ಲೈಫ್ ಸ್ಟೈಲ್

ರೆಸಿಪಿ | ಫುಲ್ಕಾ ಜೊತೆ ಸವಿಯಲು ಬಲು‌ ಚಂದ ಈ‌ ‘ಒಣ ಬಟಾಣಿ ಕರ್ರಿ’..!

Published

on

  • ಶಶಿಕಲಾ ಸುನೀಲ್, ಗಾಯಕಿ, ಬೆಂಗಳೂರು

ಬೇಕಾಗುವ ಸಾಮಗ್ರಿಗಳು

  1. ಒಣ ಬಟಾಣಿ – 1 ಕಪ್
  2. ಆಲೂಗಡ್ಡೆ – 1
  3. ಈರುಳ್ಳಿ – 2
  4. ಶುಂಠಿ ಬೆಳ್ಳುಳ್ಳಿ – 1 ಚಮಚ
  5. ಅರಿಶಿನ – ಅರ್ಧ ಚಮಚ
  6. ಅಚ್ಚಖಾರದಪುಡಿ – ಅರ್ಧ ಚಮಚ
  7. ಗರಂ ಮಸಾಲ – ಅರ್ಧ ಚಮಚ
  8. ಚನ್ನಾಮಸಾಲಾಪುಡಿ – ಅರ್ಧ ಚಮಚ
  9. ಟೊಮ್ಯಾಟೋ – 1
  10. ಎಣ್ಣೆ – 2 ಚಮಚ
  11. ಜೀರಿಗೆ – 1 ಚಮಚ
  12. ಕಸೂರಿ ಮೆಥಿ – 1 ಚಮಚ
  13. ಚಕ್ಕೆ – 1 ಇಂಚು
  14. ಪುಲಾವ್ ಎಲೆ – 1
  15. ನಿಂಬೆ ರಸ – ರುಚಿಗೆ
  16. ಉಪ್ಪು – ರುಚಿಗೆ

ಮಾಡುವ ವಿಧಾನ

ಒಣ ಬಟಾಣಿಯನ್ನು 8 ಗಂಟೆ ನೆನಸಿ. ಕುಕ್ಕರ್ ನಲ್ಲಿ ಬಟಾಣಿ ಹಾಗೂ ಆಲೂಗಡ್ಡೆಯನ್ನು ಹಾಕಿ, ಚಕ್ಕೆ,ಪುಲಾವ್ ಎಲೆ, ಸ್ವಲ್ಪ ಉಪ್ಪು ಹಾಕಿ 5 ವಿಶೆಲ್ ಕೂಗಿಸಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಜೀರಿಗೆ ಹಸಿಮೆಣಸಿನಕಾಯಿ, ಈರುಳ್ಳಿ ಹಾಕಿ ಫ್ರೈ ಮಾಡಿ.ಮಿಕ್ಸಿ ಜಾರಿಗೆ 1 ಈರುಳ್ಳಿ ಮತ್ತು ಟೊಮ್ಯಾಟೋ ಹಾಕಿ ರುಬ್ಬಿ ಒಗ್ಗರಣೆಗೆ ಹಾಕಿ.

ಎಲ್ಲಾ ಫ್ರೈ ಮಾಡಿದ ನಂತರ ಅರಿಶಿನಪುಡಿ, ಗರಂ ಮಸಾಲಾ, ಅಚ್ಚಖಾರದಪುಡಿ, ಚನ್ನಾಮಸಾಲಾಪುಡಿ ಹಾಕಿ.ಬೆಂದ ಬಟಾಣಿ ಹಾಕಿ. ಆಲೂಗಡ್ಡೆಯನ್ನು ಮ್ಯಾಷ್ ಮಾಡಿ ಹಾಕಿ ರುಚಿಗೆ ಉಪ್ಪು ಹಾಕಿ ಚೆನ್ನಾಗಿ ಬೇಯಿಸಿ. ಕಸೂರಿಮೇಥಿ, ಕೊತ್ತಂಬರಿ ಸೊಪ್ಪು ಹಾಕಿ. ನಿಂಬೆರಸ ಬೆರೆಸಿ ಸವಿಯಿರಿ. ಚಪಾತಿ, ಫುಲ್ಕಾ ಜೊತೆ ಸವಿಯಲು ಚಂದ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version