ದಿನದ ಸುದ್ದಿ
ಸಾಲುಮರದ ತಿಮ್ಮಕ್ಕ ಆರೋಗ್ಯವಾಗಿದ್ದಾರೆ
ಸುದ್ದಿದಿನ ಡೆಸ್ಕ್ : ರಸ್ತೆ ಬದಿಯಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ ಪರಿಸರವಾದಿ ಸಾಲು ಮರದ ತಿಮ್ಮಕ್ಕ ನಿಧನರಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವಾಟ್ಸ್ ಆ್ಯಪ್ ನಲ್ಲಿ ಮೃತದೇಹದ ಚಿತ್ರವೊಂದರ ಜತೆಗೆ ಸಾಲು ಮರದ ತಿಮ್ಮಕ್ಕ ಇನ್ನಿಲ್ಲ ಎಂಬ ಸಂದೇಶ ಎಲ್ಲೆಡೆ ಹರಿದಾಡಿದೆ. ಆದರೆ ಅದು ಸುಳ್ಳು ಸುದ್ದಿ, ವದಂತಿಗೆ ಕಿವಿಗೊಡಬೇಡಿ. ತಿಮ್ಮಕ್ಕ ಆರೋಗ್ಯದಿಂದಿದ್ದಾರೆ ಎಂದು ಅವರ ಮಗ ಉಮೇಶ್ ವನಸಿರಿ ಹೇಳಿದ್ದಾರೆ.