ದಿನದ ಸುದ್ದಿ
ಮಾಯಕೊಂಡ | ಮಹಿಳಾ ಕಾಂಗ್ರೆಸ್ ಪಕ್ಷದ ಬಸವಾಪಟ್ಟಣ ಬ್ಲಾಕ್ ನ ಅಧ್ಯಕ್ಷರಾಗಿ ಎಂ.ಜಿ.ಶಶಿಕಲಾ ಮೂರ್ತಿ ನೇಮಕ
ಸುದ್ದಿದಿನ,ದಾವಣಗೆರೆ : ಜಿಲ್ಲೆಯ, ಚನ್ನಗಿರಿ ತಾಲೂಕಿನ, ನಲ್ಕುದುರೆ ಗ್ರಾಮದ ಎಂ.ಜಿ.ಶಶಿಕಲಾ ಮೂರ್ತಿ ಅವರನ್ನು ಮಾಯಕೊಂಡ ಕ್ಷೇತ್ರದ, ಬಸವಾ ಪಟ್ಟಣ ಬ್ಲಾಕ್ ನ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಅನಿತಾಬಾಯಿ ಮಾಲತೇಶ ರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಶಿಕಲಾ ಮೂರ್ತಿ ಅವರು ಕಾಂಗ್ರಸ್ ಪಕ್ಷಕ್ಕೆ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಜಿಲ್ಲೆಯ ದಕ್ಷಿಣ ಕ್ಷೇತ್ರದ ಶಾಸಕರಾದ ಶಾಮನೂರು ಶಿವಶಂಕರಪ್ಪ , ಮಾಜಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ ಮತ್ತು ಜಿಲ್ಲಾ ಕಾಂಗ್ರೆಸ್ ನ ಅಧ್ಯಕ್ಷ ರಾದ ಹೆಚ್.ಬಿ.ಮಂಜಪ್ಪ ಅವರ ಆದೇಶದ ಮೇರೆಗೆ ನೇಮಕ ಮಾಡಲಾಗಿದೆ ಎಂದಿದ್ದಾರೆ.
ಪಕ್ಷದ ಬಲವರ್ಧನೆಗೆ ಕ್ರಿಯಾಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಸ್ಥಳೀಯ ಮುಖಂಡರ ಸಹಯೋಗದೊಂದಿಗೆ ಪಕ್ಷವನ್ನು ಸಂಘಟಿಸಲು ಸೂಚಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243