ದಿನದ ಸುದ್ದಿ
ದಾವಣಗೆರೆ | ಮರ ಕಡಿದ ಮನೆ ಮಾಲೀಕನಿಗೆ ಬಿತ್ತು ದಂಡ..!
ಸುದ್ದಿದಿನ,ದಾವಣಗೆರೆ: ಮನೆಯ ಮುಂದೆ ಎಲೆಗಳು ಉದುರುತ್ತವೆ ಎಂದು ಫುಟ್‌ಪಾತ್ ಮೇಲೆ ಇದ್ದ ಕಾಡು ಬಾದಾಮಿ ಮರ ಕಡಿದಿದ್ದಕ್ಕೆ ಮನೆ ಮಾಲೀಕನಿಗೆ ಅರಣ್ಯ ಇಲಾಖೆ 5 ಸಾವಿರ ದಂಡ ವಿಧಿಸಿದೆ.
ಈ ಮರ ಲಕ್ಷ್ಮೀಪ್ಲೋರ್ ಬಳಿಯ ಪುಟ್‌ಪಾತ್ ಬಳಿ ಜನರಿಗೆ ನೆರಳು ಕೊಡುವ ಜತೆಗೆ ಪಾದಚಾರಿಗಳಿಗೂ ಉಪಯೋಗವಾಗುತ್ತಿತ್ತು. ವಿಷಯ ತಿಳಿದ ಪರಿಸರ ಹೋರಾಟಗಾರರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರು. ಇದರ ಅನ್ವಯ ಅರಣ್ಯ ಇಲಾಖೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243