ದಿನದ ಸುದ್ದಿ
ಪರಿಶಿಷ್ಟ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಹೆಚ್ಚಳ
ಸುದ್ದಿದಿನ ಡೆಸ್ಕ್ : ದೇಶದಲ್ಲಿ 2014-15 ನೇ ಸಾಲಿನಲ್ಲಿ 46 ಲಕ್ಷದಷ್ಟಿದ್ದ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ದಾಖಲಾತಿ, 2021-22 ರಲ್ಲಿ 66 ಲಕ್ಷಕ್ಕೆ ಅಂದರೆ, ಶೇಕಡಾ 44 ರಷ್ಟು ಹೆಚ್ಚಾಗಿದೆ ಎಂದು ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ವರದಿ ತಿಳಿಸಿದೆ.
2014-15ರಲ್ಲಿ 10 ಲಕ್ಷದಷ್ಟಿದ್ದ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರ ದಾಖಲಾತಿ, 2021-22ರಲ್ಲಿ 15 ಲಕ್ಷಕ್ಕೆ ಅಂದರೆ, 42 ಪ್ರತಿಶತದಷ್ಟು ಹೆಚ್ಚಳವಾಗಿದೆ. ಪರಿಶಿಷ್ಟ ವಿದ್ಯಾರ್ಥಿನಿಯರ ದಾಖಲಾತಿ ಶೇಕಡಾ 51 ರಷ್ಟು ಹೆಚ್ಚಾಗಿದ್ದು, ಬುಡಕಟ್ಟು ವಿದ್ಯಾರ್ಥಿಗಳ ಸಂಖ್ಯೆ ಶೇಕಡಾ 65.2 ರಷ್ಟು ಏರಿಕೆಯಾಗಿದೆ.
ವರದಿಯ ಪ್ರಕಾರ, 2020-21ನೇ ಶೈಕ್ಷಣಿಕ ವರ್ಷದಲ್ಲಿ, ಇತರ ಹಿಂದುಳೀದ ವರ್ಗದ ವಿದ್ಯಾರ್ಥಿಗಳಿಗೆ ಶೇಕಡಾ 27 ರಷ್ಟು ಮೀಸಲಾತಿಯನ್ನು ಕೇಂದ್ರೀಯ ಶಾಲೆಗಳಲ್ಲಿ ಜಾರಿಗೊಳಿಸಲಾಯಿತು, ಇದರ ಪರಿಣಾಮವಾಗಿ 34 ಸಾವಿರಕ್ಕೂ ಹೆಚ್ಚು ಮಕ್ಕಳು ಪ್ರವೇಶ ಪಡೆದಿದ್ದಾರೆ. ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳಲ್ಲಿ, ಪರಿಶಿಷ್ಟ ಜಾತಿ ವರ್ಗದಡಿಯ ದಾಖಲಾತಿಯಲ್ಲಿ ಶೇಕಡಾ 71 ರಷ್ಟು ಹೆಚ್ಚಳವಾಗಿದೆ, ಪರಿಶಿಷ್ಟ ಮಹಿಳೆಯರ ದಾಖಲಾತಿಯು ದ್ವಿಗುಣಗೊಂಡಿದೆ ಎಂದು ವರದಿ ಹೇಳಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243