ದಿನದ ಸುದ್ದಿ
ಅಲೆಮಾರಿ ಸಮುದಾಯಗಳ ಚಳವಳಿ : ಪೂರ್ವಭಾವಿ ಸಭೆ
ಸುದ್ದಿದಿನ, ಡೆಸ್ಕ್ : ಅಲೆಮಾರಿಗಳ ವಿಚಾರಗಳಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಅಲೆಮಾರಿಗಳನ್ನು ಸರ್ಕಾರವು ಕಡೆಗಣಿಸಿರುವ ಕುರಿತು ಮುಂದಿನ ದಿನಗಳಲ್ಲಿ ಅಲೆಮಾರಿ ಸಮುದಾಯಗಳ ಚಳವಳಿ ಮಾಡಲು ಪೂರ್ವಭಾವಿ ಸಭೆಯನ್ನು ಚಲನಚಿತ್ರ ನಟರಾದ ಚೇತನ್ ಅಹಿಂಸಾ ಅವರ ಬೆಂಗಳೂರಿನ ನಿವಾಸದಲ್ಲಿ ಸಿಳ್ಳೆಕ್ಯಾತ ಸಮುದಾಯ ಚನ್ನದಾಸರು ಕೊರಮ ಕೊರಚ ದೊಂಬರು ಹಂದಿಜೋಗಿ ಬುಡ್ಗಜಂಗಮ ಸುಡುಗಾಡು ಸಿದ್ಧ ಎಲ್ಲ ರಾಜ್ಯದ ನಾಯಕರುಗಳು ಸೇರಿ ಸಭೆಯನ್ನು ಭಾನುವಾರ ನಡೆಸಲಾಯಿತು.
ಸಭೆಯಲ್ಲಿ ಸಿಳ್ಳೇಕ್ಯಾತ ಸಮುದಾಯದ ರಾಜ್ಯಾಧ್ಯಕ್ಷರಾದ ಬಿಎಚ್ ಮಂಜುನಾಥ್, ಕುಳುವ ಮಹಾಸಂಘದ ಜಂಟಿ ಕಾರ್ಯದರ್ಶಿಯಾದ ಕಿರಣ್ ಕುಮಾರ್ ಕೊತ್ತಿಗೆರೆ ಹಾಗೂ ಕುಳುವ, ಮಹಾಸಂಘದ ಮಹಿಳಾ ರಾಜ್ಯಾಧ್ಯಕ್ಷರಾದ ಜಯಶೀಲ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ರಾದ ಕೃಷ್ಣಪ್ಪ ರಾಮಪ್ಪ ಹಂದಿ ಜೋಗಿ ಸಮುದಾಯ ,ಬಸವರಾಜ್ ಬುಡುಗ ಜಂಗಮ ಸಮುದಾಯ, ಮುನಿರಾಜು ಸಿಳ್ಳೆಕ್ಯಾತ ಸಮುದಾಯ,ಡಾ॥ ಎ.ಆರ್ ಗೋವಿಂದಸ್ವಾಮಿ ಅಲೆಮಾರಿಗಳ ಹಿತೈಷಿಗಳು ಅಲೆಮಾರಿ ಬುಡಕಟ್ಟು ಮಹಾಸಭಾ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಗಳು, ಚಲನಚಿತ್ರ ನಟರು ಹಾಗೂ ಸಮಾಜ ಸೇವಕರು ಚೇತನ್ ಅಹಿಂಸಾ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243