ದಿನದ ಸುದ್ದಿ
SC/ST | ಉದ್ಯಮಶೀಲತೆ ; ಉಚಿತ ತರಬೇತಿ ಶಿಬಿರ
ಸುದ್ದಿದಿನ,ದಾವಣಗೆರೆ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಉದ್ಯಮಶೀಲತೆಯ ಬಗ್ಗೆ ಕೌಶಲ್ಯಾಭಿವೃದ್ಧಿ ಇಲಾಖಾ ವ್ಯಾಪ್ತಿಯ ಸಿಡಾಕ್ ಸಂಸ್ಥೆಯ ಮೂಲಕ ಹತ್ತು ದಿನಗಳ ಉಚಿತ ತರಬೇತಿ ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದೆ.
ತರಬೇತಿ ಪಡೆಯಲು ವಯೋಮಿತಿ ಕನಿಷ್ಠ 21 ರಿಂದ 50 ವರ್ಷದೊಳಗಿನ ಮತ್ತು ಪಿ.ಯು.ಸಿ ಮೇಲ್ಪಟ್ಟ ಶಿಕ್ಷಣ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಇದೇ 30 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243