ಸಿನಿ ಸುದ್ದಿ
ತಾಯಿಯ ಪಾತ್ರ ಮಾಡಲ್ಲ ಅಂದ್ರು ನಟಿ ರಾಧಿಕಾ ಪಂಡಿತ್..!
ಸುದ್ದಿದಿನ ಡೆಸ್ಕ್ : ಕಿರುತೆರೆ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದು ದೊಡ್ಡ ಸ್ಟಾರ್‌ಗಳಾಗಿ ಮಿಂಚಿದವರು ಹಲವರು. ಅದರಲ್ಲಿ ನಟಿ ರಾಧಿಕಾ ಪಂಡಿತ್ ಕೂಡ ಒಬ್ಬರು. ಕನ್ನಡ ಚಿತ್ರರಂಗಕ್ಕೆ ನಾಯಕಿ ಆಗಿ ಎಂಟ್ರಿ ಕೊಟ್ಟ ಕೆಲವೇ ಕಡಿಮೆ ಸಮಯದಲ್ಲಿಯೇ ರಾಧಿಕಾ ಪಂಡಿತ್ ಅವರು ಸ್ಟಾರ್ ನಟಿ ಎನಿಸಿಕೊಂಡರು.
ಸದ್ಯ ಬಿಗ್ ಸ್ಕ್ರೀನ್‌ನಿಂದ ದೂರ ಉಳಿದಿರುವ ನಟಿ ರಾಧಿಕಾ ಪಂಡಿತ್ ಅವರಿಗೆ ಬೇಡಿಕೆ ಕಡಿಮೆ ಆಗಿಲ್ಲ. ರಾಧಿಕಾ ಪಂಡಿತ್ ಅವರು ಮದುವೆ ಬಳಿಕ ತಮ್ಮ ವೈಯಕ್ತಿಕ ಜೀವನದ ಕಡೆಗೆ ಹೆಚ್ಚು ಗಮನ ಕೊಟ್ಟಿದ್ದಾರೆ. ಮನೆ ಮಕ್ಕಳು ಅಂತಾ ಸದಾ ಬ್ಯುಸಿ ಆಗಿ ಇರ್ತಾರೆ. ಅವರು ತಮ್ಮ ನಿತ್ಯ ಜೀವನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.
ಇದನ್ನೂ ಓದಿ | ಒಡಹುಟ್ಟಿದ ಅಕ್ಕನನ್ನೇ ಬೆಂಕಿಹಚ್ಚಿ ಸುಟ್ಟು ಕೊಂದ ತಂಗಿ..!
ಕನ್ನಡದ ‘ಡಿಎನ್ಎ’ ಸಿನಿಮಾ ತಂಡ ರಾಧಿಕಾ ಪಂಡಿತ್ ಅವರನ್ನು ಅರಸಿ ಬಂದಿತ್ತು. ಈ ಚಿತ್ರದಲ್ಲಿ ತಾಯಿ ಮಗು ಪಾತ್ರ ಪ್ರಮುಖವಾಗಿದ್ದು. ಹಾಗಾಗಿ ಈ ಸಿನಿಮಾದಲ್ಲಿ ತಾಯಿಯ ಪಾತ್ರ ಮಾಡುವಂತೆ ರಾಧಿಕಾ ಅವರ ಬಳಿ ಕೇಳಲಾಗಿದೆ. ಈ ಕಥೆ ರಾಧಿಕಾ ಪಂಡಿತ್ ಅವರಿಗೆ ತುಂಬಾನೆ ಇಷ್ಟ ಆಗಿತ್ತಂತೆ. ಆದರೆ ತಾಯಿಯ ಪಾತ್ರದಲ್ಲಿ ನಟಿಸುವುದಿಲ್ಲ ಎಂದು ರಾಧಿಕಾ ಪಂಡಿತ್ ಅವರು ಹೇಳಿದರು ಎನ್ನುವುದು ಬಹಿರಂಗ ಆಗಿದೆ. ಈ ಚಿತ್ರದಲ್ಲಿ ರಾಧಿಕಾ ಪಂಡಿತ್ ಮಾಡಬೇಕಿದ್ದ, ತಾಯಿಯ ಪಾತ್ರವನ್ನು ನಟಿ ‘ಎಸ್ತರ್ ನರೋನಾ’ ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243