ದಿನದ ಸುದ್ದಿ
ಸೆ. 4 ರಂದು ಕನ್ನಡ ಸಾಂಸ್ಕೃತಿಕ ಗತವೈಭವ ಸಂಸ್ಥೆಯಿಂದ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ
ಸುದ್ದಿದಿನ, ದಾವಣಗೆರೆ : ಕನ್ನಡ ಸಾಂಸ್ಕೃತಿಕ ಗತವೈಭವ ಸಂಸ್ಥೆ(ರಿ)ಯು ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ & ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಥಾ ಸಂಕಲನ ಮತ್ತು ಕಾದಂಬರಿಗಳಿಗೆ ಕೊಡಮಾಡುವ ಪ್ರಶಸ್ತಿ ಗಳಿಗಾಗಿ 2020-21ರಲ್ಲಿ ಪ್ರಕಟವಾದ ಕೃತಿಗಳನ್ನು ಅಹ್ವಾನಿಸಲಾಗಿತ್ತು.
ಅದರ ಪ್ರತಿಯಾಗಿ 46 ಕಥಾ ಸಂಕಲನಗಳು, 21 ಕಾದಂಬರಿಗಳು ಸ್ಪರ್ಧೆಗೆ ಬಂದಿದ್ದವು.ಆಯ್ಕೆ ಸಮಿತಿಯು ಎರಡು ಸುತ್ತಿನ ಆಯ್ಕೆ ಪ್ರಕ್ರಿಯೆ ಮಾಡಿದ್ದು. ಅಂತಿಮ ಸುತ್ತಿನಲ್ಲಿ 3 ಕಾದಂಬರಿ 2 ಕಥಾ ಸಂಕಲನಗಳನ್ನು ಆಯ್ಕೆ ಮಾಡಲಾಗಿತ್ತು.
ಅಂತಿಮವಾಗಿ ಅಕ್ಬರ್ ಕಾಲಿಮಿರ್ಚಿಯವರು ಹೆಣದ ದಿಬ್ಬ ಕಥಾ ಸಂಕಲನದಲ್ಲಿ ಪ್ರಾದೇಶಿಕ ಭಾಷಿಕ ಸೊಗಡು, ಸಾಮನ್ಯ ಜೀವನೋತ್ಸದ ಪಾಠಗಳನ್ನು ಬಳಸಿಕೊಂಡು ಉತ್ತಮ ತಂತ್ರಗಾರಿಕೆಯದ ಕಥೆ ಹೆಣೆದಿರುವುದರಿಂದ ಅವರ ಕೃತಿಗೆ 2021 ನೆಯ ಸಾಲಿನ ಅಝಾದ ಕಥಾ ಸಾಧಕ ಪ್ರಶಸ್ತಿ, ಕಾದಂಬರಿಯ ಅಂತಿಮ ಸುತ್ತಿನ ಆಯ್ಕೆಯಲ್ಲಿ ಓಮನ್ ದೇಶದಲ್ಲಿ ವೈದ್ಯಕೀಯ ವೃತ್ತಿ ಮಾಡುತ್ತಾ,ಸಾಹಿತ್ಯ ಕೃತಿಯಲ್ಲಿ ತೊಡಗಿದ ಡಾ.ನಾಗರಾಜ ಬಿ ಜಿ ಅವರು ಮಾಯಾಜಿಂಕೆ ಕಾದಂಬರಿಯಲ್ಲಿ ಪ್ರಾದೇಶಿಕತೆ, ಸರಳಜೀವನದ ನಿತ್ಯಪಾಠಗಳನ್ನು ವಿಶೇಷ ತಂತ್ರಗಾರಿಕೆಯಲ್ಲಿ ಹಣೆದಿರುವುದರಿಂದ ಈ ಕೃತಿಗೆ ಅಝಾದ ವಾರ್ಷಿಕ ಸಾಧಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಆಗಸ್ಟ್ 4 ರಂದು ದಾವಣಗೆರೆಯ ಕನ್ನಡ ಕುವೆಂಪು ಭವನದಲ್ಲಿ ನಡೆಯುವ ಕನ್ನಡ ಸಾಂಸ್ಕೃತಿಕ ಗತವೈಭವ ಸಂಸ್ಥೆಯ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು ಎಂದು ಕನ್ನಡ ಸಾಂಸ್ಕೃತಿಕ ಗತವೈಭವ ಸಂಸ್ಥೆಯ ಸಂಸ್ಥಾಪಕರು & ಸರ್ವ ಸದಸ್ಯರ ಸಮಿತಿ ಪತ್ರಿಕಾ ವರದಿ ಮಾಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243