ದಿನದ ಸುದ್ದಿ

“ಪ್ರಜಾ ಭೂಷಣ”-2022 ಪ್ರಶಸ್ತಿಗೆ ಅರ್ಹರಿಂದ ಅರ್ಜಿ ಅಹ್ವಾನ

Published

on

ಸುದ್ದಿದಿನ ಡೆಸ್ಕ್ : ಪ್ರತಿವರ್ಷದಂತೆ ಈ ವರ್ಷವೂ ಸಹ ಕರುನಾಡು ಸೇವಾ ಟ್ರಸ್ಟ್ (ರಿ ), ಮಂಡ್ಯ ಇವರು ಕೊಡಮಾಡುವ ಪ್ರಸಕ್ತ ಸಾಲಿನ, “ಪ್ರಜಾ ಭೂಷಣ”-2022 ಪ್ರಶಸ್ತಿಗೆ ಅರ್ಹರಿಂದ ಅರ್ಜಿ ಕರೆಯಲಾಗಿದೆ.

ಕಲೆ, ಸಾಹಿತ್ಯ, ಸಂಗೀತ, ಚಿತ್ರಕಲೆ, ರಂಗಭೂಮಿ, ನೃತ್ಯ, ಸಮಾಜಸೇವೆ, ಸಂಕಿರಣ, ಕೃಷಿ, ಶಿಕ್ಷಣ,ಹೀಗೆ ಹಲವು ರಂಗಗಳಲ್ಲಿ ಸಾಧನೆಗೈದ, ಹಾಗೂ ವಿಶೇಷವಾಗಿ ಗುರುತಿಸಿಕೊಂಡಿರುವ ಆಸಕ್ತಿವುಳ್ಳ ಸಾಧಕರು ಈ ಕೆಳಗಿನ ವಿಳಾಸಕ್ಕೆ ನಿಮ್ಮ ಅರ್ಜಿಗಳನ್ನು ಕಳುಹಿಸಿಕೊಡಬಹುದು.

ಮೇಲ್ಕಂಡ ವಿಷಯ ಕುರಿತು ಗೊಂದಲಗಳಿದ್ದರೆ ಮಾಹಿತಿಗೆ ಸಂಪರ್ಕಿಸಿ : 8073947733, 9986467168.

ಈ ಮೇಲ್ಕಂಡ ಪ್ರಶಸ್ತಿಗೆ ಕೆಲವು ಮಾನದಂಡಗಳನ್ನು ಆಧರಿಸಿ ಆಯ್ಕೆ ಸಮಿತಿ ಪ್ರಕ್ರಿಯೆ ನಡೆಯಲಿದೆ.

  1. ಪ್ರಜಾ ಭೂಷಣ”-2022 ಪ್ರಶಸ್ತಿಗೆ ತಮ್ಮ ಜೀವಮಾನದ ಸಾಧನೆಯ ಸಂಪೂರ್ಣ ವಿವರ ಹಾಗೂ ಅಗತ್ಯ ದಾಖಲೆಗಳನ್ನು ಒಂದು ಪ್ರತಿ ಜೆರಾಕ್ಸ್ ಸಲ್ಲಿಸಬೇಕು.
  2. ಅರ್ಜಿ ಸಲ್ಲಿಸಲು ಸ್ವ ವಿವರ ತಮ್ಮ ಸಾಧನೆ ದಾಖಲೆಗಳನ್ನು ನೀಡಬೇಕು.
  3. “ಪ್ರಜಾ ಭೂಷಣ”-2022 ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಕವಿಗಳು ತಮ್ಮ ಪ್ರಕಟಿತ ಕಥೆ, ಕವನ ಸಂಕಲನ, ಕಾದಂಬರಿ, ನಾಟಕ, ಗಜಲ್ ಗಳ, ಒಂದು ಪ್ರತಿ ಹಾಗೂ ಒಂದು ಪೋಟೋ ಕೃತಿಗಳಿದ್ದರೆ ಒಂದೊಂದು ಕೃತಿ ಸ್ವ ವಿವರದೊಂದಿಗೆ ಕಳುಹಿಸಿಕೊಡತಕ್ಕದ್ದು.

ಅರ್ಜಿಯನ್ನು ಸಲ್ಲಿಸಲು
ಕೊನೆಯ ದಿನಾಂಕ: 15-05-2022

ಕಾರ್ಯಕ್ರಮ ನಡೆಯುವ ಸ್ಥಳ : ರೋಟರಿ ಸಭಾಂಗಣ, ಮೈಸೂರು. ಕಾರ್ಯಕ್ರಮದ ದಿನಾಂಕ ನಿಗದಿ ಮಾಡಿಲ್ಲ ಶೀಘ್ರದಲ್ಲಿ ತಿಳಿಸಲಾಗುವುದು.

ತಮ್ಮ ಅರ್ಜಿಯನ್ನು ಕಳುಹಿಸುವ ವಿಳಾಸ :

ಅಧ್ಯಕ್ಷರು,
ಕರುನಾಡು ಸೇವಾ ಟ್ರಸ್ಟ್,
#767/1ಎ, ಲೇಬರ್ ಕಾಲೋನಿ,
4ನೇ ಕ್ರಾಸ್, ಮಂಡ್ಯ-571401.
ಸಂಪರ್ಕ: 8073947733

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version