Connect with us

ಲೈಫ್ ಸ್ಟೈಲ್

ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ ನಾರಿಯರ ಸ್ಯಾರೀ ಚಾಲೆಂಜ್..!

Published

on

  • ಚಿತ್ರಶ್ರೀ ಹರ್ಷ

ಕೊರೋನ ವೈರಾಣುವಿನ ಭೀತಿಯಿಂದಾಗಿಕೊಳ್ಳುವ ಇಡೀ ವಿಶ್ವವೇ ಲಾಕ್ಡೌನ್ ಆಗಿದೆ. ಈ ಹಿನ್ನೆಲೆಯಲ್ಲಿ
ಇಡೀ ಫ್ಯಾಷನ್ ಲೋಕದ ಹುರುಪು ಉತ್ಸಾಹ ಕೂಡ ಕೊಂಚ ಹಿಂದೆ ಸರಿದಿರುವ ಬೆನ್ನಲ್ಲೇ, ಸೋಷಿಯಲ್ ಮೀಡಿಯಾದಲ್ಲಿ ನಾರಿಯರ ಸ್ಯಾರೀ ಕ್ರೇಜ್ ಹುಟ್ಟಿ ಹಾಕಿದೆ. ಸದ್ಯ ವಾಟ್ಸಪ್, ಇಂಸ್ಟಾಗ್ರಾಂ, ಫೇಸ್ ಬುಕ್ ಗಳಲ್ಲಿ ಹಳೆಯ ನೆನಪುಗಳು ಮೆಲುಕು ಹಾಕುತ್ತಿರುವ ಫ್ಯಾಷನ್ ಪ್ರಿಯರು, ಟೈಂಪಾಸ್ ಗಾಗಿ ಹುಡುಕಿಕೊಂಡು ಹೊಸ ಹ್ಯಾಶ್ಟ್ಯಾಗ್ ಟ್ರೆಂಡ್ #sareeChallenge .

ಭಾರತೀಯ ಸಾಂಪ್ರದಾಯಿಕ ಉಡುಪುಗಳಿಗೆ  ಆಧುನಿಕತೆಯ ಲೇಪನ ನೀಡಿ ಫ್ಯಾಶನ್ ಲೋಕದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದ್ದಾರೆ . ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಲೋಕವೂ ಅತಿ ವಿನೂತನ ಅನಿಸುವ ವಸ್ತ್ರವಿನ್ಯಾಸದಲ್ಲಿ ತೊಡಗಿಸಿಕೊಂಡಿದ್ದು, ಹೊಸ ಶೈಲಿಯ ಉಡುಪುಗಳ ತಯಾರಿಕೆಯಲ್ಲಿ ಮಗ್ನವಾಗಿದೆ.  ಭಾರತೀಯ ಸಾಂಪ್ರದಾಯಿಕ ಸೀರೆ, ಗಾಗ್ರ ಚೋಲಿ, ಸಲ್ವಾರ್ ಗಳು ಹೂಸ ರೂಪ ಪಡೆದಿವೆ. ಫ್ಯಾಷನ್ ಕ್ರಾಂತಿಯ ಪ್ರತಿಫಲವಾಗಿ   ಆಕರ್ಷಕ ವಿನ್ಯಾಸದ ಸ್ಟೈಲಿಶ್ ಉಡುಪುಗಳ ಭರಾಟೆ ಮಾರುಕಟ್ಟೆಗಳಲ್ಲಿ ರಂಗೇರಿದೆ.

ಕರೋನ ವೈರಸ್ ಹಾವಳಿಯಿಂದಾಗಿ ಫ್ಯಾಷನ್ ಲೋಕಕ್ಕೆ ಕೊಂಚ ಪೆಟ್ಟು ಬಿದ್ದರೂ , ಸೋಷಿಯಲ್ ಮೀಡಿಯಾದಲ್ಲಿ ಸ್ಯಾರಿ ಉಟ್ಟ ನಾರಿಯರು ಸಖತ್ ಟ್ರೆಂಡ್ ಆಗುತ್ತಿದಾ್ದರೆ.  ಅಂದಿಗೂ ಇಂದಿಗೂ..ಎಂದೆಂದಿಗೂ ಸೈ ಎನಿಸಿಕೊಂಡಿದೆ ನಾರಿಯರ ನೆಚ್ಚಿನ ಸ್ಯಾರೀ ಫ್ಯಾಷನ್.

ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿರುವುದು ಈ  ಫ್ಯಾಶನ್ ಕ್ರಾಂತಿಯಲ್ಲಿ
ಕಾಂಟೆಂಪರರೀ ಸ್ಟೈಲ್ ಉಡುಪುಗಳ ಸುಗ್ಗಿ ಶುರುವಾಗಿದೆ. ಹಾಗಾದರೆ ತಡ ಯಾಕೆ,  ಮನೆಯಲ್ಲಿ ನೀವೂ ಕಾಂಟೆಂಪರರೀ ಸ್ಟೈಲ್ ಸೀರೆ ಉಟ್ಟು, ಸೋಷಿಯಲ್ ಮೀಡಿಯಾದಲ್ಲಿ ಸ್ಯಾರಿ ಟ್ರೆಂಡ್ ಮುಂದುವರಿಸಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಹೆಸರಲ್ಲೇ ಕಲೆ ಬೆರತಿರುವವಳು ನಾನು ಚಿತ್ರಶ್ರೀ ಹರ್ಷ. ವೃತ್ತಿಯಲ್ಲಿ ಉಪನ್ಯಾಸಕಿ. ಹುಟ್ಟಿದ್ದು ಬೆಳೆದದ್ದು ಬೆಂಗಳೂರಿನಲ್ಲಿ. ಬೆಂಗಳೂರು ವಿಶ್ವವಿದ್ಯಾಲಯದ ದ M.A Economics ಪದವೀಧರೆ. M.phil ಕೂಡ ಮುಗಿದಿದ್ದು ಬಿ.ಬಿ.ಎಂ.ಪಿ ಕಾಲೇಜಿನಲ್ಲಿ ಕಳೆದ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಫ್ಯಾಷನ್ ಸೆಳೆತ ಚಿಕ್ಕಂದಿನಿಂದಲೂ ಇದ್ದೇ ಇತ್ತು. ಅದಕ್ಕೆ ತಕ್ಕಂತೆ ಫ್ಯಾಷನ್ ಲೋಕವೂ ಕೈ ಬೀಸಿ ಕರೆಯುತ್ತಿತ್ತು. ಬಾಲ್ಯದ ಆಸೆ ಈಗ ಈಡೇರಿದೆ. ಫ್ಯಾಷನ್ ಲೋಕದಲ್ಲಿ "ನೈಲ್ ಆರ್ಟ್ ಸ್ಪೆಷಲಿಸ್ಟ" ಎಂಬ ಬಿರದು ನನ್ನದಾಗಿದೆ. ಹಲವಾರು ಖಾಸಗಿ ವಾಹಿನಿಗಳಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದು, ಸಂಯುಕ್ತ ಕರ್ನಾಟಕ ಹಾಗೂ ಕರ್ಮವೀರ ಪತ್ರಿಕೆ ಗಳಿಗೆ ಫ್ಯಾಷನ್ ಲೇಖನ ಬರೆಯುತ್ತಿದ್ದೇನೆ. ಬ್ಯೂಟಿ ಟ್ರೆಂಡ್ ಹಾಗೂ ನೈಲ್ ಆರ್ಟ್ ನಲ್ಲಿ ವಿನೂತನ ಹಾಗೂ ಟ್ರೆಂಡೀ ಲುಕ್ ಸೃಷ್ಟಿಸುವುದು ನನ್ನ ಹವ್ಯಾಸ. ಹಲವಾರು ಕವನಗಳನ್ನು ಬರೆದಿದ್ದು, ಪ್ರತಿಷ್ಠಿತ ದಿನಪತ್ರಿಕೆ ಗಳಲ್ಲಿ ಪ್ರಕಟವಾಗಿದೆ.

ದಿನದ ಸುದ್ದಿ

ರಾಜ್ಯದಲ್ಲಿ ಜಾತಿ ಗಣತಿ ಮರು ಸಮೀಕ್ಷೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನಡೆಸ್ಕ್:ಜಾತಿಗಣತಿ ಮರು ಸಮೀಕ್ಷೆಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.

ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿಗಣತಿ ಮರು ಸಮೀಕ್ಷೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ ಎಂದು ಹೇಳಿದ್ದಾರೆ.

54 ಮಾನದಂಡಗಳನ್ನು ಇಟ್ಟುಕೊಂಡು ಹೋಗಿ ಮನೆ ಮನೆ ಸಮೀಕ್ಷೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ನೀಡಿದ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಗಣತಿ ವಿಚಾರದಲ್ಲಿ ಸರಿಯಾದ ಸ್ಪಷ್ಟತೆ ನೀಡಬೇಕು ಎಂದು ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯನವರೇ ಜಾತಿ ಗಣತಿಗೆ 200 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು161 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಹೇಳಿ, ಇದೀಗ ಜಾತಿ ಜನಗಣತಿಯನ್ನು ವಾಪಸ್ ಪಡೆಯುವುದಾಗಿ ಹೇಳುತ್ತಿರುವುದು ಹಾಸ್ಯಸ್ಪದವಾಗಿದೆ ಎಂದು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

RCB ಸಂಭ್ರಮಾಚರಣೆ : 18 ರೂಪಾಯಿಗೆ ಬಿರಿಯಾನಿ ಮಾರಾಟ

Published

on

ಸುದ್ದಿದಿನ,ಬೆಂಗಳೂರು:ಆರ್‌ಸಿಬಿ ವಿಜಯೋತ್ಸವದಲ್ಲಿ ಬೆಂಗಳೂರು ಮಿಂದೆದ್ದಿದೆ. ಜನ ವಿಭಿನ್ನ ರೀತಿಯಲ್ಲಿ ತಮ್ಮ ಸಂಭ್ರಮಾಚರಣೆ ವ್ಯಕ್ತಪಡಿಸಿದ್ದಾರೆ. ಹೋಟೆಲ್‌ ರೆಸ್ಟೋರೆಂಟ್‌ಗಳೂ ಕೂಡ ಇದನ್ನೇ ಬಂಡವಾಳ ಮಾಡಿಕೊಂಡು ಭರ್ಜರಿ ವ್ಯಾಪಾರ ಮಾಡಿವೆ.

ಬೆಂಗಳೂರಿನ #NativeCooks ಫುಡ್‌ ಡೆಲಿವರಿ ಸಂಸ್ಥೆಯು ಕೇವಲ 18 ರೂಪಾಯಿಗೆ ಬಿರಿಯಾನಿ ಮಾರಾಟ ಮಾಡುವ ಮೂಲಕ ಆರ್‌ಸಿಬಿ ಅಭಿಮಾನಿಗಳ ಮನ ಗೆದ್ದಿದೆ.

ಹೌದು, ಹೆಬ್ಬಾಳ, ಆರ್‌ಟಿ ನಗರ, ಸದಾಶಿವನಗರದಲ್ಲಿ ಡೆಲಿವರಿ ಶುಲ್ಕವಿಲ್ಲದೆ ಅತಿ ಕಡಿಮೆ ದರದಲ್ಲಿ ಫುಡ್‌ ಡೆಲಿವರಿ ಮಾಡುತ್ತಿರುವ #NativeCooks ಸಂಸ್ಥೆಯು ಆರ್‌ಸಿಬಿ ಅಭಿಮಾನಿಗಳನ್ನು ಖುಷಿಪಡಿಸಲು ಈ ರೀತಿ ಹೊಸ ಆಫರ್‌ ಬಿಟ್ಟಿತ್ತು. ಮೂಲಗಳ ಪ್ರಕಾರ ಸುಮಾರು ಒಂದು ಸಾವಿರ ಬಿರಿಯಾನಿ ಲಂಚ್‌ಬಾಕ್ಸ್‌ಗಳನ್ನು ತಲಾ 18ರೂಪಾಯಿಯಂತೆ ಮಾರಾಟ ಮಾಡಿದೆ.

ಮನೆಯಲ್ಲೇ ಮಾಡಿದ ಆಹಾರ ಪದಾರ್ಥಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ನೇಟೀವ್‌ ಕುಕ್ಸ್‌ ಸಂಸ್ಥೆಯು ಹೆಣ್ಣುಮಕ್ಕಳೇ ಸೇರಿ ನಡೆಸುತ್ತಿರುವ ಪುಟ್ಟ ಕೇಟರಿಂಗ್‌ ಆಗಿದೆ. ವಾರದಲ್ಲಿ 6 ದಿನಗಳ ಕಾಲ ಕಾರ್ಯ ನಿರ್ವಹಿಸುವ ಈ ಕೇಟರಿಂಗ್.‌ ವೆಜ್‌ ಊಟವನ್ನು ಕೇವಲ 80 ರೂಪಾಯಿಗೆ ಹಾಗೂ ನಾನ್‌ವೆಜ್‌ ಊಟವನ್ನು 135 ರೂಪಾಯಿಗೆ ಹಾಗೂ ಎಕ್‌ ಮೀಲ್‌ಅನ್ನು ಕೇವಲ 110 ರೂಪಾಯಿಗೆ ಮಾರಾಟ ಮಾಡುತ್ತಿದೆ.

ಸದ್ಯಕ್ಕೆ ಹೆಬ್ಬಾಳ, ಆರ್‌ಟಿನಗರ ಹಾಗೂ ಸದಾಶಿವನಗರಕ್ಕೆ ಡೆಲಿವರಿ ಶುಲ್ಕ ಇಲ್ಲದೇ ಆಹಾರ ವಿತರಿಸುತ್ತಿದ್ದು, ಹೆಚ್ಚಿನ ಮಾಹಿತಿಗೆ 80 4853 6206 ಸಂಪರ್ಕಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಚಿತ್ರ ವಿಮರ್ಶೆ | ಸೂಲಗಿತ್ತಿ ತಾಯವ್ವ

Published

on

~ಡಾ. ಪುಷ್ಪಲತ ಸಿ ಭದ್ರಾವತಿ

ಚಿತ್ರ – ತಾಯವ್ವ ,ನಿರ್ಮಾಣ – ಅಮರ ಫಿಲಂಸ್, ನಿರ್ದೇಶನ- ಸಾತ್ವಿಕ ಪವನ ಕುಮಾರ್,ತಾರಾಗಣ – ಗೀತಪ್ರಿಯ. ಬೇಬಿ ಯಶಿಕಾ, ಮತ್ತಿತರರು

ನಾವು ಎಷ್ಟೇ ಆಧುನಿಕತೆ, ಸಮಾನತೆ, ಸ್ವಾತಂತ್ರ್ಯ ಎಂದು ಹೆಣ್ಣು ಮಾತನಾಡಿದರೂ, ಈ ಸಮಾಜದ ಸಂಕೋಲೆಯಲ್ಲಿ ಇವತ್ತಿಗೂ ನಾವು ಕಂಡು ಕಾಣದಂತೆ ಬಂಧಿಯಾಗಿದ್ದೇವೆ. ಈ ಪುರುಷ ನಿರ್ಮಿತ ಸಮಾಜದಲ್ಲಿ ಹೆಣ್ಣನ್ನು ತನ್ನ ಸಂಕೂಲೆಯಲ್ಲಿಯೇ ಬಂಧಿಸಿಟ್ಟಿರುವನು. ಅದೊಂದು ಸ್ವೇಚ್ಛಾಚಾರದ, ಸಮಾನತೆಯ, ಹೆಸರಿನ ಮುಖವಾಡ ತೊಟ್ಟಿದೆ ಅಷ್ಟೇ. ಈ ಮುಖವಾಡಗಳ ನಡುವಿನ ಪುರುಷ ನಿಯಂತ್ರಿತ ಬದುಕಿನಲ್ಲಿ ಹೋರಾಟವೆಂಬುದು ಹೆಣ್ಣಿಗೆ ನಿತ್ಯವಾಗಿದೆ.

ಸ್ತ್ರೀ ಅವಳು ಪ್ರಕೃತಿ, ಪ್ರಕೃತಿ ಇಲ್ಲವಾದರೆ ಇನ್ನೂ ನಾವೆಲ್ಲ ತೃಣಮೂಲ. ಇಂತಹ ಸತ್ಯ ಅರಿವಿದ್ದರೂ ನಾವು ಪದೇ ಪದೇ ಈ ಪ್ರಕೃತಿಯನ್ನು ವಿನಾಶದಂಚಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಹಾಗೆಯೇ ಪ್ರಕೃತಿಯ ಇನ್ನೊಂದು ರೂಪವಾದ ‘ಹೆಣ್ಣನ್ನು’ ನಾವು ವಿನಾಶದಂಚಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಇದರ ಪರಿಣಾಮವಾಗಿಯೇ ಹೆಣ್ಣಿನ ಸರಾಸರಿ ಗಂಡಿಗಿಂತ ಗಣನೀಯವಾಗಿ ಕಡಿಮೆಯಾಗುತ್ತಿರುವುದು. ” ಹೆಣ್ಣು ಭ್ರೂಣಹತ್ಯೆ” ಎಂಬುದು ಸಮಾಜದ ಅದು ಹಾಗೂ ವಿಶ್ವಕ್ಕೂ ಮಾರಕ. ಇಂತಹ ಒಂದು ವಿಷಯ ವಸ್ತುವನ್ನು ಕೇಂದ್ರಿಕರಿಸಿಕೊಂಡು ಸಮಾಜಕ್ಕೆ ಜಾಗೃತಿ ಮೂಡಿಸುವ ಸಲುವಾಗಿ, ಎಚ್ಚರಿಕೆಯ ಕರೆಘಂಟೆಯೆಂಬಂತೆ “ತಾಯವ್ವ” ಸಿನಿಮಾ ಕರ್ನಾಟಕದಾದ್ಯಂತ ಬಿಡುಗಡೆಗೊಂಡಿದೆ.

ಕಳೆದ ವರ್ಷಗಳಲ್ಲಿಯೇ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ಹಿಂದೆ ಸುಮಾರು 500ಕ್ಕೂ ಹೆಚ್ಚಿನ ಭ್ರೂಣಗಳು ಸಿಕ್ಕವು. ವಿಚಾರ ಪ್ರಚಾರವೂ ಆಯಿತು. ಆದರೆ ಕೇವಲ ಸುದ್ದಿಯಾಗಿ ಕಣ್ಮರೆಯಾಗುತ್ತವೆ. ಇಂದಿನ ಸಮಾಜಕ್ಕೆ ಇಂತಹ ಸೂಕ್ಷ್ಮ ವಿಷಯಗಳನ್ನು ಮುನ್ನೆಲೆಗೆ ತಂದು ಯುವಕರಿಗೆ ಹಾಗೂ ಸಮಾಜಕ್ಕೆ ಜಾಗೃತಿಮೂಡಿಸಬೇಕಾಗಿದೆ. ಇಂತಹ ಕಾರ್ಯದಲ್ಲಿ
” ತಾಯವ್ವ” ಸಿನಿಮಾ ಗೆದ್ದಿದೆ ಎಂದರೆ ಅತಿಶಯೋಕ್ತಿಯೆನಲ್ಲಾ. ಈ ಗೆಲುವು ಚಿತ್ರದ ನಾಯಕಿ ” ಗೀತ ಪ್ರಿಯಾ” ಅವರ ಶ್ರಮ, ಹಾಗೂ ಅವರ ಪೂರ್ಣ ಪ್ರಮಾಣದ ಪಾತ್ರದ ತಲ್ಲೀನತೆಯು ಸಿನಿಮಾದುದ್ದಕ್ಕೂ ಕಾಣುತ್ತದೆ.

ಮೂಲತಃ ” ಗೀತ ಪ್ರಿಯಾ” ಅವರು ಕಳೆದ 35 ವರ್ಷಗಳ ಅಧಿಕವಾಗಿ ತಮ್ಮನ್ನು ತಾವು ಶೈಕ್ಷಣಿಕ ರಂಗದಲ್ಲಿ ತೊಡಗಿಸಿಕೊಂಡು ವಿಧ್ಯಾಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿದ್ದಾರೆ. ಇವರ ತಾಯಿ ನೆರಳಲ್ಲಿ ಹುಟ್ಟಿದ ಮಗುವೇ ” ಕೃಪಾನಿಧಿ ಗ್ರೂಪ್ ಸಂಸ್ಥೆ”. ಸದಾ ಮಿಡಿವ ತಾಯಿ ಹೃದಯ ಇವರದ್ದಾಗಿದ್ದರಿಂದಲೇ ತಮ್ಮ ಪ್ರಥಮ ಚಿತ್ರದಲ್ಲಿಯೇ ಗಂಭೀರ ವಿಷಯ ವಸ್ತುವಿನ ಆಯ್ಕೆ, ಗಂಭೀರವಾದ ಅಭಿನಯ, ಸಮಾಜಮುಖಿ ಕಾಳಜಿಯಿರುವುದರಿಂದಲೇ ಇದರೆಲ್ಲರ ಫಲಿತಗಳೆಂಬಂತೆೇ “ತಾಯವ್ವ” ರೂಪುಗೊಂಡಿದೆ.

ಸಿನಿಮಾ ಕಲಾಪ್ರಿಯರಿಗೆ ಒಂದೊಳ್ಳೆ ಸುಗ್ಗಿ, ಕುಟುಂಬದ ಸಮೇತ ಸಿನಿಮಾ ವೀಕ್ಷಿಸಬಹುದು. ಗೀತ ಪ್ರಿಯಾ ಅವರು ಈ ಸಿನಿಮಾದಲ್ಲಿ ಅಭಿನಯಿಸಿ, ಹಾಗೂ ಸಂಗೀತಕ್ಕೆ ತಮ್ಮ ಧ್ವನಿಯನ್ನು ನೀಡಿರುವುದು ಇನ್ನೂ ವಿಶೇಷ. ಬೇಬಿ ಯಶೀಕಾ ಮುಂದಿನ ಭವಿಷ್ಯ ಇನ್ನಷ್ಟು ಸಿನಿಮಾರಂಗದಲ್ಲಿ ಉಜ್ವಲವಾಗಿರಲಿ. ನಿರ್ದೇಶಕರ ಪ್ರಯತ್ನ. ಚಿತ್ರಕಥೆಯ ಹಿಡಿತ ಹಾಗೂ ಎಲ್ಲೂ ಸಡಿಲವಿರದೇ ಸಾಗಿರುವುದು ನಮ್ಮ ಕನ್ನಡ ಚಿತ್ರರಂಗಕ್ಕೆ ಪ್ರಸ್ತುತ ಕೊಡುಗೆಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending