ದಿನದ ಸುದ್ದಿ

ಶಿವಮೊಗ್ಗದ ಪ್ರಥಮ ಮಹಿಳಾ ಎಸ್ಪಿಯಾಗಿ ಡಾ. ಅಶ್ವಿನಿ ಅಧಿಕಾರ ಸ್ವೀಕಾರ

Published

on

ಸುದ್ದಿದಿನ, ಶಿವಮೊಗ್ಗ : ಶಿವಮೊಗ್ಗದ ಪ್ರಥಮ ಮಹಿಳಾ ಎಸ್ಪಿಯಾಗಿ ಡಾ. ಅಶ್ವಿನಿ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.ಸರ್ಕಾರಿ ಗೌರವ ಸಲ್ಲಿಸಿ ನೂತನ ಎಸ್ಪಿಗೆ ಆತ್ಮೀಯವಾಗಿ ಪೊಲೀಸ್ ಸಿಬ್ಬಂದಿ ಬರಮಾಡಿಕೊಂಡರು.

ಅಭಿನವ್ ಖರೆ ಯಿಂದ ನೂತನ‌ ಎಸ್ಪಿಗೆ ಅಧಿಕಾರ ಹಸ್ತಾಂತರಿಸಿದರು. ನಂತರ ಮಾತನಾಡಿದ ಆಶ್ವಿನಿ ಅವರು,ಶಿವಮೊಗ್ಗ ಜಿಲ್ಲೆಗೆ ಎಸ್ಪಿಯಾಗಿ ಬರುತ್ತಿರುವುದು ಹೆಮ್ಮೆ ಅನ್ನಿಸುತ್ತಿದೆ.‌ ಜಿಲ್ಲೆ ಸಾಹಿತ್ಯ ಕ್ಷೇತ್ರದಲ್ಲಿ ಎಷ್ಟು ಹೆಸರುವಾಸಿಯಾಗಿದೆಯೋ, ಅಷ್ಟೇ ಕ್ರೈಂ ಕೇಸುಗಳು ಹೆಚ್ಚಾಗಿವೆ. ಜಿಲ್ಲೆಯಲ್ಲಿ ಶಾಂತಿವಾತವರಣ ನಿರ್ಮಿಸುವುದು ನಮ್ಮ ಗುರಿಯಾಗಿದೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version