ದಿನದ ಸುದ್ದಿ
ಪುಲ್ವಾಮಾ ದಾಳಿ : ಸಾವು ಗೆದ್ದು ತವರಿಗೆ ಬಂದ ‘ಯೋಧ’ನಿಗೆ ಅದ್ದೂರಿ ಸ್ವಾಗತ..!
ಸುದ್ದಿದಿನ,ಬೀದರ್: ಪುಲ್ವಾಮಾಲ್ಲಿ ನಡೆದ ಉಗ್ರರ ದಾಳಿಯಲ್ಲಿ ಬೀದರ್ನ ಯೋಧರೊಬ್ಬರು ಸಾವನ್ನು ಗೆದ್ದು ಬಂದಿದ್ದಾರೆ. ಭಾಲ್ಕಿ ತಾಲೂಕಿನ ಸೇವಾಲಾಲ ತಾಂಡದ ಮನೋಹರ್ ರಾಠೋಡ್ ಸಾವನ್ನು ಗೆದ್ದು ಬಂದ ಯೋಧ.
ಮನೋಹರ್ ಇಂದು ತವರೂರಿಗೆ ಆಗಮಿಸಿದ್ದು, ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು.
ಪುಲ್ವಾಮಾ ದಾಳಿ ನಡೆದ ಸಂದರ್ಭದಲ್ಲಿ ಯೋಧ ಮನೋಹರ್, ಬ್ಲಾಸ್ಟ್ ಆದ ಬಸ್ಸಿನ ಹಿಂದಿನ ಬಸ್‌ನಲ್ಲೇ ಇದ್ದರು. ಸ್ಫೋಟದ ಬಳಿಕ 15 ನಿಮಿಷಗಳ ಕಾಲ ಅವರು ಮೂರ್ಛೆ ಹೋಗಿದ್ದರು. ಮೃತದೇಹಗಳ ಜೊತೆ ಯೋಧ ಮನೋಹರ್ ರಾಠೋಡ್‌ರನ್ನ ಹಾಕಲಾಗಿತ್ತು.
ನಂತರ ಅವರ ದೇಹ ಅಲುಗಾಡಿದಾಗ ಮನೋಹರ್ ಬದುಕಿರುವುದು ಗೊತ್ತಾಗಿದೆ. ಬಳಿಕ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಗ್ರರ ದಾಳಿಯನ್ನು ಕಣ್ಣಾರೆ ಕಂಡು ಸಾವಿನ ದವಡೆಯಿಂದ ಸಾವನ್ನೇ ಗೆದ್ದು ಬಂದಿರುವ ಯೋಧ ಮನೋಹರ್ ಇಂದು ತವರೂರಿಗೆ ಆಗಮಿಸಿದ್ರು. ಈ ವೇಳೆ ಮನೋಹರ್ ಅವರಿಗೆ ಶಾಲು ಹೋದಿಸಿ ಗೌರವಿಸಲಾಯಿತು. ಇದಕ್ಕೂ ಮುನ್ನ ಗ್ರಾಮದಲ್ಲಿ ಅದ್ಧೂರಿ ಮೆರವಣಿಗೆ ನಡೆಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9986715401