ದಿನದ ಸುದ್ದಿ

ಬ್ರೇಕಿಂಗ್ : ಪತ್ರಕರ್ತ ‘ರವಿ ಬೆಳಗೆರೆಗೆ’ ಹೃದಯಾಘಾತ !

Published

on

ಸುದ್ದಿದಿನ, ಬೆಂಗಳೂರು : ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ, ಪತ್ರಕರ್ತ ರವಿಬೆಳಗೆರೆ ಅವರಿಗೆ ಶುಕ್ರವಾರ ರಾತ್ರಿ ಲಘು ಹೃದಯಾಘಾತವಾಗಿದ್ದು, ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರವಿ ಬೆಳಗೆರೆ ಅವರನ್ನು ನೋಡಲು ಆಪ್ತರು ಹಾಗೂ ಕುಟುಂಬದ ಸದಸ್ಯರು ಆಸ್ಪತ್ರೆಗೆ ಆಗಮಿಸಿದ್ದಾರೆ. ಸದ್ಯ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡುಕೊಂಡಿದ್ದಾರೆಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪತ್ರಕರ್ತ ರವಿ ಬೆಳಗೆರೆ ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸುಪಾರಿ ಪ್ರಕರಣ ಸಂದರ್ಭದಲ್ಲಿ ಕೂಡ ಪೊಲೀಸರು ಅವರನ್ನು ಬಂಧಿಸಿದ್ದ ಸಂದರ್ಭದಲ್ಲಿ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆದಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version