ದಿನದ ಸುದ್ದಿ
ಅತ್ಯುನ್ನತ ಸಾಧನೆ ಮೆರೆದ ಸೇನಾಪಡೆ ಅಧಿಕಾರಿಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಶೌರ್ಯ ಪದಕ ಪ್ರದಾನ
ಸುದ್ದಿದಿನ ಡೆಸ್ಕ್ : ಅತ್ಯುನ್ನತ ಸೇವೆ ಸಲ್ಲಿಸಿದ ಹಾಗೂ ಶೌರ್ಯ ಸಾಹಸ ಮೆರೆದ ಭಾರತೀಯ ಸೇನಾ ಪಡೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರಪತಿ ಭವನದಲ್ಲಿಂದು ವಿವಿಧ ಶೌರ್ಯ ಪದಕ ಪ್ರದಾನ ಮಾಡಿದರು.
ಭೂಸೇನಾ ಪಡೆ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರಿಗೆ ಪರಮ ವಿಶಿಷ್ಟ ಸೇವಾ ಪದಕ ಪ್ರದಾನ ಮಾಡಲಾಯಿತು. ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಕ್ಯಾಪ್ಟನ್ ಆಶುತೋಷ್ ಕುಮಾರ್ ಅವರಿಗೆ ಮರಣೋತ್ತರ ಶೌರ್ಯ ಚಕ್ರ ಪ್ರದಾನ ಮಾಡಲಾಯಿತು.
ಅಲ್ಲದೆ ಹವಾಲ್ದಾರ್ ಅನಿಲ್ ತೋಮರ್, ಹವಾಲ್ದಾರ್ ಪಿಂಕು ಕುಮಾರ್, ಹವಾಲ್ದಾರ್ ಕಾಶೀರಾಯ್ ಬಮ್ಮನಹಳ್ಳಿ, ನಾಯ್ಬ್ ಸುಬೇದಾರ್ ಶ್ರೀಜಿತ್ ಎಂ ಮತ್ತು ಸಿಪಾಯಿ ಜಸವಂತ್‌ರೆಡ್ಡಿ ಅವರಿಗೆ ಶೌರ್ಯ ಪದಕವನ್ನು ರಾಷ್ಟ್ರಪತಿ ಅವರು ಪ್ರದಾನ ಮಾಡಿದರು. ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಸೇರಿದಂತೆ ಕೇಂದ್ರದ ಹಲವು ಸಚಿವರು, ಮೂರೂ ಸೇನಾ ಪಡೆ ಮುಖ್ಯಸ್ಥರು, ಹಲವು ಗಣ್ಯರು ಭಾಗವಹಿಸಿದ್ದರು.
President Kovind presents Shaurya Chakra to Major Ravi Kumar Chaudhary, Grenadiers 55th Battalion, Rashtriya Rifles. He displayed unparalleled courage and supreme leadership qualities during conduct of four successful operations, resulting in elimination of 13 terrorists. pic.twitter.com/6f6u87pUui
— President of India (@rashtrapatibhvn) May 10, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243