ದಿನದ ಸುದ್ದಿ

ಆರ್ ಟಿ ಓ ಸೇವೆ ಪಡೆಯಲು ‘ಸ್ಲಾಟ್ ಬುಕ್ಕಿಂಗ್’ ಕಡ್ಡಾಯ

Published

on

ಸುದ್ದಿದಿನ,ದಾವಣಗೆರೆ: ಸಾರಿಗೆ ಇಲಾಖೆಯ ಸೇವೆಗಳಾದ ಕಲಿಕಾ ಅನುಜ್ಞಾ ಪತ್ರ(ಎಲ್.ಎಲ್), ಹೊಸ ಚಾಲನಾ ಅನುಜ್ಞಾ ಪತ್ರ(ಪಿಡಿಎಲ್), ಹೆಚ್ಚುವರಿ ಚಾಲನಾ ಅನುಜ್ಞಾನ ಪತ್ರ(ಎಇಡಿಎಲ್), ಚಾಲನಾ ಅನುಜ್ಞಾ ಪತ್ರದ ನವೀಕರಣ(ಆರ್‍ಡಿಎಲ್) ತ್ತು ನವೀಕರಣ ಮತ್ತು ಪುನಃ ಪರೀಕ್ಷೆ (RDL+RETEST) ಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ಲಾಟ್ ಬುಕ್ ಮಾಡುವುದು ಕಡ್ಡಾಯವಾಗಿರುತ್ತದೆ.

ಆದ್ದರಿಂದ ಅ.12 ರಿಂದ ಸ್ಲಾಟ್‍ಗಳು ಸಾರಥಿ-04 ತಂತ್ರಾಂಶದ ಪರಿವಾಹನ್‌ ವೆಬ್‍ಸೈಟ್‍ನಲ್ಲಿ ಬೆಳಿಗ್ಗೆ 9 ರಿಂದ ರಾತ್ರಿ 10 ವರೆಗೆ ದೊರೆಯಲಿದೆ. ಸ್ಲಾಟ್ ಬುಕ್ಕಿಂಗ್ ಮಾಡಲು ಮತ್ತು ಈ ಅರ್ಜಿಗಳಿಗೆ ಸಂಬಂಧಿಸಿದ ಶುಲ್ಕಗಳನ್ನು ಆನ್‍ಲೈನ್‍ನಲ್ಲಿ(ನೆಟ್‍ಬ್ಯಾಂಕಿಂಗ್/ಡಿಬಿಟ್/ಕ್ರೆಡಿಟ್ ಕಾರ್ಡ್) ಮುಖಾಂತರ ಅಥವಾ ಕಚೇರಿಯ ಖಜಾನೆಯಲ್ಲಿ ಪಾವತಿ ಮಾಡಲು ಅವಕಾಶವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಾಮಾಜಿಕ ಜಾಲತಾಣ :
Parivahan.gov.in-sarathi-Driving Licence related service

ಸಂಪರ್ಕಿಸಿ, ಸಾರ್ವಜನಿಕರು ಈ ಯೋಜನೆಯ ಪ್ರಯೋಜನ ಪಡೆಯಬೇಕೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version