ದಿನದ ಸುದ್ದಿ

ರೆಡ್ ಬಸ್ ಭಾರತದಾದ್ಯಂತ ಉತ್ತಮ ಸೇವಾ ಮನೋಭಾವದ ಗುರಿಯೊಂದಿಗೆ ಈಗ ’ರೆಡ್ ರೇಲ್’ ಆರಂಭ

Published

on


  • ಭಾರತದಲ್ಲಿ ಹೆಚ್ಚುತ್ತಿರುವ ಇಂಟರ್ ನೆಟ್ ಬಳಕೆದಾರರಿಗೆ ಟ್ರೈನ್ ಪ್ರಯಾಣ ಬುಕ್ ಮಾಡಲು ಸರಳವಾದ, ಶೀಘ್ರವಾದ ಮತ್ತು ಹೆಚ್ಚು ಪರಿಣಾಮಕಾರಿಯಾದ ವಿಧಾನವನ್ನು ನೀಡುತ್ತಿದೆ.
  • ಬಳಕೆದಾರರಿಗೆ ತಮ್ಮ ಮಾತೃ ಬಾಷೆಯಲ್ಲಿ ಪ್ರಯಾಣ ಬುಕ್ ಮಾಡಲು ಅನುಕೂಲವಾಗುವಂತೆ ಪ್ರಮುಖ ಭಾರತೀಯ ಭಾಷೆಗಳಲ್ಲಿ ಶೀಘ್ರವೇ ಆ್ಯಪ್ ಬಿಡುಗಡೆ ಮಾಡಲು ಯೋಜಿಸಿದೆ.

ಸುದ್ದಿದಿನ ಡೆಸ್ಕ್ : ಮೇಕ್ ಮೈ ಟ್ರ್ಪ್ ಗ್ರೂಪ್ ಕಂಪನಿಯ ಮತ್ತು ವಿಶ್ವದ ಅತಿದೊಡ್ಡ ಅಂತರ್ ನಗರ ಬಸ್ ಟಿಕೆಟಿಂಗ್ ಅಪ್ಲಿಕೇಶನ್ ಆಗಿರುವ ರೆಡ್ ಬಸ್, ಇಂದು ದೇಶಾದ್ಯಂತ ಲಕ್ಷಾಂತರ ಟ್ರೈನ್ ಪ್ರಯಾಣಿಕರ ಆನ್ ಲೈನ್ ಪ್ರಯಾಣ ಬುಕ್ಕಿಂಗ್ ಅನುಭವವನ್ನು ಸಮೃದ್ಧಗೊಳಿಸುವ ಉದ್ದೇಶದೊಂದಿಗೆ ಸ್ವತಂತ್ರ ಲೈಟ್- ಆ್ಯಪ್ ’ರೆಡ್ ರೈಲ್’ ಆರಂಭಿಸುವ ಬಗ್ಗೆ ಘೋಷಿಸಿದೆ.

ರೆಡ್ ರೈಲ್ ಕಳೆದ ವರ್ಷಾಂತ್ಯದಲ್ಲಿ ಇನ್- ಆ್ಯಪ್ ವೈಶಿಷ್ಟ್ಯದೊಂದಿಗೆ ಆರಂಭವಾಗಿದ್ದು, ಈ ಹೊಸ ಸ್ವತಂತ್ರ ಅವತಾರದಲ್ಲಿ, ಇದು ಪ್ರವೇಶ ಹಂತದ ಆ್ಯಂಡ್ರಾಯ್ಡ್ ಓಎಸ್ ಸ್ಮಾರ್ಟ್ ಫೋನ್ ಸೇರಿದಂತೆ ಎಲ್ಲಾ ಮೊಬೈಲ್ ಸಾಧನಗಳಲ್ಲಿ ಲಭ್ಯವಾಗಲಿದೆ.

ಆ್ಯಪ್ ಅನ್ನು ದೇಶಾದ್ಯಂತ ಇರುವ ಬಳಕೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಉದಾಹರಣೆಗೆ, ಇದು ಸುಗಮವಾಗಿ ಕಾರ್ಯ ನಿರ್ವಹಿಸುತ್ತದೆ, ಮತ್ತು ಐಆರ್‍ಸಿಟಿಸಿ ಟ್ರೈನ್ ಟಿಕೆಟ್ ಗಳನ್ನು ಕಡಿಮೆ ಇಂಟರ್ನೆಟ್ ಬ್ಯಾಂಡ್ ವಿಡ್ತ್ ಇರುವ ಸ್ಥಳಗಳಿಂದ, ಕಡಿಮೆ ಮೆಮೊರಿ ಕಾನ್ಫಿಗರೇಶನ್ ಹೊಂದಿರುವ ಮತ್ತು ಹಳೆಯ ಆ್ಯಂಡ್ರಾಯ್ಡ್ ಆವೃತ್ತಿಗಳಿಂದಲೂ ಬುಕ್ ಮಾಡಲು ಅವಕಾಶ ನೀಡುತ್ತದೆ.

ಪ್ರಸ್ತುತ ಇಂಗ್ಲೀಷ್ ನಲ್ಲಿ ಆರಂಭವಾಗಿರುವ, ರೆಡ್ ರೈಲ್ ಶೀಘ್ರವೇ ಪ್ರಮುಖ ಭಾರತೀಯ ಭಾಷೆಗಳಲ್ಲಿ ಲಭ್ಯವಾಗಲಿದ್ದು, ಇದರಿಂದಾಗಿ ಬಳಕೆದಾರರು ತಮ್ಮ ಮಾತೃಭಾಷೆಯಲ್ಲಿ ಪ್ರಯಾಣ ಬುಕ್ ಮಾಡಬಹುದಾಗಿದೆ. ಇದರೊಂದಿಗೆ, ಪ್ರಯಾಣಿಕರ ಅನುಕೂಲಕ್ಕೆ ಅನುಗುಣವಾಗಿ ಆ್ಯಪ್ ಯುಪಿಐ ಪಾವತಿಗಳು ಮತ್ತು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್ ನಂತಹ ವಿವಿಧ ಗೇಟ್ ವೇಗಳಲ್ಲೂ ಲಭ್ಯವಾಗಲಿದೆ.

ಆನ್ ಲೈನ್ ಟ್ರೈನ್ ಬುಕ್ಕಿಂಗ್ ವಲಯದೊಳಗಿನ ಇದರ ಸ್ಥಾನ ಮತ್ತು ಅಸ್ತಿತ್ವವನ್ನು ಮತ್ತಷ್ಟು ದೃಢಗೊಳಿಸುವ ಬಗ್ಗೆ ತಮ್ಮ ಆಲೋಚನೆಗಳನ್ನು ವಿನಿಮಯ ಮಾಡಿದ, ಮೇಕ್ ಮೈ ಟ್ರಿಪ್ ನ ಸಹ-ಸಂಸ್ಥಾಪಕ ಮತ್ತು ಸಮೂಹ ಸಿಇಓ ರಾಜೇಶ್ ಮಗಾವ್ ಹೀಗೆ ಹೇಳಿದ್ದಾರೆ, “ಮೇಕ್ ಮೈ ಟ್ರಿಪ್ ಪ್ರಯಾಣದ ಬುಕ್ಕಿಂಗ್ ಅನ್ನು ಆನ್ ಲೈನ್ ಗೊಳಿಸುವ ಮೂಲಕ ಹೆಚ್ಚು ವಿಶ್ವಾಸಾರ್ಹ ಮತ್ತು ಸುಗಮ ಅನುಭವ ನೀಡುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಮುಂಚೂಣಿಯಲ್ಲಿದೆ.

ಹಗುರ ಮತ್ತು ವೇಗವಾದ ಅಪ್ಲಿಕೇಶನ್ ಆಗಿರುವ ಸ್ವತಂತ್ರ ರೆಡ್ ರೈಲ್ ಆರಂಭಿಸುವ ಮೂಲಕ, ಪ್ರತಿದಿನ ಲಕ್ಷಾಂತರ ಗ್ರಾಹಕರಿಗೆ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಅನುಭವವನ್ನು ಹೊಸದಾಗಿಸುವ ದಿಕ್ಕಿನಲ್ಲಿ ಮತ್ತೊಂದು ಅಭಿಯಾನವಾಗಿದೆ,” ಎಂದಿದ್ದಾರೆ.

“ಅವಕಾಶವಿರುವ ಸಮಯದಲ್ಲಿ ಸ್ವತಂತ್ರ ರೆಡ್ ರೈಲ್ ಆ್ಯಪ್ ಬಿಡುಗಡೆ ಬಸ್ ಮತ್ತು ಟ್ರೈನ್ ವಲಯಗಳಲ್ಲಿ ಕಳೆದ 2 ವರ್ಷಗಳಿಂದ ಡಿಜಿಟಲ್ ಅಳವಡಿಕೆಯನ್ನು ಸ್ಥಿರವಾಗಿ ಹೆಚ್ಚಿಸಿದೆ. ಆನ್ ಲೈನ್ ಟ್ರೈನ್ ಟಿಕೆಟ್ ಬುಕ್ಕಿಂಗ್ ಮಾರುಕಟ್ಟೆ, ದೇಶಾದ್ಯಂತ ಪ್ರತಿದಿನ ಲಕ್ಷಾಂತರ ವಹಿವಾಟಿನೊಂದಿಗೆ, ಬೃಹತ್ ಅವಕಾಶವನ್ನು ನೀಡುತ್ತಿದೆ. ಭಾರತದಾದ್ಯಂತ ಆನ್ ಲೈನ್ ಟ್ರೈನ್ ಟಿಕೆಟ್ ಬೆಳವಣಿಗೆಗೆ ಹೆಚ್ಚಿನ ಬೇಡಿಕೆಯಿರುವುದರಿದ, ಕಡಿಮೆ ಇಂಟರ್ ನೆಟ್ ಬ್ಯಾಂಡ್ ವಿಡ್ತ್ ಅಥವಾ ಫೋನ್ ಸಾಮರ್ಥ್ಯ ಕಡಿಮೆ ಇರುವ ಸ್ಥಳಗಳಲ್ಲಿ ವಿಶೇಷವಾಗಿ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಅನುಭವ ಸುಧಾರಿಸುವುದು ತೀವ್ರ ಅಗತ್ಯವಾಗಿದೆ.

ಈ ವಿಷಯದಲ್ಲಿ ರೆಡ್ ರೈಲ್ ಬೃಹತ್ ವ್ಯತ್ಯಾಸವನ್ನೇ ತಂದಿದ್ದು, ಇತರ ಬಳಕೆದಾರ ಸ್ನೇಹಿ ವೈಶಿಷ್ಟ್ಯಗಳ ಹೊರತಾಗಿ ಲೈಟ್ ಆ್ಯಪ್ ಆಗಿದೆ ಮತ್ತು ಇಂತಹ ಸಮಸ್ಯೆಗಳನ್ನು ವ್ಯಾಪಕವಾಗಿ ಪರಿಹರಿಸುವ ಉದ್ದೇಶವನ್ನು ಹೊಂದಿದೆ,” ಎಂದು ರೆಡ್ ಬಸ್ ಸಿಇಓ ಪ್ರಕಾಶ್ ಸಂಗಂ ಹೇಳಿದ್ದಾರೆ. “ಬಸ್ ಮತ್ತು ಟ್ರೈನ್ ಪ್ರಯಾಣಿಕರಲ್ಲಿ 65% ನಷ್ಟು ಹೆಚ್ಚಳವಾಗಿರುವುದು ನಾವು ರೆಡ್ ರೈಲ್ ಅನ್ನು ಮುಂಚೂಣಿಗೆ ತರಲು ರೆಡ್ ಬಸ್ ನ ಹೆಚ್ಚಿನ ಬಳಕೆದಾರರ ಅಡಿಪಾಯವನ್ನು ಪೋಷಿಸಲು ಪ್ರಯೋಜನಕಾರಿಯಾಗಿದೆ. ನಮ್ಮ ಬಸ್ ಟಿಕೆಟಿಂಗ್ ವೇದಿಕೆ ಈಗಾಗಲೇ ಅಂತರ್ ನಗರ ಬಸ್ ವಲಯದಲ್ಲಿ ಪ್ರಮುಖವಾಗಿ ಮುಂಚೂಣಿಯಲ್ಲಿದ್ದು, ಈಗ ಆನ್ ಲೈನ್ ಟ್ರೈನ್ ವರ್ಗದಲ್ಲೂ ಇದನ್ನು ಮುಂಚೂಣಿಗೆ ತರಲು ಕೆಲಸ ಮಾಡುತ್ತಿದ್ದೇವೆ.”

ರೆಡ್ ರೈಲ್ ಆ್ಯಪ್ ನಲ್ಲಿ ಟಿಕೆಟ್ ಬುಕ್ಕಿಂಗ್ ಮತ್ತು ವೀಕ್ಷಣೆಯೊಂದಿಗೆ, ಗ್ರಾಹಕರು ಟ್ರೈನ್ ನ ಪಿ ಎನ್ ಆರ್ ಖಚಿತತೆ ಸ್ಥಿತಿ ಮತ್ತು ನೇರ ಸ್ಥಳ ಪರೀಕ್ಷಿಸಬಹುದಾಗಿದೆ. ಟಿಕೆಟ್ ಖಚಿತತೆ ಸ್ಥಿತಿಯಲ್ಲಿ ಯಾವುದೇ ವಾಸ್ತವಿಕ ಬದಲಾವಣೆಯಿದ್ದಲ್ಲಿ ಈ ಕುರಿತು ಆ್ಯಪ್ ಬಳಕೆದಾರರಿಗೆ ಅಪ್ ಡೇಟ್ ನೀಡುತ್ತದೆ.

ಇದರೊಂದಿಗೆ ಪ್ರಯಾಣಿಕರು ಈಗ ಐಆರ್‍ಸಿಟಿಸಿ ಟ್ರೈನ್ ಟಿಕೆಟ್ ಗಳನ್ನು ರೆಡ್ ರೈಲ್ ನಲ್ಲಿ ಬುಕ್ ಮಾಡುವ ಮೂಲಕ “LOVERAIL” (ಲವ್ ರೈಲ್) ಕೂಪನ್ ಕೋಡ್ ಬಳಸಿ ರೂ 50 ರವರೆಗೆ 10% ರಿಯಾಯಿತಿ ಪಡೆಯಬಹುದು ಮತ್ತು ಯಾವುದೇ ಸೇವಾ ಶುಲ್ಕ ಮತ್ತು ಪಾವತಿ ಗೇಟ್ ವೇ ಶುಲ್ಕಗಳಿಲ್ಲದ ಸೌಲಭ್ಯಗಳನ್ನೂ ಆನಂದಿಸಬಹುದು. ಈ ಪರಿಚಯಾತ್ಮಕ ಕೊಡುಗೆ ಏಪ್ರಿಲ್ 20, 2022 ರವರೆಗೆ ಚಾಲ್ತಿಯಲ್ಲಿರುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version