ದಿನದ ಸುದ್ದಿ
ರೇ ಫೌಂಡೇಶನ್ | ಶಾಲಾ ಹಂತದಿಂದಲೇ ಸ್ವಚ್ಚತಾ ಕಾರ್ಯ ಪ್ರಾರಂಭಿಸೋಣ : ಸವಿತಾ ಬಾಯಿ ಮಲ್ಲೇಶ್ ನಾಯ್ಕ್ ಆಶಯ
ಸುದ್ದಿದಿನ, ಆನಗೋಡು : ಸ್ವಚ್ಚ ಭಾರತದ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಪ್ರಸ್ತುತ ಸರ್ಕಾರ ಕೇವಲ ತೋರಿಕೆಗೆ ; ಫೋಟೋಗೆ ಪೋಸುಕೊಡುವುದಕ್ಕೆ ಮಾತ್ರ ಪ್ರಜಾ ಪ್ರತಿನಿಧಿಗಳು ಕಾರ್ಯನಿರ್ವಹಿಸುತ್ತಿರುವುದು ನೋಡಿದರೆ ಇವರಿಗೆ ತಮ್ಮ ಕ್ಷೇತ್ರದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ರೇ ಫೌಂಡೇಶನ್ ನ ಸಂಸ್ಥಾಪಕಿ ಹಾಗೂ ಹಾಗೂ ಕಾಂಗ್ರೆಸ್ ನ ಸವಿತಾ ಬಾಯಿ ಮಲ್ಲೇಶ್ ನಾಯಕ್ ಬೇಸರ ವ್ಯಕ್ತಪಡಿಸಿದರು.
ಇಂಟೆಕ್ ರಾಜ್ಯಾಧ್ಯಕ್ಷರಾದ ಸವಿತಾ ಮಹಿಳಾ ಬಾಯಿ ಮಲ್ಲೇಶ್ ನಾಯ್ಕ ನೇತೃತ್ವದಲ್ಲಿ ರೇ ಫೌಂಡೇಷನ್ ಗ್ರಾಮದ ಸರ್ಕಾರಿ ಶಾಲೆ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವೆಡೆ ಸ್ವಚ್ಛತಾ ಅಭಿಯಾನವನ್ನು ಆರಂಭಿಸಿತು.
ಇತ್ತೀಚೆಗೆ ಶಾಲಾ ಆವರಣ ಮತ್ತು ಹೆದ್ದಾರಿ ಅಕ್ಕ ಪಕ್ಕ ಸ್ವಚ್ಛತೆ ಮಾಡಲಾಯಿತು. ಈ ವೇಳೆ ಮಾತನಾಡಿದ ಸವಿತಾ ಬಾಯಿ ನಾಯ್ಕ ನಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿರಬೇಕು, ಸುಂದರ ವಾತಾವರಣೆ ನಿರ್ಮಾಣ ಮಾಡಬೇಕು. ಈ ಹಿನ್ನೆಲೆ ಶಾಲಾ ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ವಿದೇಶಗಳಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನಾಗರಾಜ್, ನೀಡುತ್ತಾರೆ ಅದರಂತೆ ನಾವು ಸಹ ಸ್ವಚ್ಛತೆ- ಗೆ ಹೆಚ್ಚಿನ ಆದ್ಯತೆ ನೀಡಬೇಕೆಂದರು. ನಮ್ಮ ಸುತ್ತಮುತ್ತಲಿನ ವಾತಾವರಣ ಸುಂದರವಾಗಿದ್ದರೆ ವಿಭಾಗ ಆರೋಗ್ಯ ಕೂಡ ಚೆನ್ನಾಗಿರುತ್ತದೆ ಈ ಹಿನ್ನೆಲೆ ರೇ ಫೌಂಡೇಷನ್ ಹಾಗೂ ಸ್ಥಳಿಯರ ಸಹಕಾರದಿಂದ ಸ್ವಚ್ಛತಾ ಅಭಿಯಾನ ಆರಂಭಿಸಿದ್ದೇವೆ ಎಂದರು.
ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲೂ ಸ್ವಚ್ಛತಾ ಕಾರ್ಯಕ್ರಮವನ್ನ ಮುಂದುವರೆಸುತ್ತೇವೆ. ಈ ಕ್ಷೇತ್ರದಲ್ಲಿ ಇನ್ನೂ ಸಾಕಷ್ಟು ಅಭಿವೃದ್ಧಿಯಾಗಬೇಕಿದೆ, ಮಲ್ಲೇಶ್ ಹಿನ್ನೆಲೆಯಲ್ಲಿ ನಾವು ಸ್ವಚ್ಛತಾ ಕಾರ್ಯಕ್ರಮ ಮೂಲಕ ಅಭಿಯಾನ ಆರಂಭಿಸಿದ್ದೇವೆ ಎಂದು ಸವಿತಾ ಬಾಯಿ ಮಲ್ಲೇಶ್ ನಾಯ್ಕ ತಿಳಿಸಿದರು.
ಈ ಸಂದರ್ಭದಲ್ಲಿ ರೇ ಫೌಂಡೇಷನ್ ನ ಸದಸ್ಯರು ಹಾಗೂ ಜಿಲ್ಲಾ ಕಂಗ್ರೆಸ್ ಸೇವಾದಳ ಅಧ್ಯಕ್ಷರಾದ ಡೋಲಿ ಚಂದ್ರು, ರಂಜಿತ, ರಾಧಾಬಾಯಿ, ನಿತಿನ್ ಸಲೀಂ ಜಾವೀದ್, ಫಯಾಜ್ ಆರ್ಯನ್, ಸಕ್ಕುಬಾಯಿ, ಪಾಂಡೋಜಿ ರಾವ್, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243