ದಿನದ ಸುದ್ದಿ

ದಾವಣಗೆರೆ | ಮೇ28 ರಂದು ಅಕ್ಕಿ ಬಹಿರಂಗ ಹರಾಜು

Published

on

ಸುದ್ದಿದಿನ,ದಾವಣಗೆರೆ: ಜಪ್ತಿ ಮಾಡಿ ವಶಪಡಿಸಿಕೊಳ್ಳಲಾಗಿರುವ ಅನಧಿಕೃತ ದಾಸ್ತಾನು 19.91 ಕ್ವಿಂಟಾಲ್ ಅಕ್ಕಿಯನ್ನು ಮೇ 28 ರಂದು ಎಪಿಎಂಸಿ ಆವರಣದಲ್ಲಿರುವ ಕೆಎಫ್‍ಸಿಎಸ್‍ಸಿ ಸಗಟು ಮಳಿಗೆಯಲ್ಲಿ ಬಹಿರಂಗ ಹರಾಜು ಮಾಡಲಾಗುವುದು.

ದಾವಣಗೆರೆ ತಾಲ್ಲೂಕಿನ ಕುಕ್ಕವಾಡ ಗ್ರಾಮದ ಬಳಿ ಮಾ.21 ರಂದು ಆಹಾರ ಇಲಾಖೆ ಮತ್ತು ಪೊಲೀಸ್ ಉಪನಿರೀಕ್ಷಕರು, ಹದಡಿ ಪೊಲೀಸ್ ಠಾಣೆ , ಹದಡಿ ಇವರು ಹಾಗೂ ಏ.30 ರಂದು ಗುಡಾಳ್ ಗ್ರಾಮದಲ್ಲಿ ಆಹಾರ ಇಲಾಖೆ ಮತ್ತು ಪೊಲೀಸ್ ಉಪನಿರೀಕ್ಷಕರು ಗ್ರಾಮಾಂತರ ಪೊಲೀಸ್ ಠಾಣೆ, ದಾವಣಗೆರೆ ಇವರು ಅಗತ್ಯ ವಸ್ತುಗಳ ಕಾಯ್ದೆ 1955 ರ ಪ್ರಕರಣದಲ್ಲಿ ಕ್ರಮವಾಗಿ 10.28 ಕ್ವಿಂಟಾಲ್ ಮತ್ತು 9.63 ಕ್ವಿಂಟಾಲ್ ಒಟ್ಟು 19.91 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.

ಈ ದಾಸ್ತಾನನ್ನು ಮೇ 28 ರ ಬೆಳಿಗ್ಗೆ 11 ಗಂಟೆಗೆ ಕೆಎಫ್‍ಸಿಎಸ್‍ಸಿ ಗ್ರಾಮಾಂತರ ಸಗಟು ಮಳಿಗೆ, ಎಪಿಎಂಸಿ ಆವರಣ, ದಾವಣಗೆರೆ ಇಲ್ಲಿ ತಹಶೀಲ್ದಾರರ ಸಮಕ್ಷಮದಲ್ಲಿ ಷರತ್ತುಗಳಿಗೆ ಒಳಪಟ್ಟು ಹರಾಜು ಮಾಡಲಾಗುವುದು. ಈ ಹರಾಜು ಪ್ರಕ್ರಿಯೆಯಲ್ಲಿ ಆಸಕ್ತಿಯುಳ್ಳ ಸಾರ್ವಜನಿಕರು ಭಾಗವಹಿಸಬಹುದೆಂದು ದಾವಣಗೆರೆ ತಾಲ್ಲೂಕು ತಹಶೀಲ್ದಾರ್ ಗಿರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version