ದಿನದ ಸುದ್ದಿ
ಪಿಯುಸಿ ಫಲಿತಾಂಶ : ಈ ಬಾರಿಯೂ ಬಾಲಕಿಯರೇ ಮೇಲುಗೈ
ಸುದ್ದಿದಿನ, ಬೆಂಗಳೂರು: ಇಂದು ರಾಜ್ಯ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಎಂದಿನಂತೆ ಈ ವರ್ಷವು ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಶಿಖಾ ಹೇಳಿದ್ದಾರೆ.
ಸೋಮವಾರ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಶಿಖಾ ಅವರು ಪ್ರಕಟಿಸಿ, ಒಟ್ಟಾರೆ ಶೇ.59.56 ಫಲಿತಾಂಶ ಬಂದಿದೆ.. 91.49 ಪ್ರಥಮ ಸ್ಥಾನದಲ್ಲಿ ಉಡಪಿ ಜಿಲ್ಲೆ ಇದೆ. ಎರಡನೇ ಸ್ಥಾನ ದಕ್ಷಿಣ ಕನ್ನಡ ಜಿಲ್ಲೆ , ತೃತೀಯ ಸ್ಥಾನದಲ್ಲಿ ಕೊಡಗು ಮತ್ತು ಚಿಕ್ಕೋಡಿ ಇದೆ. ಎಂದಿನಂತೆ ಈ ವರ್ಷವೂ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. 6,85,713 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 4,08421 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇ 68 ರಷ್ಟು, ವಾಣಿಜ್ಯ ಶೇ 63 ಮತ್ತು ಕಲಾ ವಿಭಾಗದಲ್ಲಿ ಶೇ 45 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದರು. ಮಂಗಳೂರಿನ ಮೂಡಬಿದ್ರಿ ಆಳ್ವಾಸ್ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಓಲ್ಪಿತಾ ಅನ್ಕಿಲ್ಲಾ ಡಿಸೋಜಾ (596) ಅಂಕ ಪಡೆದು, ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗ ಕುಸುಮಾ ಉಜೈನಿ (594) ವಿಜ್ಞಾನ ವಿಭಾಗ ರಜತ್ ಕಶ್ಯಪ್(594)