ಲೈಫ್ ಸ್ಟೈಲ್
ಉತ್ತರ ಕರ್ನಾಟಕದ ಸಜ್ಜಿ ರೊಟ್ಟಿ, ಹಿಂಡಿ ಪಲ್ಯ ಮಾಡೋದು ಹೀಗೆ ನೋಡಿ..!
ಉತ್ತರ ಕರ್ನಾಟಕದಲ್ಲಿ ಕಟ್ಟಕ ರೊಟ್ಟಿ ಶೇಂಗಾ ಚಟ್ನಿ, ಮೊಸರು ತುಂಬಾನೆ ಪ್ರಸಿದ್ಧಿ ಹೊಂದಿದೆ. ಸಜ್ಜಿ ರೊಟ್ಟಿ ಹಿಂಡಿ ಪಲ್ಯ ಮಾಡಲು ಬೇಕಾದ ಸಾಮಗ್ರಿಗಳ ಬಗ್ಗೆ ತಿಳಿಯೋಣ.
ಸಜ್ಜಿ ರೊಟ್ಟಿ ಮಾಡಲು ಬೇಕಾಡ ಸಾಮಗ್ರಿಗಳು
- ಸಜ್ಜಿಹಿಟ್ಟು
- ಬಿಳಿ ಎಳ್ಳು
- 1ಚಮಚಅರಿಶಿಣ ಪುಡಿ
- ಉಪ್ಪು
ಮಾಡುವ ವಿಧಾನ
ಮೊದಲು ಸಜ್ಜಿಹಿಟ್ಟು, 1ಚಮಚ ಅರಿಶೀಣ, ಉಪ್ಪು, ಹಾಕಿ ಬಿಸಿನೀರು ಹಾಕಿ ನಾದಿಕೊಂಡು, ತೆಳಗೆ ರೊಟ್ಟಿ ತಟ್ಟಿ. ತಟ್ಟಿ ರೋಟ್ಟಿಯ ಮೇಲೆ ಎಳ್ಳುಗಳನ್ನು ಹಾಕಿ ನಿಧಾನವಾಗಿ ಮತ್ತೊಮ್ಮೆ ತಟ್ಟಿರಿ, ನಂತರ ಕಾಯಿದ ಹಂಚಿನ ಮೇಲೆ ಹಾಕಿ ಕೆಂಪಗೆ ಆಗಿ ಬೆಯಿಸಿದರೆ ಕಟ್ಟಕ ಸಜ್ಜಿ ರೊಟ್ಟಿ ಸಿದ್ದ.
ಹಿಂಡಿ ಪಲ್ಯ ಮಾಡಲು ಬೇಕಾದ ಸಾಮಗ್ರಿಗಳು
- ಕಪ್ ಹೆಸರುಕಾಳು
- ಕಪ್ ಮುಕಣಿಕಾಳು
- ಒಂದುವರೆ ಕಪ್ ಹುರುಳಿಕಾಳು
- ಅರ್ಧಕಪ್ ಹಸಿಶೇಂಗಾ ಕಾಳು
- ಅರ್ಧಕಪ್ ಕಡ್ಲಿಕಾಳು
- ಕಪ್ ಹಸಿ ಬಟಾಣಿಕಾಳು
- 10ರಿಂದ 15 ಅವರಿಕಾಯಿ
- ಎರಡು ಗಜ್ಜರಿ
- ಸ್ವಲ್ಪ ಮೆಂತೆಸೊಪ್ಪು
- ಸ್ವಲ್ಪ ಹಸಿ ಕಡ್ಲಿಸೊಪ್ಪು
- ನಾಲ್ಕು ಚಮಚ ಎಣ್ಣೆ
- 1ಚಮಚ ಜಿರೀಗೆ
- 1ಚಮಚ ಸಾಸಿವೆ
- ಕರಿಬೇವು
- ರುಚಿಗೆ ಉಪ್ಪು
- 1ಚಮಚ ಅರಿಶೀಣ ಪುಡಿ
- 8ದಳ ಜಜ್ಜಿದ ಬೆಳ್ಳುಳ್ಳಿ
- ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಹಿಂಡಿಪಲ್ಯ ಮಾಡಲು ಮೊದಲು ಒಂದು ಕುಕ್ಕರ್‍ಗೆ ಹೆಸರುಕಾಳು, ಮುಕಣಿಕಾಳು, ಹುರುಳಿಕಾಳು, ಶೇಂಗಾಕಾಳು, ಕಡ್ಲಿಕಾಳು, ಗಜ್ಜರಿ ಹಾಗೂ ಅವರಿಕಾಯಿ ಹಾಕಿ ಇದರ ಜೊತೆಗೆ ಸ್ವಲ್ಪ ನೀರು ಹಾಕಿ ಮುಚ್ಚಿ 3 ಕೂಗು ಕೂಗಿಸಿಕೊಳ್ಳಿ. ಒಂದು ಬಾಣಲೆಯಲ್ಲಿ 4ಚಮಚ ಎಣ್ಣೆಹಾಕಿ ಕಾಯಲು ಇಡಿ. ಎಣ್ಣೆ ಕಾದ ನಂತರ 1ಚಮಚ ಸಾಸಿವೆ ಹಾಕಿ, ಅದು ಚಟಪಟ ಮಾಡಿದ ನಂತರ 1ಚಮಚ ಜಿರೀಗೆಹಾಕಿ ನಂರತ ಕರಬೇವು ಹಾಕಿ ಬಾಡಿಸಿಕೊಳ್ಳಿ, ನಂರತ ಜಜ್ಜಿದ ಬೆಳ್ಳುಳ್ಳಿಯನ್ನು ಹಾಕಿ. ಬೆಳ್ಳುಳ್ಳಿ ಸ್ವಲ್ಪ ಕೆಂಪಗಾದ ಮೇಲೆ ಹಸಿ ಬಟಾಣಿಯ ಕಾಳುಗಳನ್ನು ಹಾಕಿ ಬಾಡಿಸಿಕೊಳ್ಳಿ.
ನಂತರದಲ್ಲಿ ಮೆಂತೆಸೋಪ್ಪು, ಕಡ್ಲಿಸೋಪ್ಪು ಹಾಕಿ ಬಾಡಿಸಿಕೊಳ್ಳಿ. ನಂತರದಲ್ಲಿ ಇದಲ್ಲಿ ಮೊದಲೆ ಕೂದಿಸಿಕೊಂಡಿದ್ದ ಕಾಳುಗಳನ್ನು ಹಾಕಿ ಇದರ ಜೊತೆಗೆ ರುಚಿಗೆ ಉಪ್ಪು, 2ಚಮಚ ಕೆಂಪುಖಾರ, 1ಚಮಚ ಅರಿಶೀಣ ಹಾಕಿ ಚಿನ್ನಾಗಿ ಮಿಕ್ಸ್ ಮಾಡಿ ಮೇಲೆ ಮುಚ್ಚಿ ಎರಡು ನಿಮೀಷ ಬಿಡಿ. ಸಂಕ್ರಾಂತಿ ಹಬ್ಬಕ್ಕೆ ಉತ್ತರ ಕರ್ನಾಟಕದ ಪ್ರಸಿದ್ಧವಾದ ಸಜ್ಜಿರೊಟ್ಟಿ ಹಾಗೂ ಹಿಂಡಿಪಲ್ಯ ಸವಿಯಲು ಸಿದ್ದ.
-ಕಾಂಚನಾ. ಬಸವರಾಜ. ಪೂಜಾರಿ
ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗ
ಪ್ರಥಮ ವರ್ಷದ ವಿದ್ಯಾರ್ಥಿನಿ
ಅಕ್ಕ ಮಹಾದೇವಿ ವಿಶ್ವವಿದ್ಯಾನಿಲಯ ತೊರವಿ
ವಿಜಯಪುರ
ಸುದ್ದಿದಿನ.ಕಾಂ|ವಾಟ್ಸಾಪ್|9986715401