ಲೈಫ್ ಸ್ಟೈಲ್

‘ಮುಂಬೈ ಸ್ಟ್ರೀಟ್ ಸ್ಟೈಲ್ ಸ್ಯಾಂಡ್‌ವಿಚ್’ ಮನೆಯಲ್ಲೇ ಮಾಡಿ

Published

on

  • ಶಶಿಕಲಾ ‌ಸುನೀಲ್

ಬೇಕಾಗುವ ಸಾಮಗ್ರಿಗಳು

  1. ಬ್ರೆಡ್
  2. ಬೆಣ್ಣೆ
  3. ಬೆಂದ ಆಲೂಗಡ್ಡೆ – 1
  4. ಪುದಿನ ಚಟ್ನಿ
  5. ಈರುಳ್ಳಿ – 1
  6. ಟೊಮೇಟೊ – 1
  7. ದಪ್ಪ ಮೆಣಸಿನಕಾಯಿ – 1
  8. ಸೌತೆಕಾಯಿ – 1
  9. ಅಚ್ಚ ಖಾರದ ಪುಡಿ – ಕಾಲು ಚಮಚ
  10. ಗರಂ ಮಸಾಲಾ – ಕಾಲು ಚಮಚ
  11. ಚಾಟ್ ಮಸಾಲಾ – ಕಾಲು ಚಮಚ
  12. ಮೆಣಸು ಪುಡಿ
  13. ಉಪ್ಪು ರುಚಿಗೆ

ಮಾಡುವ ವಿಧಾನ

ಬೆಂದ ಆಲೂಗಡ್ಡೆಯನ್ನು ಮ್ಯಾಷ್ ಮಾಡಿ ಅದಕ್ಕೆ ಅಚ್ಚಖಾರದಪುಡಿ, ಗರಂ ಮಸಾಲಾ ಪುಡಿ, ಚಾಟ್ ಮಸಾಲಾಪುಡಿ, ರುಚಿಗೆ ಉಪ್ಪು ಹಾಕಿ ಕಲಸಿ. ಒಂದು ಸ್ಲೈಸ್ ಬ್ರೆಡ್ ಮೇಲೆ ಆಲೂಗಡ್ಡೆ ಮಿಶ್ರಣ ಹಾಕಿ ತೆಳ್ಳಗೆ ಸ್ಲೈಸ್ ಮಾಡಿದ ಈರುಳ್ಳಿ, ದಪ್ಪಮೆಣಸಿನಕಾಯಿ, ಟೊಮ್ಯಾಟೋ, ಸೌತೆಕಾಯಿ ಹಾಕಿ ಅದಕ್ಕೆ ಉಪ್ಪು ಮತ್ತು ಮೆಣಸು sprinkle ಮಾಡಿ. ಮತ್ತೊಂದು slice ಬ್ರೆಡ್ ಗೆ ಪುದಿನ ಚಟ್ನಿ ಪೇಸ್ಟ್ ಹಾಕಿ sandwich ಅನ್ನು ಮುಚ್ಚಿ ಮೇಲೆ ಬೆಣ್ಣೆ ಸವರಿ ಎರಡೂ ಕಡೆ sandwich ಮೇಕರ್ /ತವಾ ಮೇಲೆ ಬೇಯಿಸಿ ಸವಿಯಿರಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version