ಲೈಫ್ ಸ್ಟೈಲ್
ಸೆಲ್ಫೀ ಪ್ರೀಯರಿಗೆ ಸಿಹಿ ಸುದ್ದಿ, ಕಿವಿಯಲ್ಲಿ ಮಿನೀ-ಮೀ
ಇಂದಿನ ಸ್ಮಾರ್ಟ್ ಫೋನ್ ಯುಗದಲ್ಲಿ ಸೆಲ್ಫಿ ಕ್ರೇಜ್ ಕೂಡಾ ಜೋರಾಗಿಯೇ ಇದೆ. ವಯೋಮಾನದ ಭೇದ ವಿಲ್ಲದೆ ಎಲ್ಲರೂ ಸೆಲ್ಫಿ ರೋಗಗ್ರಸ್ತರೇ.. ದಿನಕ್ಕೊಂದು ಸೆಲ್ಫಿ ಕ್ಲಿಕ್ಕಿಸಿ ಸೋಷಿಯಲ್ ಮೀಡಿಯಾ ದಲ್ಲಿ ಅಪ್ಲೋಡ್ ಮಾಡಿ ಕಾಮೆಂಟ್ ಬಾಕ್ಸ್ ಮತ್ತು ಲೈಕ್ ಬಟನ್ ಗಳತ್ತ ಕಾದು ಕೂರುವ ಸೆಲ್ಫಿ ಪ್ರಿಯರಿಗೆ ಒಂದು ಸಿಹಿ ಸುದ್ದಿ! ಇನ್ನು ಮುಂದೆ ನೀವು ಕ್ಲಿಕ್ಕಿಸಿದ ಸೆಲ್ಫಿ ನಿಮ್ಮ ಫೇವರಿಟ್ ಇಯರ್ ಆಕ್ಸಸರಿಯ ಪಟ್ಟಿ ಸೇರಿದೆ ಬಹುದು! ನಿಮ್ಮ ಸೆಲ್ಫಿ ಕೇವಲ ಸೋಷಿಯಲ್ ಮೀಡಿಯಾ ದಲ್ಲಿ ಅಪ್ಲೋಡ್ ಮಾಡಲು ಅಷ್ಟೇ ಅಲ್ಲ, ನಿಮ್ಮ ಸ್ಟೈಲ್ ಸ್ಟೇಟ್ ಮಂಟ್ ಕೂಡ ಆಗುತ್ತದೆ. ನಿಮ್ಮ ಫೇವರಿಟ್ ಸೆಲ್ಫೀ ಫೋಟೋ, ಈಗ ನಿಮ್ಮ ಕಿವಿಯ ಆಭರಣ ವಾಗಿದೆ ಮಿಂಚಿದೆ!
ನಿಮ್ಮ ಫೋಟೋ ಅಥವಾ ನಿಮ್ಮ ಪ್ರೀತಿ ಪಾತ್ರರು ಫೋಟೋ ಬೆಳಸಿ ಕಿವಿಯ ಆಭರಣಗಳು ತಯಾರಾಗುತ್ತದೆ. ಹ್ಯಾಂಗಿಂಗ್, ಸ್ಟಡ್, ಯಾವುದೇ ಆಕಾರದಲ್ಲಾದರೂ ಸೆಲ್ಫಿ ಇಯರಿಂಗ್ ಈಗ ಲಭ್ಯ.ಆನ್ ಲೈನ್ ನಲ್ಲಿ ನಿಮ್ಮ ಫೋಟೋ ಅಪ್ಲೋಡ್ ಮಾಡಿ, ಅಂಡರ್ ಮಾಡಿದರೆ ಸಾಕು, ನಿಮ್ಮ ಮನೆ ಬಾಗಿಲಿಗೆ ಈ ಸೆಲ್ಫಿ ಇಯರಿಂಗ್ ರವಾನೆ ಆಗುತ್ತದೆ.
ತಾಯಂದಿರ ದಿನ, ವ್ಯಾಲೆಂಟೈನ್ಸ್ ಡೇ, ಫಾದರ್ಸ್ ಡೇ, ಹುಟ್ಟುಹಬ್ಬ, ದಂತಹ ವಿಶೇಷ ಸಂದರ್ಭಗಳಲ್ಲಿ ಈ ಸೆಲ್ಫಿ ಇಯರಿಂಗ್ ನಿಮ್ಮ ದಿನದ ಮಹತ್ವ ಸಾರುತ್ತದೆ.ನೀವು ಸೆಲ್ಫಿ ಪ್ರಿಯರ? ಹಾಗಾದರೆ ತಂಡ ಯಾಕೆ! ನೀವೂ ಕೂಡ ಒಮ್ಮೆ ಈ ಸೆಲ್ಫಿ ಇಯರಿಂಗ್ ಟ್ರೈ ಮಾಡಿ ನೋಡಿ.
–ಚಿತ್ರಶ್ರೀ ಹರ್ಷ
ಸುದ್ದಿದಿನ.ಕಾಂ|ವಾಟ್ಸಾಪ್|9980346243