ದಿನದ ಸುದ್ದಿ
ಪ್ರಿಯಾಂಕ ರಾಯಭಾರಿ ವಿವಾದ : ಪಾಕ್ ಮನವಿ ತಿರಸ್ಕರಿಸಿದ ವಿಶ್ವಸಂಸ್ಥೆ
ಸುದ್ದಿದಿನ ಡೆಸ್ಕ್ : ಯುನಿಸೆಫ್ ಸೌಹಾರ್ದಯುತ ರಾಯಭಾರಿ ಪ್ರಿಯಾಂಕಾ ಚೋಪ್ರಾ ಅವರನ್ನು ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಪಾಕಿಸ್ತಾನ, ವಿಶ್ವಸಂಸ್ಥೆಗೆ ದೂರು ನೀಡಿತ್ತು. ಪಾಕಿಸ್ತಾನದ ದೂರನ್ನು ವಿಶ್ವಸಂಸ್ಥೆ ತಿರಸ್ಕರಿಸಿದ್ದು, ಪಾಕ್ ಗೆ ತೀವ್ರ ಮುಖಭಂಗವಾಗಿದೆ.
ಪಾಕಿಸ್ತಾನ ಮಾನವ ಹಕ್ಕುಗಳ ಸಚಿವ ಶೀರಿನ್ ಈ ಕುರಿತು ವಿಶ್ವಸಂಸ್ಥೆಗೆ ಪತ್ರ ಬರೆದಿದ್ದರು.
ಕಾಶ್ಮಿರ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರದ ಪರ ಪ್ರಿಯಾಂಕಾ ಟ್ವೀಟ್ ಮಾಡಿ ಬೆಂಬಲಿಸಿದ್ದರು. ಜೊತೆಗೆ ಜೈಹಿಂದ್, ಇಂಡಿಯನ್ ಆರ್ಮಿಫೋರ್ಸ್ ಎಂದು ನಮಸ್ತೆಯ ಎಮೋಜಿಗಳನ್ನು ಹಾಕಿದ್ದರು. ಈ ಕಾರಣದಿಂದ ಪಾಕ್ ವಿಶ್ವಸಂಸ್ಥೆಗೆ ಪ್ರಿಯಾಂಕಾ ಅವರನ್ನು ರಾಯಭಾರಿ ಹುದ್ದೆಯಿಂದ ಕೆಳಗಿಳಿಸುವ ಕುರಿತು ದೂರು ನೀಡಿತ್ತು.
ಪ್ರಿಯಾಂಕಾ ಚೋಪ್ರಾ ಅವರಿಗೆ ವೈಯಕ್ತಿಕ ಅಭಿಪ್ರಾಯಗಳ ಬಗ್ಗೆ ಮಾತನಾಡುವ ಹಕ್ಕಿದೆ ಎಂದು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯಾ ಗುಟರೆಸ್ ಅವರ ವಕ್ತಾರ ಸ್ಟೀಫನ್ ಹುಜಾರಿಕ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.
- ಕೃಪೆ : ಡೆಮಾಕ್ರಟಿಕ್ ಟಿವಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243