ದಿನದ ಸುದ್ದಿ
ಖಡ್ಗ ಸಂಘದಿಂದ ಸೂಳೆಕೆರೆ ಉಳಿಸಿ ಜಾಗೃತಿ ಮೂಡಿಸಲು ಪಾದಯಾತ್ರೆ
ಸುದ್ದಿದಿನ,ದಾವಣಗೆರೆ : ಇತ್ತೀಚೆಗೆ ಖಡ್ಗ ಸ್ವಯಂ ಸೇವಕರ ಸಂಘ (ರಿ) ಕರ್ನಾಟಕ ದಿಂದ ಸೂಳೆಕೆರೆ ಉಳಿಸಿ ಅಭಿಯಾನ ಮತ್ತು ಸಿರಿಗೆರೆಯ ಮಠದ ನ್ಯಾಯ ಪೀಠದಲ್ಲಿ ನಡೆಯಲಿರುವ ಸರ್ವಸಭೆಗಾಗಿ ಜನಗಳಲ್ಲಿ ಜಾಗರೂಕತೆ ಮೂಡಿಸಲು ಸೂಳೆಕೆರೆಯಿಂದ ಚನ್ನಗಿರಿಯವರೆಗೆ ಪಾದಯಾತ್ರೆ ಮಾಡಿದರು.
ಈ ಪಾದಯಾತ್ರೆಗೆ ಪಾಂಡೋಮಟ್ಟಿ ವಿರಕ್ತ ಮಠದ ಶ್ರೀಗಳಾದ ಗುರುಬಸವ ಸ್ವಾಮಿಗಳು ಹಾಗೂ ಚನ್ನಗಿರಿಯ ಕೇದಾರ ಮಠದ ಶಾಂತವೀರ ಶಿವಾಚಾರ್ಯ ಸ್ವಾಮಿಗಳು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಖಡ್ಗ ಸ್ವಯಂ ಸೇವಕರ ಸಂಘದ ರಾಜ್ಯಾಧ್ಯಕ್ಷ, ರಘು ಬಿ ಆರ್ ಹೋನೆಮರದಹಳ್ಳ, ರಾಜ್ಯ ಉಪಾಧ್ಯಕ್ಷ,ಕೆ ಸಿ ಬಸವರಾಜ್ ಬೆಳ್ಳೂಡಿ,ರಾಜ್ಯ ಕಾರ್ಯದರ್ಶಿ ಕುಬೇಂದ್ರೆ ಸ್ವಾಮಿ,ಹಾಗೂ ಪ್ರಾಶಂತ್ ಸೂಣಿಗಿರಿ,ಚಂದ್ರಹಾಸ ಲಿಂಗದಹಳ್ಳಿ, ಷಣ್ಮುಖಪ್ಪ ದೋಡ್ಡಘಟ್ಟ,ಪ್ರಶಾಂತ, ಸಾಯದ್, ಹೇಮಂತ್ ಮತ್ತು ಇತರೆ ಪರಿಸರ ಪ್ರೇಮಿಗಳು ಭಾಗವಹಿಸಿದ್ದರು.