ದಿನದ ಸುದ್ದಿ

ಕಳೆದ 24ಗಂಟೆಗಳಿಂದ ಎಸ್‍.ಪಿ.ಬಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ

Published

on

ಸುದ್ದಿದಿನ,ಚೆನ್ನೈ: ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಎಸ್‍.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಚಿಕಿತ್ಸೆ ಮುಂದುವರಿದಿದೆ.

ಗುರುವಾರ ಸಂಜೆ ಎಂಜಿಎಂ ಆಸ್ಪತ್ರೆಯು ಎಸ್‍ಪಿಬಿಯವರ ಹೆಲ್ತ್ ಬುಲೆಟಿನ್ ಅನ್ನು ಬಿಡುಗಡೆ ಮಾಡಿದೆ. ಎಸ್‍.ಪಿ. ಬಾಲಸುಬ್ರಹ್ಮಣ್ಯಂ ಅವರು ಆಗಸ್ಟ್ 5ನೇ ತಾರೀಖಿನಂದು ಕೊರೋನಾ ಪಾಸಿಟಿವ್ ಗೆ ಚಿಕಿತ್ಸೆ ಪಡೆಯಲು ದಾಖಲಾಗಿದ್ದರು. ಅವರಿಗೆ ಎಕ್ಮೋ ಮತ್ತು ಇನ್ನಿತರ ಲೈಫ್ ಸಪೋರ್ಟ್ ಮೇಲೆ ಚಿಕಿತ್ಸೆ ಕೊಡಲಾಗುತ್ತಿದೆ.

ಹೆಲ್ತ್ ಬುಲೆಟಿನ್

ಕಳೆದ 24ಗಂಟೆಗಳಿಂದ ಎಸ್‍.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಕ್ಷೀಣಿಸುತ್ತಿದೆ. ಆ ಕಾರಣಕ್ಕಾಗಿ ಅವರಿಗೆ ಹೆಚ್ಚು ಲೈಫ್ ಸಪೋರ್ಟ್ ಸಾಧನಗಳನ್ನು ಬಳಸಲಾಗುತ್ತಿದೆ. ಎಂಜಿಎಂ ಆಸ್ಪತ್ರೆಯ ವೈದ್ಯರ ತಂಡವು ಎಸ್‍.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಿ ಚಿಕಿತ್ಸೆ ನೀಡಾಲಗುತ್ತಿದೆ ಎಂದು ಹೇಳಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version