ಲೈಫ್ ಸ್ಟೈಲ್

ರೆಸಿಪಿ | ಸೌತೆಕಾಯಿ ರೊಟ್ಟಿ, ಬಲು‌ ರುಚಿ..!

Published

on

ಸೌತೆಕಾಯಿಯನ್ನು ನಾವು ಕೋಸಂಬರಿ ಮಾಡಿ ಇಲ್ಲವೇ ಹಾಗೆ ಸಲಾಡ್ ಮಾಡಿ ತಿನ್ನುತ್ತೇವೆ. ಸೌತೆಕಾಯಿಯ ಉಪಯೋಗಗಳು ಈಗಾಗಲೇ ಎಲ್ಲರಿಗೂ ತಿಳಿದಿದೆ. ಈ ಸೌತೆಕಾಯಿಯನ್ನು ಇನ್ನೂ ಹಲವು ಬಗ್ಗೆಯಾಗಿ ಉಪಯೋಗ ಮಾಡ ಬಹುದು. ಅದರಲ್ಲಿ ಸೌತೆಕಾಯಿ ರೊಟ್ಟಿ ಕೂಡ ಒಂದು. ಸೌತೆಕಾಯಿ ಬಳಸಿ ರೊಟ್ಟಿ ಮಾಡುತ್ತಾರ ಅನ್ನುತ್ತಾರೆ ಎಲ್ಲಾ. ಹೌದು ಅದು ರುಚುಯಾಗಿಯೂ ಕೂಡ ಇರುತ್ತದೆ. ಅರೋಗ್ಯವಾದ, ರುಚಿಕರವಾದ, ಸುಲಭವಾಗಿ ರೊಟ್ಟಿ ಹೇಗೆ ಮಾಡುವುದು ಮುಂದೆ ತಿಳಿಯೋಣ.

ಸೌತೆಕಾಯಿ ರೊಟ್ಟಿ ಮಾಡಲು ಬೇಕಾದ ಸಾಮಗ್ರಿಗಳು

  • ಅಕ್ಕಿ ಹಿಟ್ಟು-2 ಬಟಲು
  • ದೊಡ್ಡ ಈರುಳ್ಳಿ-2
  • ಹಸಿರು ಮೆಣಸಿನಕಾಯಿ
  • ಸೌತೆಕಾಯಿ-1
  • ನೆನೆಸಿದ ಕಡಲೆ ಬೆಳೆ ಸ್ವಲ್ಪ
  • ಜಿರಿಗೆ ಸ್ವಲ್ಪ
  • ರುಚಿಗೆ ಉಪ್ಪು

ಮಾಡುವ ವಿಧಾನ

ಸೌತೆಕಾಯಿಯ ಸಿಪ್ಪೆ ತೆಗೆದು ಸಣ್ಣಗೆ ತುರಿದು ಕೊಳ್ಳಬೇಕು. ಈರುಳ್ಳಿ ಹಾಗು ಮೆಣಸಿನಕಾಯಿಯನ್ನು ಸಣ್ಣಗೆ ಹೆಚ್ಚಿ ಕೊಳ್ಳಬೇಕು. ನೆನೆಸಿದ ಕಡಲೆ ಬೇಳೆ, ಜೀರಿಗೆ ಮತ್ತು ಉಪ್ಪು, ಎಲ್ಲವನ್ನೂ ಅಕ್ಕಿ ಹಿಟ್ಟಿನೊಂದಿಗೆ ಸೇರಿಸಿ ರೊಟ್ಟಿಯ ಹದಕ್ಕೆ ಕಲಸ ಬೇಕು. ನಂತರ ರೊಟ್ಟಿಯನ್ನು ಲಟ್ಟಿಸಿ ಕಾದ ಹಂಚಿನ ಮೇಲೆ ಹಾಕಿ ಸ್ವಲ್ಪ ಎಣ್ಣೆ ಹಾಕಿ ಬೇಯಿಸಿ. ಇದನ್ನು ಬಿಸಿಯಾಗಿ ಕಾಯಿ ಚಟ್ನಿ ಜೊತೆ ಸವಿಯಲು ಚಂದ.

Trending

Exit mobile version