ಲೈಫ್ ಸ್ಟೈಲ್
ಸಂಬಂಧಗಳು ಮುರಿವ ಮುನ್ನ..!
- ದಿವ್ಯಶ್ರೀ. ವಿ, ಬೆಂಗಳೂರು
ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಬಂದು ಹೋಗುವ ಸಂಬಂಧಗಳು ಅನೇಕ ರೀತಿಯಲ್ಲಿ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ಸಂಬಂಧ ವಾಗಲಿ ಜೀವನದಿಂದ ಜಾರಿಹೋಗುವ ಮುನ್ನ ಕಾಪಾಡಿಕೊಳ್ಳಿ. ಮನೆಯಲ್ಲಿ ಹಿರಿಯರ ಜೊತೆ ಇರುವ ಬಾಂಧವ್ಯ ಮಧುರವಾದದ್ದು.
ಸಹೋದರ ಸಹೋದರಿಯರ ನಡುವೆ ಇರುವ ಬಾಂಧವ್ಯ ಎಂದೆಂದಿಗೂ ಹಿತಕರ. ಇನ್ನು ಸ್ನೇಹಿತರು ಎಲ್ಲರಿಗೂ ಸಿಗುವ ಎರಡನೇ ಕುಟುಂಬ. ಸ್ನೇಹಿತರ ಸಂಬಂಧದ ಬಗ್ಗೆ ಮಾತಾಡಲು ಅಸಾಧ್ಯ, ಒಬ್ಬ ವ್ಯಕ್ತಿಗೆ ಒಬ್ಬ ಒಳ್ಳೆ ಸ್ನೇಹಿತ ಸಿಕ್ಕರೆ ಅದು ಅಮೂಲ್ಯವಾದ ರತ್ನ ಸಿಕ್ಕಂತೆ. ಮತ್ತು ಜೀವನದಲ್ಲಿ ಮುಖ್ಯವಾದ ಪಾತ್ರವಹಿಸುವ ಇನ್ನೊಂದು ಸಂಬಂಧ ಎಂದರೆ ಅದು ಬಾಳಸಂಗಾತಿ.
ಎಷ್ಟೋ ಜನ ಮನಸ್ತಾಪ ಮಾಡಿಕೊಂಡು ತಮ್ಮ ಪ್ರೀತಿಪಾತ್ರ ರಿಂದ ದೂರ ಆಗುತ್ತಾರೆ, ವ್ಯಕ್ತಿಗಳು ಹತ್ತಿರ ಇದ್ದಾಗ ಅರ್ಥವಾಗದೆ ಮತ್ತು ಅವರನ್ನು ಅರ್ಥ ಮಾಡಿಕೊಳ್ಳದೆ ಬೇರೆಯವರ ಮಾತುಗಳನ್ನು ಕೇಳಿ ಸಂಬಂಧಗಳ ಮಧ್ಯ ಬಿರುಕು ಮಾಡಿಕೊಂಡು ದೂರ ಆಗುವವರು ಹೆಚ್ಚು, ಜೊತೆಗಿದ್ದಾಗ ಅರ್ಥವಾಗದ ವ್ಯಕ್ತಿ ದೂರ ಆದಾಗ ಹೆಚ್ಚಾಗಿ ಅರ್ಥ ಆಗುತ್ತಾರೆ ಎನ್ನುವುದು ವಿಪರ್ಯಾಸವೇ ಸರಿ.
ಬಾಂಧವ್ಯಗಳ ಸಂಕೇತ ಎಂದರೆ ನಂಬಿಕೆ, ವಿಶ್ವಾಸ ಅದೇ ಇಲ್ಲವಾದರೆ ಸಂಬಂಧ ಎನ್ನುವುದು ಹಗ್ಗ ಇಲ್ಲದ ಉಯ್ಯಾಲೆ ಆಗಿಬಿಡುತ್ತೆ. ನಾವು ಯಾರ ಜೊತೆ ಹೆಚ್ಚಾಗಿ ಜಗಳವಾಡುತ್ತೇವೆ ಅವರೇ ನಮ್ಮ ಜೀವನದಲ್ಲಿ ಅತಿ ಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ ಎನ್ನುವುದು ಅನೇಕ ಬಾರಿ ಅನೇಕ ಜನರ ಜೀವನದಲ್ಲಿ ಸತ್ಯವಾಗಿದೆ. ಮನೆಯಿಂದ ದೂರ ಇದ್ದರು ಮನೆಯವರ ಮನಸ್ಸಿನಲ್ಲಿ ಹತ್ತಿರವಿರಬೇಕು ಆಗ ಎಲ್ಲರ ಬದುಕು ಸಂತೋಷದಿಂದ ಕೂಡಿರುತ್ತದೆ.
ಎಲ್ಲಾ ವ್ಯಕ್ತಿಯ ಜೀವನದಲ್ಲಿ ಪ್ರೀತಿ, ಸ್ನೇಹ, ನಂಬಿಕೆ, ವಿಶ್ವಾಸ, ಇದೆಲ್ಲವೂ ಬಿಟ್ಟಿರೋಕೆ ಆಗದೆ ಇರೋ ಬಾಂಧವ್ಯ. ನಾವು ಎಂದಿಗೂ ಸಂಬಂಧಗಳ ಮೌಲ್ಯ ವನ್ನು ಕಳೆದುಕೊಳ್ಳಬಾರದು, ಕಳೆದುಕೊಂಡವರಿಗೆ ಅಷ್ಟೇ ಅದರ ಮೌಲ್ಯವು ಅರ್ಥವಾಗುವುದು ಆದ್ದರಿಂದ ಎಲ್ಲರೂ ತಮ್ಮವರ ಜೊತೆ ಅತಿ ಹೆಚ್ಚು ಪ್ರೀತಿಯಿಂದ ನಂಬಿಕೆ ವಿಶ್ವಾಸದಿಂದ ತಮ್ಮ ಜೀವನವನ್ನು ಸಾಗಿಸಬೇಕು.
ಇನ್ನು ಕೆಲವು ಸಂಬಂಧಗಳು ಹೇಗಿರುತ್ತೆ ಎಂದರೆ ಅವರು ನಮಗೆ ಇಷ್ಟೇ ಪ್ರೀತಿ ಕೊಟ್ಟರು ನಮಗೆ ಅವರ ಮೇಲೆ ಪ್ರೀತಿ ಉಂಟಾಗುವುದಿಲ್ಲ, ಹಾಗೂ ಕೆಲವರಿಗೆ ನಾವೆಷ್ಟೇ ಪ್ರೀತಿ ಕೊಟ್ಟರು ಅವರಿಗೆ ನಮ್ಮ ಪ್ರೀತಿಯ ಅರ್ಥವಾಗುವುದಿಲ್ಲ, ಮತ್ತು ಕೆಲವರು ಎಷ್ಟೇ ಪ್ರೀತಿ ಮಾಡಿದರೂ ಎಷ್ಟೇ ನಂಬಿಕೆ ವಿಶ್ವಾಸದಿಂದ ಇದ್ದರೂ ಬೇರೆಯವರ ಮಾತನ್ನು ಕೇಳಿ ಮೂರ್ಖರಾಗಿ ತಮ್ಮ ಸಂಬಂಧಗಳ ಜೊತೆ ಬಿರುಕು ಮಾಡಿಕೊಳ್ಳುವವರೇ ಹೆಚ್ಚು, ಇದೆಲ್ಲಾ ಒಂದು ತರ ಜೀವನದ ಹಾವು ಏಣಿ ಆಟ ಇದ್ದಹಾಗೆ.
ಉತ್ತಮವಾದ ಸಂಬಂಧಗಳು ಎಂದೆಂದಿಗೂ ಶ್ರೇಷ್ಠ ಅದನ್ನು ಕಳೆದುಕೊಂಡವರಿಗೆ ಅಷ್ಟೇ ಅದರ ಬೆಲೆ ಗೊತ್ತಿರುವುದು. ಸಂಬಂಧಗಳು ಮುರಿವ ಮುನ್ನ ತಪ್ಪನ್ನು ಅರಿತು ಸರಿ ಮಾಡಿಕೊಳ್ಳುವುದು ಮನುಷ್ಯನ ಗುಣವಾಗಿರಲಿ. ನಮ್ಮತನವನ್ನು ನಮ್ಮವರೇ ಅತಿಹೆಚ್ಚಾಗಿ ಪ್ರೀತಿಸುವುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243