ಲೈಫ್ ಸ್ಟೈಲ್
‘ಗುಂಡು ಬದನೇಕಾಯಿ ಪಲ್ಯ’ ಮಾಡಿ ನೋಡಿ..!
- ಶಶಿಕಲಾ ಸುನೀಲ್
ಬೇಕಾಗುವ ಸಾಮಗ್ರಿಗಳು
- ಗುಂಡು ಬದನೇಕಾಯಿ – 2
- ಈರುಳ್ಳಿ – 1
- ಹಸಿಮೆಣಸಿನಕಾಯಿ – 2
- ಟೊಮೇಟೊ – 1
- ಸಾಂಬಾರ್ ಪುಡಿ – ಅರ್ಧ ಚಮಚ
- ಅರಿಶಿನಪುಡಿ – ಕಾಲು ಚಮಚ
- ಗರಂ ಮಸಾಲಾ – ಅರ್ಧ ಚಮಚ
- ಕಾಯಿತುರಿ – 3 ಚಮಚ
- ಕಡಲೆಕಾಯಿಬೀಜ – 2 ಚಮಚ
- ಸಾಸಿವೆ, ಕಡ್ಲೆಬೇಳೆ, ಜೀರಿಗೆ
- ಎಣ್ಣೆ – 2 ಚಮಚ
- ಉಪ್ಪು ರುಚಿಗೆ
- ಕೊತ್ತಂಬರಿಸೊಪ್ಪು
ಮಾಡುವ ವಿಧಾನ
ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ, ಕಡಲೆಬೇಳೆ, ಜೀರಿಗೆ ಹಾಕಿ ನಂತರ ಅದಕ್ಕೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಸ್ವಲ್ಪ ಬಾಡಿದ ನಂತರ ಹೆಚ್ಚಿದ ಬದನೇಕಾಯಿ ಹಾಕಿ ಫ್ರೈ ಮಾಡಿ ತಳ ಹಿಡಿಯದಂತೆ ಸ್ವಲ್ಪ ನೀರು ಹಾಕಿ ಬೇಯಲು ಬಿಡಿ. ನಂತರ ಅದಕ್ಕೆ ಹಚ್ಚಿದ ಟೊಮೇಟೊ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಫ್ರೈ ಮಾಡಿ. ಅದಕ್ಕೆ ಸಾಂಬಾರ್ ಪುಡಿ, ಅರಿಶಿನಪುಡಿ, ಗರಂ ಮಸಾಲಾ, ಕಾಯಿತುರಿ ಹಾಕಿ.ಎಲ್ಲಾ ಬೆಂದ ನಂತರ ಹುರಿದು ಪುಡಿ ಮಾಡಿದ ಕಡಲೆಕಾಯಿಬೀಜ, ಕೊತ್ತಂಬರಿಸೊಪ್ಪು ಹಾಕಿ ಸವಿಯಿರಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243