ದಿನದ ಸುದ್ದಿ
ಆರ್ ಟಿ ಇ ಅಡಿ ಖಾಸಗಿ ಶಾಲೆಗಳಿಗೆ ಪ್ರವೇಶ
ಸುದ್ದಿದಿನ,ಬೆಂಗಳೂರು: ಆರ್ಟಿಇ ಅಡಿ ಖಾಸಗಿ ಶಾಲೆಗಳ ಪ್ರವೇಶ ಸಂಬಂಧ ರಾಜ್ಯ ಸರ್ಕಾರದ ಅಧಿಸೂಚನೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.
2019 ಜನವರಿ 30ರಂದು ಆರ್ಟಿಇ ಕಾಯ್ದೆಯ ತಿದ್ದು ಪಡಿ ತಂದಿದ್ದ ರಾಜ್ಯ ಸರ್ಕಾರ, ಶೇ.25 ರಷ್ಟು ಸೀಟು ಮೀಸಲಿಡುವ ಅಂಶವನ್ನು ತಿದ್ದುಪಡಿ ಮಾಡಿತ್ತು. ಅಲ್ಲದೇ, ಸರ್ಕಾರಿ ಅನುದಾನಿತ ಶಾಲೆಗಳಿರುವೆಡೆ ಖಾಸಗಿ ಶಾಲೆಗೆ ಉಚಿತ ಪ್ರವೇಶವಿಲ್ಲ ಎಂದು ಆದೇಶಿಸಿತ್ತು.
ಸರ್ಕಾರದ ಆದೇಶವನ್ನು ಪ್ರಶ್ನಿಸಿ ಪೋಷಕರ ಸಂಘ ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಿತ್ತು. ಇಂದು ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ಪಿಐಎಲ್ನ ವಜಾಗೊಳಿಸಿದೆ. ಅಲ್ಲದೇ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243