ದಿನದ ಸುದ್ದಿ
ನಟಿ ಸಂಜನಾ ಗಲ್ರಾಣಿ ಅವರ ಪಾರ್ಟಿಗಳಿಂದ ತೊಂದರೆ ಅನುಭವಿಸಿದ್ದೇವೆ : ಅಪಾರ್ಟ್ಮೆಂಟ್ ನಿವಾಸಿಗಳ ಆರೋಪ
ಸುದ್ದಿದಿನ, ಬೆಂಗಳೂರು: ನಟಿ ಸಂಜನಾ ಗಲ್ರಾಣಿ ಅವರ ಪಾರ್ಟಿಗಳಿಂದ ಭಾರೀ ಗದ್ದಲ ಉಂಟಾಗಿ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ ಎಂಬುದಾಗಿ ಬೆಂಗಳೂರಿನ ಇಂದಿರಾನಗರದ ಸಾಯಿತೇಜಾ ಅಪಾರ್ಟ್ಮೆಂಟ್ ನಿವಾಸಿಗಳು ಆರೋಪಿಸಿದ್ದಾರೆ.
ನಟಿ ನೇತೃತ್ವದಲ್ಲಿ ರಾತ್ರಿಯಾಗುತ್ತಿದ್ದಂತೆ ಪಾರ್ಟಿಗಳು ಆರಂಭವಾಗುತ್ತವೆ. ಅಲ್ಲದೆ ಸಂಜನಾ ಆಪ್ತ ರಾಹುಲ್ ವಕೀಲರೊಬ್ಬರ ಮೇಲೆ ಹಲ್ಲೆ ಮಾಡಿದ್ದ. ಸಂಜನಾ ಅವರ ಮನೆಗೆ ಜಲ್ಲಿ ಮತ್ತು ಮರಳು ಹಾಕಿದ್ದ ಟ್ರ್ಯಾಕ್ಟರ್ ಹುಡುಗ ಹಣ ಕೇಳಿದ್ದಕ್ಕೆ ನಟಿ ಚಪ್ಪಲಿಯಲ್ಲಿ ಹೊಡೆದಿದ್ದರು ಎಂದೂ ಆರೋಪಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243