ಸಿನಿ ಸುದ್ದಿ

ಇಂದಿಗೆ ಶಿವಣ್ಣನ 33ವರ್ಷಗಳ ಸಿನಿ ಪಯಣ ; ಅಭಿಮಾನಿಯ ಪ್ರೀತಿ ಪೂರ್ವಕ ಪತ್ರ..!

Published

on

80 ರ ದಶಕದ ಒಂದು ಸಿನಿಮಾ ರಂಗದ ಕಾರ್ಯಕ್ರಮ ದಲ್ಲಿ ರಜನಿಕಾಂತ್ ಕಮಲ್ ಹಾಸನ್ ಮುಂತಾದ ದೊಡ್ಡ ದೊಡ್ಡ ತಾರೆಯರ ಮಹಾಸಂಗಮವಾಗಿತ್ತು ಅದಾಗಲೆ ಸಿಂಗಾನಲ್ಲೂರು ಪುಟ್ಟಸ್ವಾಮಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು ಅಲ್ಲಿ ಒಬ್ಬ ಯುವನಟನ ಅಭಿನಯದ ಮೊದಲ ಚಿತ್ರದ ಒಂದು ತುಣುಕು ಪ್ರಸಾರ ಮಾಡಿದ್ದರು.

ಆ ತುಣಕನ್ನು ನೋಡಿ ಅಲ್ಲಿದ್ದವರಿಗೆಲ್ಲಾ ಮೈಜುಂ ಎನ್ನುವಂತೆ ಮಾಡಿತು. ಆ ತುಣುಕಲ್ಲಿ ಯುವ ನಟ ಯಾವುದೇ ಡ್ಯೂಪ್ ಬಳಸದೆ ಬಿಲ್ಡಿಂಗ್ ಇಂದ ಬಿಲ್ಡಿಂಗ್ ಹಾರುವ ದೃಶ್ಯ ಪ್ರಸಾರವಾಯ್ತು ಅದನ್ನು ನೋಡಿದ ರಜನಿ ಕಮಲ್ ರಂತಹ ಮುಂತಾದ ದೊಡ್ಡ ತಾರೆಯರಿಗೆ ಒಂದು ಕ್ಷಣ ಮೈ ರೋಮಾಂಚನವಾಯ್ತು . ಆ ಕಾರ್ಯಕ್ರಮದಲ್ಲಿದ್ದವರಲ್ಲರದ್ದು ಒಂದೇ ಕೂಗು ಒನ್ಸ್ ಮೋರ್ ಒನ್ಸ್ ಮೋರ್ ಈ ರೀತಿ ಸಿನಿರಂಗದ ಕಾರ್ಯಕ್ರಮದಲ್ಲಿ ಒನ್ಸ್ ಮೋರ್ ಒನ್ಸ್ ಮೋರ್ ಎಂದು ಆ ದೃಶ್ಯವನ್ನು ಸ್ಕ್ರೀನ್ ನಲ್ಲಿ ಹಾಕಿಸಿಕೊಂಡ ಯುವನಟ ಬೇರ್ಯಾರು ಅಲ್ಲ ಸಿಂಗಾನಲ್ಲೂರು ಪುಟ್ಟಸ್ವಾಮಿ ಅಲಿಯಾಸ್ ಶಿವರಾಜ್ ಕುಮಾರ್ ಅಲಿಯಾಸ್ ಈಗಿನ ಕನ್ನಡ ಚಿತ್ರರಂಗದ ದಿಗ್ಗಜ ಡಾ.ಶಿವಣ್ಣ.

ಆನಂದ್ ಸಿನೆಮಾ ಶತದಿನೋತ್ಸವದ ಸುದ್ದಿ

ಚಿತ್ರ ಆನಂದ್ ಸಿನೆಮಾ ಮೂಲಕ ಅಪ್ಪನ ಹೆಸರಿದ್ದರು ಅದನ್ನು ಎಲ್ಲೂ ದುರುಪಯೋಗ ಪಡಿಸಿಕೊಳ್ಳದೆ ತನ್ನದೆ ಆದಂತಹ ನಟನೆಯ ಮೂಲಕ ಪ್ರೇಕ್ಷಕರನ್ನು ರಂಜಿಸಿ ಕೋಟ್ಯಾಂತರ ಅಭಿಮಾನಿಗಳ ಹೃದಯವನ್ನು ತಮ್ಮ ಪುಟ್ಟ ಹೃದಯದಲ್ಲಿಟ್ಟುಕೊಂಡು ಒಬ್ಬ ಚಿತ್ರರಂಗದ ಲೀಡರ್ ಆಗಿ ಮೆರೆಯುತ್ತಿರುವ
ಇಂದು ನಮ್ ದೇವ್ರು ಹೀರೋ ಆಗುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಬರೋಬ್ಬರಿ 33 ವರ್ಷಗಳು ತುಂಬಿ 34 ನೇ ವರ್ಷಕ್ಕೆ ಪದಾರ್ಪಣೆ ಮಾಡ್ತಿದ್ದಾರೆ.

33 ಅಲ್ಲ 100 ಆಗಲಿ 200 ಆಗಲಿ ಚಿತ್ರರಂಗಕ್ಕೆ ಚಿತ್ರಗಳಿಗೆ ನೀವು ಯಾವಾಗಲೂ ಹೀರೋನೇ
ನೀವು ನಮ್ಮಲ್ಲಿ ದೇವ್ರು ಕಾಣ್ತಿರಾ ಆದರೆ ಅದಕ್ಕೂ ಮೀರಿ ನಿಮ್ಮನ್ನ ನಾವು ಆರಾಧಿಸ್ತಿವಿ ಕೊನೆವರೆಗೂ ನಮ್ ಹೃದಯದಲ್ಲಿ ನೀವು ಯಾವಾಗಲೂ ಸದಾ ಇರ್ತಿರಾ ಕೊನೆವರೆಗೂ ನಮ್ ಬಾಯಿಂದ ಜೈಕಾರ ಹಾಕಿಸಿಕೊಳ್ಳೋ ಒಂದೇ ಒಂದು ಹೆಸರು ಅದು ನೀವು ಮಾತ್ರ ನಿಮ್ಮ ಈ ಸಾಧನೆ ,ಯಶಸ್ಸು, ಇತರ ಅನುಭವಿ ಮತ್ತು ಯುವ ನಟರಿಗೆಲ್ಲಾ ಮಾದರಿ ಮತ್ತು ಸ್ಪೂರ್ತಿ.

ಲಿಂಕ್ ಮೇಲೆ ಕ್ಲಿಕ್‌ ಮಾಡಿ

https://www.facebook.com/408228552555798/posts/2338120279566606/

ಶಿವಣ್ಣ ಅಭಿಮಾನಿ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version