ಲೈಫ್ ಸ್ಟೈಲ್
ಬ್ಯಾಕ್ ಟು ಸ್ಕೂಲ್ ಫೀವರ್..!
ಬೇಸಿಗೆ ರಜೆಯ ಹಿನ್ನಲೆಯಲ್ಲಿ ಶಾಲಾ ಕಾಲೇಜು ಕೊಠಡಿಗಳು ಬಣಗುಟ್ಟುತ್ತಿದ್ದವು. ಬೇಸಿಗೆಯ ರಜೆ ಮುಗಿಸಿ ಶಾಲೆಗಳಿಗೆ ತೆರಳುತ್ತಿರುವ ಮಕ್ಕಳು ಒಂದೆಡೆ ಆದರೆ, ಪುಸ್ತಕ, ಪೆನ್ಸಿಲ್, ಬ್ಲಾಕ್ ಬೋರ್ಡ್, ಚಾಕ್ ಪೀಸ್, ಗಳು ಫ್ಯಾಷನ್ ದುನಿಯಾದಲ್ಲೂ ತನ್ನ ರಂಗು ಮೂಡಿಸಿದೆ.
ಶಾಲಾ ಕಾಲೇಜು ಕ್ಯಾಂಪಸ್ಗಳಲ್ಲಿ ಈಗ ಬ್ಯಾಕ್ ಟು ಸ್ಕೂಲ್ ನೇಲ್ ಆರ್ಟ್ ಸಖತ್ ಸುದ್ದಿ ಮಾಡುತ್ತಿದೆ. ಸೋಷಿಯಲ್ ಮೀಡಿಯಾ ದಲ್ಲೂ ಬ್ಯಾಕ್ ಟು ಸ್ಕೂಲ್ ನೈಲ್ ಆರ್ಟ್ ಟ್ರೆಂಡ್ ಆಗುತ್ತಿದ್ದು, ಶಾಲಾ ಕಾಲೇಜು ಕ್ಯಾಂಪಸ್ ಗಳಲ್ಲಿ ವೈರಲ್ ಆಗಿದೆ.
ಸುಂದರಿಯರ ಕೈ ಉಗುರಿನ ಮೇಲೆ ಸುಂದರವಾಗಿ ಬ್ಲಾಕ್ ಬೋರ್ಡ್, ಪೆನ್ಸಿಲ್, ಕ್ರೆಯಾನ್, ಅಕ್ಷರಗಳ ಝಲಕ್ ಕಣ್ಣು ಕೋರೈಸುವಂತಿದೆ.
ಗಣಿತದ 123+ π÷∆ ಚಿನ್ಹೆಯ ನೈಲ್ ಆರ್ಟ್, ಇತಿಹಾಸ ಸಾರುವ ನಕ್ಷೆಗಳು, ಆಂಗ್ಲ ಭಾಷೆಯ ABCD , ಕನ್ನಡ ಅಕ್ಷರಮಾಲೆ ಅಆಇಈ, ಹೀಗೆ ಹಲವಾರು ಶೈಲಿಯ ನೈಲ್ ಆರ್ಟ್ ಫ್ಯಾಷನ್ ಪ್ರಿಯರ ಮನಸೂರೆಗೊಂಡಿದೆ. ಜೂನ್ ತಿಂಗಳ ಆರಂಭದೊಂದಿಗೆ ಶಾಲಾ ಕಾಲೇಜು ಕ್ಯಾಂಪಸ್ ರಂಗು ತಂದಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243