ದಿನದ ಸುದ್ದಿ

ನಾಲೆಗಳಲ್ಲಿ ಅಕ್ರಮವಾಗಿ ನೀರು ತೆಗೆಯಲು ಬಳಸುತ್ತಿದ್ದ ಪಂಪ್‍ಸೆಟ್ ಗಳ ವಶ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲಾಧಿಕಾರಿಗಳ ನಿರ್ದೇಶನ ಮೇರೆಗೆ ಬೆಳೆಗಳಿಗೆ ಕೊನೆಯ ಹಂತದ ನೀರು ಕೊಡಬೇಕಾಗಿರುವುದರಿಂದ ಭದ್ರಾ ನಾಲೆಗಳಲ್ಲಿ ಅಕ್ರಮವಾಗಿ ಅಳವಡಿಸಿರುವ ಪಂಪ್‍ಸೆಟ್‍ಗಳನ್ನು ತೆರವುಗೊಳಿಸಿ, ಅಂತಹ ಪಂಪ್‍ಸೆಟ್‍ಗಳಿಗೆ ಸರಬರಾಜಾಗುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.

ಗುರುವಾರ ದಾವಣಗೆರೆ ಹೊನ್ನಾಳಿ ರಸ್ತೆಯಲ್ಲಿರುವ ಅರಳೀಪುರ, ಯಲೋದಹಳ್ಳಿ ಹಾಗೂ ಇನ್ನಿತೆರೆ ಪ್ರದೇಶಗಳ ಕಾಲುವೆ, ನಾಲೆಗಳಲ್ಲಿ ಅಕ್ರಮವಾಗಿ ನೀರು ತೆಗೆಯಲು ಬಳಸುತ್ತಿದ್ದ ಪಂಪ್‍ಗಳನ್ನು ತೆರವುಗೊಳಿಸಲಾಗಿದೆ.
ನೀರಾವರಿ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version