ದಿನದ ಸುದ್ದಿ

ದಾವಣಗೆರೆ | ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಜಿಲ್ಲಾ ಸಂಚಾಲಕರಾಗಿ ಶಿವಬಸಯ್ಯ ಚರಂತಿಮಠ ನೇಮಕ

Published

on

ಸುದ್ದಿದಿನ, ದಾವಣಗೆರೆ : ನಗರದ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ‌ ಸಂಗೀತ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿರುವ ಶಿವಬಸಯ್ಯ ಚರಂತಿಮಠ ಅವರನ್ನು ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ದಾವಣಗೆರೆ ಜಿಲ್ಲಾ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆಯೆಂದು ಸಮಿತಿಯ ರಾಜ್ಯ ಸಂಚಾಲಕರಾದ ಎಂ. ಜಿ. ಶಶಿಕಲಾ ಮೂರ್ತಿ ನಲ್ಕುದುರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೂಜ್ಯರ ಅಭಿಮಾನಿ ಭಕ್ತರ ಮಹಾಬಳಗವಾದ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಸಂಸ್ಥಾಪಕರಾದ ವೇ. ಪೂಜ್ಯಶ್ರೀ ಚನ್ನವೀರಸ್ವಾಮಿಗಳು ಹಿರೇಮಠ ಸಂಸ್ಥಾನ (ಕಡಣಿ) ಯವರ ಅಪ್ಪಣೆಯ ಆದೇಶದ ಮೇರೆಗೆ ಶಿವಬಸಯ್ಯ ಚರಂತಿಮಠ ನೇಮಕ ಮಾಡಲಾಗಿದೆ ಎಂದಿದ್ದಾರೆ.

ತಮ್ಮ ಅಧಿಕಾರದ ಅವಧಿಯು ಎರಡು ವರ್ಷ ಅಥವಾ ಸಂಸ್ಥಾಪಕರು ಒಪ್ಪುವವರೆಗೆ ಇರುತ್ತದೆ. ಡಾ. ಪಂ. ಪುಟ್ಟರಾಜರ ಜೀವನ ಸಾಧನೆ ಸಂದೇಶವನ್ನು ಮತ್ತು ಅವರ ಸಾಹಿತ್ಯ ಪ್ರಚಾರ ಮತ್ತು ಪ್ರಸಾರದೊಂದಿಗೆ ಆಧುನಿಕ ವಚನಕಾರರಿಗೆ ಮತ್ತು ಭಕ್ತಿ ಪಂಥದ ಕವಿ ಗಾಯಕರಿಗೆ ವೇದಿಕೆಯಾಗಿ ಕಾರ್ಯ ನಿರ್ವಹಿಸುವ ಮೂಲಕ ವಚನ ಸಾಹಿತ್ಯ ಮತ್ತು ಭಕ್ತಿ ಸಾಹಿತ್ಯ ಸೇವೆಯನ್ನು, ತಾವು ತಮ್ಮ ಇತಿ ಮಿತಿಯೊಳಗೆ ಜಿಲ್ಲೆಯಾದ್ಯಂತ ಪಸರಿಸಲು ನಮ್ಮೊಂದಿಗೆ ಕೈಜೋಡಿಸುವ ವಿಶ್ವಾಸವನ್ನು ಹೊಂದಿದ್ದೇವೆ. ಈ ಪವಿತ್ರ ಸೇವಾ ಭಾಗ್ಯ ತಮ್ಮ ಸುಕೃತವೆಂದು ಪ್ರಾಂಜಲ ಮನಸ್ಸಿನಿಂದ ಗುರು ಸೇವೆ ಸಲ್ಲಿಸಲು ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ನುಡಿದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version