯ ಶಾಖೆಯ ವಿಷಯ ನಿರ್ವಾಹಕರನ್ನು ಸಂಪರ್ಕಿಸಬಹುದೆಂದು ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version