ದಿನದ ಸುದ್ದಿ

ಅಂತರ್ರಾಷ್ಟ್ರೀಯ ರೇಬೀಸ್ ದಿನಾಚರಣೆ 2020: ಸಹಯೋಗದೊಂದಿಗೆ ಲಸಿಕೆ ಹಾಕಿಸಿ ತಡೆಗಟ್ಟೋಣ

Published

on

  • ಡಾ||.ಕಮಲೇಶ್ ಕುಮಾರ್ ಕೆ ಎಸ್, ಪಶುವೈದ್ಯಾಧಿಕಾರಿಗಳು, ಶಿವಮೊಗ್ಗ

ರೇಬೀಸ್ (Rabies) ಒಂದು ವೈರಾಣುವಿನಿಂದ (Virus) ಹರಡುವ ಮಾರಕ ಖಾಯಿಲೆಯಾಗಿದ್ದು ಇದರ ತಡೆಗಟ್ಟುವಿಕೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಈ ಭಯಾನಕ ರೋಗವನ್ನು ಸೋಲಿಸುವಲ್ಲಿ ಪ್ರಗತಿಯನ್ನು ಸಾಧಿಸಲು ಈ ದಿನವನ್ನು ವಾರ್ಷಿಕವಾಗಿ ಆಚರಿಸಲಾಗುತ್ತದೆ.

ಮೊಟ್ಟ ಮೊದಲ ರೇಬೀಸ್ ಲಸಿಕೆಯನ್ನು ಅಭಿವೃದ್ಧಿಪಡಿಸಿದ ಫ್ರೆಂಚ್ ರಸಾಯನಶಾಸ್ತ್ರಜ್ಞ (Chemist) ಮತ್ತು ಸೂಕ್ಷ್ಮ ಜೀವಶಾಸ್ತ್ರಜ್ಞ (Microbiologist) ಲೂಯಿಸ್ ಪಾಶ್ಚರ್ (Louis Pasteur) ಅವರ ಮರಣದ ವಾರ್ಷಿಕೋತ್ಸವವನ್ನು ಅಂತರ್ರಾಷ್ಟ್ರೀಯ ರೇಬೀಸ್ ದಿನಾಚರಣೆಯನ್ನಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತದೆ.

ಈ ಬಾರಿ “ಸಹಯೋಗದೊಂದಿಗೆ ಲಸಿಕೆ ಹಾಕಿಸಿ ರೇಬೀಸ್‌ಅನ್ನು ತಡೆಗಟ್ಟೋಣ” (“End rabies collaborate Vaccinate”) ಎಂಬ ವಿಷಯದ ಕುರಿತು ಮಹತ್ವವನ್ನು ನೀಡಲಾಗಿದೆ.

ಇಂದು, ಸುರಕ್ಷಿತ ಮತ್ತು ಪರಿಣಾಮಕಾರಿಯಾದ ಪ್ರಾಣಿ ಮತ್ತು ಮಾನವ ಲಸಿಕೆಗಳು ರೇಬೀಸ್‌ನಿಂದ ಮಾನವ ಹಾಗು ಎಲ್ಲ ಬೆಚ್ಚಗಿನ ರಕ್ತದ ಪ್ರಾಣಿಗಳ ಸಾವುಗಳನ್ನು ತೊಡೆದುಹಾಕಲು ಇರುವ ಪ್ರಮುಖ ಸಾಧನಗಳಾಗಿವೆ, ಆದರೆ ಸಮುದಾಯಗಳು ಪರಿಣಾಮಕಾರಿ ರೇಬೀಸ್ ತಡೆಗಟ್ಟುವಲ್ಲಿ ತೊಡಗಿಸಿಕೊಳ್ಳಲು ಅರಿವು ಪ್ರಮುಖ ಚಾಲಕವಾಗಿದೆ.

ಲಸಿಕೆ ಹಾಕಿಸದೆ ರೇಬೀಸ್ ರೋಗ ಪೀಡಿತವಾಗಿರಿವ ಅಥವಾ ವಾಹಕವಾಗಿರುವ (carrier) ಸಾಕು ಪ್ರಾಣಿಗಳು ಕಚ್ಚುವುದರಿಂದ ಈ ರೋಗ ಅನ್ಯ ಪ್ರಾಣಿಗಳಿಗೆ ಹಾಗು ಮನುಷ್ಯರಿಗೆ ಹರಡುತ್ತದೆ. ಇದನ್ನು ತಡೆಯಲು ಪಶುವೈದ್ಯಕೀಯ ಹಾಗು ಮಾನವ ವೈದ್ಯಕೀಯ ಶಾಸ್ತ್ರದಲ್ಲಿ ಇರುವುದು ಒಂದೇ ಮದ್ದು ಅದುವೇ ರೇಬೀಸ್ ವಿರುದ್ಧ ನಿಮ್ಮ ಹಾಗು ನಿಮ್ಮ ಸಾಕು ಪ್ರಾಣಿಗಳಿಗೆ ಲಸಿಕೆ ಹಾಕಿಸುವುದು. ಈ ರೀತಿ ಮಾಡುವುದರಿಂದ ನಿಮ್ಮ, ಕುಟುಂಬದ ಹಾಗು ನಿಮ್ಮ ಪರಿಸರವನ್ನು ರೇಬೀಸ್ ಮುಕ್ತವನ್ನಾಗಿಸಬಹುದು.

ರೇಬೀಸ್ ವಿರುದ್ಧ ಬೀದಿ ನಾಯಿ ಹಾಗು ಸಾಕು ಪ್ರಾಣಿಗಳನ್ನು ರಕ್ಷಿಸುವುದು ರೇಬೀಸ್ ರೋಗದಿಂದ ನಮ್ಮನ್ನು ಸಂರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ಕೇವಲ 12 ವಾರ ವಯಸ್ಸಿನ ನಾಯಿ ಮರಿಗಳಿಗೆ ಲಸಿಕೆ ಹಾಕಿಸುವ ಕ್ರಮ ಶುರುವಾಗುವುದು, ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶುವೈದ್ಯರನ್ನು ಸಂಪರ್ಕಿಸಿ ನಿಮ್ಮನ್ನು, ನಿಮ್ಮ ಸಾಕು ಪ್ರಾಣಿಗಳನ್ನು, ನಿಮ್ಮ ಪರಿಸರವನ್ನು ರೇಬೀಸ್ ವಿರುದ್ಧ ರಕ್ಷಿಸಿಕೊಳ್ಳಲು ಕೈ ಜೋಡಿಸಿ.

ಡಾ||.ಕಮಲೇಶ್ ಕುಮಾರ್ ಕೆ ಎಸ್
ಪಶುವೈದ್ಯಾಧಿಕಾರಿಗಳು
ಪಶುಚಿಕಿತ್ಸಾಲಯ, ಮತ್ತೂರು,
ಶಿವಮೊಗ್ಗ.
ಈ ಮೇಲ್ : kskamalesh93@gmail.com
ಫೋನ್ : 9164282969

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version