ನೆಲದನಿ
ಅಪರೂಪಕ್ಕೊಮ್ಮೆ,ಅಪರೂಪದ ವ್ಯಕ್ತಿ ‘ಶೋಭಾ ಗುನ್ನಾಪೂರ’..!
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಿರೇಮಸಳಿರವರು,ತವರುಮನೆ ಶಿರಶ್ಯಾಡ.ಗಂಡ ತುಕಾರಾಮ್ ಗುನ್ನಾಪೂರ ರೈತರಾಗಿದ್ದಾರೆ. ಇವರಿಗೆ ಮೂವರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗು,ಓದುವ ಹವ್ಯಾಸ ಉಳ್ಳವರು ಎಲ್ಲಿದ್ದರೂ,ಸುಖಿಯಾಗಿರಬಲ್ಲರು ಎಂಬ ಮಾತೊಂದಿದೆ,ಆ ಮಾತಿಗೆ ಕೈಗನ್ನಡಿ ಹಾಗೂ ಅಲ್ಪ ವಿದ್ಯೆ ಮಹಾಗರ್ವಿ ಎಂಬ ಮಾತಿಗೆ ತದ್ವೀರುದ್ಧವಾಗಿದ್ದಾರೆ ಈ ಶೋಭಾ ಅಮ್ಮನವರು.
ಓದಿದ್ದು ಕೇವಲ ಒಂಬತ್ತನೇ ತರಗತಿಯವರೆಗೆ ಮಾತ್ರ ಆದರೆ ಕನ್ನಡ ಸಾಹಿತ್ಯವನ್ನು ಓದುವ ಅಪಾರ ಆಸಕ್ತಿ ಇರಿಸಿಕೊಂಡಿದ್ದಾರೆ.ಮುಂದೆ ಕಲಿಯಲು ಹಳ್ಳಿಯಲ್ಲಿ ಹೆಣ್ಮಕ್ಕಳಿಗೆ ಆಸ್ಪಾದವಿರಲಿಲ್ಲ.ನಮ್ಮ ತಂದೆಯವರು ನಾವು ದೊಡ್ಡವರಾದ ಬಳಿಕ ನೀವು ಶಾಲೆಗೆ ಹೋಗೋದು ಬೇಡ ಅಂತ್ಹೇಳಿ ನಮ್ಮನ್ನು ಮದುವೆ ಮಾಡಿಕೊಟ್ಟರು.ನಮಗಿನ್ನೂ ಕಲಿಯಬೇಕೆಂಬ ಆಸಕ್ತಿ ಇನ್ನೂ ಇತ್ತು.ಆದರೆ ಹಳ್ಳಿಯಲ್ಲಿ ದೊಡ್ಡವರಾದ ಬಳಿಕ ಮತ್ತೆಲ್ಲಿ ಶಾಲೆಗೆ ಕಳಿಸಬೇಕಂತ ಹೇಳಿ ಕೊಟ್ಟು ಮದುವೆ ಮಾಡಿದರು.
ಆದರೆ ನಾವು ಕಲಿಯಲೇಬೇಕೆಂಬ ಛಲವಿರುವುದರಿಂದ ಬರೆಯಲು,ಓದಲು ರೂಢಿಸಿಕೊಂಡೆವು.ಕಸದಾಗಿನ ಯಾವುದಾದರೂ ಪೇಪರ್ ಬಿದ್ದಿತ್ತೆಂದರೆ ನನಗೆ ಅದು ಓದದೇ ಇದ್ರೆ ಸಮಾಧಾನನೇ ಆಗುತ್ತಿರಲಿಲ್ಲ.ನಮ್ಮದು ಕೂಡುತುಂಬು ಕುಟುಂಬ ಏಳು ಮಂದಿ ಅಣ್ಣ-ತಮ್ಮದಿಂರು ಏಳು ಮಂದಿ ಹೆಣ್ಣುಮಕ್ಕಳು ಅತ್ತೆ,ಮಾವ ಅಷ್ಟಿದ್ದರೂ ಅವರ ಜೊತೆ ನಾನು ಕೆಲಸ ಮಾಡಿ ಓದು-ಬರಹದ ಕಡೆ ಲಕ್ಷ್ಯ,ಸಮಯವೂ ಕೊಟ್ಟಿದ್ದೆ. ಬೇಕಾದಷ್ಟೂ ಕೆಲಸವಿರಲದು ಓದು ಬರಹಕ್ಕೆ ಎರಡು ಗಂಟೆ ಕಡ್ಡಾಯವಾಗಿ ಸಮಯ ಮೀಸಲು ಮಾಡಿ ಓದುತ್ತಿದ್ದೆ,ಬರೆಯುತ್ತಿದ್ದೆ.ಈಗ ಅದು ಪ್ರಸ್ತುತ ಓದಿ-ಓದಿ ಅಭ್ಯಾಸವಾಗಿ ಕಥೆ,ಕಾದಂಬರಿ ಬರೆಯಲು ತೊಡಗಿದೆ.
ಮುಂದೆ ಬರುಬರುತ್ತಾ ನನ್ನ ಮಕ್ಕಳು ನನಗೆ ಬುದ್ಧಿ ಹೇಳತೋಡಗಿದರು.ಅಮ್ಮ ನೀನು ಇಷ್ಟೇಲ್ಲಾ ಕಥೆ,ಕಾದಂಬರಿ ಓದುತ್ತಿಯಾ,ಬರೆಯುತ್ತೀಯಾ ಏನಾದರೂ ನೀನು ಬರೆ ಎಂದರು.ಮಕ್ಕಳ ಪರಿಣಾಮವೇ ಇರಬಹುದು, ಇವರ ಎರಡು ಪುಸ್ತಕಗಳು (ಕಥಾ-ಸಂಕಲನ,ಆತ್ಮಚರಿತ್ರೆ) ಮುದ್ರಣದ ಹಂತದಲ್ಲಿವೆ.ಇವರು ಬರೆದ ಕವಿತೆಗಳು ಪಂಜಾಬಿ ಭಾಷೆಗೆ ಅನುವಾದಗೊಂಡಿವೆ ಹಾಗೂ ಕಥೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.(ಬದುಕಿನ ಪಯಣವನ್ನು ಎಳೆ-ಎಳೆಯಾಗಿ ಖುಷಿಯಿಂದ ಬಿಚ್ಚಿಟ್ಟುತ್ತಾರೆ.)
ಬಾಲ್ಯದಲ್ಲಿಯೂ ಸಾಕಷ್ಟು ಕಷ್ಟ ಅನುಭವಿಸಿ,ಸದಾ ಸಂಸಾರದ ಜಂಜಾಟದಲ್ಲಿದ್ದರೂ,ದಿನಕ್ಕೆರಡು ಗಂಟೆ ಕಡ್ಡಾಯವಾಗಿ ಚಾಚೂ-ತಪ್ಪದೇ ಓದಲು ಸಮಯವಿರುಸುತ್ತಿದ್ದರಿವರು,ಆದರೆ ನನಗನ್ನಿಸಿದ್ದು ಈಗ ಅರ್ಧದಿನ,ಒಮ್ಮೊಮ್ಮೆ ದಿನಪೂರ್ತಿಯೂ ಓದಬಹುದೆಂದು ನಂಬಿಕೆಯಿದೆ,ಕಾರಣ ತುಂಬಾ ಕಷ್ಟದಿಂದ,ಹಳ್ಳಿಯ ಮಹಿಳೆ ಹೊಲ-ಮನೆ ಕೆಲಸ ತಾನೇನೂ,ತನ್ನ ಕುಟುಂಬದ ಜಗತ್ತೇನೂ ಎನ್ನುತ್ತಿದ್ದರಿವರು. *ಮಕ್ಕಳಿಗೆ ಅಕ್ಕ-ಪಕ್ಕದ ಮಕ್ಕಳಿಗೂ ಶುದ್ಧಬರಹ ಹಾಕಿಕೊಟ್ಟು,ದಿನಾಲೂ ಶಾಲೆಯ ಮನೆಕೆಲಸ ಮಾಡಿಸುತ್ತಿದ್ದರು.ಇಂದು ಆ ಮಕ್ಕಳು ಒಳ್ಳೆಯಸ್ಥಾನದಲ್ಲಿ,ಸ್ಥಿತಿಯಲ್ಲಿದ್ದಾರೆ.
ಇಂದು ಇವರ ಕುಟುಂಬ ಸುಸ್ಥಿರವಾಗಿದೆ,ಮಕ್ಕಳೂ ಸಹ ಉತ್ತಮವಾದ ಉದ್ಯೋಗದಲ್ಲಿದ್ದಾರೆ.ಈಗಲೂ ಸಹ ಹೊಲ-ಮನೆ ಕೆಲಸ ಮಾಡುತ್ತಾ ಅತಿಹೆಚ್ಚು ಸಮಯ ಓದುತ್ತಾರೆ.ಬದುಕಿನ ಒತ್ತಡದ ನಡುವೆ ಪುಸ್ತಕಗಳನ್ನು ಓದುವುದು ಬಿಟ್ಟಿರಲಿಲ್ಲ.ಅದರ ಪರಿಣಾಮವಾಗಿಯೇ ಇವರಿಂದ ಇತ್ತಿಚೀಗೆ ಕಥೆ,ಕವಿತೆಗಳು ಹತ್ತಾರು ಸೃಷ್ಟಿ ಆಗಿದ್ದಾವೆ,ಆಗುತ್ತವೆಯೂ ಕೂಡ ಅದು ಹೀಗೆಯೇ,ಇವರು ಕನ್ನಡ ಸಾಹಿತ್ಯ ಸೇವೆಯನ್ನು ಮಾಡಲಿಕ್ಕೆ ಇನ್ನೂ ಆ ಅಕ್ಷರಾಂಬೆ ಶಕ್ತಿ ನೀಡಲೆಂದು ಆಶಿಸೋಣ.!
ಸಾಮಾನ್ಯ ಹಳ್ಳಿಯ ಹೆಣ್ಣುಮಗಳಾದ ಶೋಭಾ ಗುನ್ನಾಪೂರ ಅಮ್ಮನವರು.ತಮ್ಮ ಬದುಕಿನ ಇಚ್ಛಾಶಕ್ತಿಯಿಂದ ನೋವು ನಲಿವುಗಳಿಂದ ಆಚೆ ಬಂದು ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘದ ಪ್ರತಿನಿಧಿಯಾಗಿ ಅನೇಕ ಹೆಣ್ಣುಮಕ್ಕಳ ಬದುಕಿಗೆ ಸ್ಪೂರ್ತಿಯಾಗಿದ್ದಾರೆ. ಪ್ರಗತಿಪರ ರೈತರಾಗಿರಾಗಿದ್ದಾರೆ.ಹಿರೇಮಸಳಿಯಲ್ಲಿ ಕುಡಿತ ಬಿಡಿಸಲು,ಮಕ್ಕಳಿಗೆ ವಿಧ್ಯಾಭ್ಯಾಸ ನೀಡಲು, ನೊಂದ ಮಹಿಳೆಯರಿಗೆ ಸಾಂತ್ವಾನ ನೀಡಿ ಆಸರೆಯಾಗಿ ನಿಲ್ಲಲು ಶ್ರಮಿಸಿದ್ದಾರೆ.
ಇವರು ಮಕ್ಕಳಿಗಾಗಿ ಆಸ್ತಿ ಮಾಡಲಿಲ್ಲ,ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿದ್ದಾರೆ.!
ಇವರ ಮಕ್ಕಳು ಬೇರೆ ಬೇರೆ ಊರಲ್ಲಿ ನೌಕ್ರಿ(ಉದ್ಯೋಗ) ಹಿಡಿದು ಹೆಮ್ಮೆ ತರುವ ಕೆಲಸ ಮಾಡಿದ್ದಾರೆ,ಮಾಡುತ್ತಿದ್ದಾರೆಯೂ ಕೂಡ ಬೆಂಗಳೂರಲ್ಲಿ ಸುನಿಲ್ ಕುಮಾರ್ ಗುನ್ನಾಪೂರ ಎನ್ನುವವರು ಲಾಯಾರ್ ಆಗಿ,ಬಾಗಲಕೋಟೆಯಲ್ಲಿ ಅನಿಲ್ ಕುಮಾರ್ ಗುನ್ನಾಪೂರರವರು ಸರ್ವೆಯರ್ ಕೆಲಸದಲ್ಲಿದ್ದು ಮತ್ತು ಕವಿಗಳಾಗಿದ್ದಾರೆ.
ಇನ್ನೊಬ್ಬರು ಭೀಮರಾವ್ ಧಾರವಾಡದಲ್ಲಿ ಪ್ರಸ್ತುತ ಕೆ.ಎ.ಎಸ್ ಪರೀಕ್ಷೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಇನ್ನೊಬ್ಬ ಹೆಣ್ಣುಮಗಳು ಅನಿತಾ ಗಂಡನ ಮನೆಯಲ್ಲಿ ಸುಖ ಸಾಂಸರೀಕವಾದ ಜೀವನವನ್ನು ಸಾಗಿಸುತ್ತಿದ್ದಾರೆ.
ಪ್ರೀಯ ಓದುಗರೇ,
ಶೋಭಾ ಅಮ್ಮನವರು ಮಹಿಳೆಯರಿಗೆ ಒಂದು ಸಲಹೆನ ನೀಡುತ್ತಾರೆ ಬನ್ನಿ,ಅವರ ಮಾತಿನಲ್ಲೇ ಕೇಳೋಣ..
ಹೆಣ್ಣುಮಕ್ಕಳು ಸದಾ ಕೆಲಸ-ಕೆಲಸ ಅಂತ ಆರೋಗ್ಯದ ಕಡೆ ಗಮನವೇ ಹರಿಸುವುದಿಲ್ಲ.ಸದಾ ಗಂಡ,ಮಕ್ಕಳು,ಸಂಸಾರದಲ್ಲಿಯೇ ಅವರ ಸಮಯ ಕಳೆದು ಹೋಗುತ್ತದೆ.
ಆರೋಗ್ಯದ ಬಗೆಯಲ್ಲಿ ಸರಿಯಾದ ಸಮಯಕ್ಕೆ ಊಟ ಮಾಡುವುದಿಲ್ಲ,ಸಮಯಕ್ಕೆ ಹೊಂದುವಂತೆ ನಿದ್ದೆಯೇ ಬರುವುದಿಲ್ಲ,ಬರೀ ಸಂಸಾರದಲ್ಲಿಯೇ ಹೋಗುತ್ತದೆ.ಅದಕ್ಕೆ ಇದೆಲ್ಲದರ ಒತ್ತಡದ ಕೆಲಸದ ಜೊತೆಯೂ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ.ಜೊತೆಗೆ ಸರಿಯಾಗಿ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸೋಣ,ಆ ಮಕ್ಕಳನ್ನೇ ನಾವು ಆಸ್ತಿ ಮಾಡಿಕೊಳ್ಳೋಣ. “ನಾವು ಆಸ್ತಿ ಮಾಡುವುದು ಬೇಕಾಗಿಲ್ಲ.ಮಕ್ಕಳೇ ನಮಗೊಂದು ಆಸ್ತಿ”.
ಆದರೆ ಸರಿಯಾಗಿ ಅಭ್ಯಾಸ ಕೊಟ್ಟು ಮಕ್ಕಳಿಗೆ ಮಾರ್ಗದಾಳುಗಳಾಗೋಣ.ನಮಗೆಷ್ಟೇ ಬರಲಿ,ತಿಳಿದಿರಲಿ ಮಕ್ಕಳಿಗೆ ಹೇಳಬೇಕು.ಉದಾಹರಣೆಗೆ ನಾವೇ ಒಂದು ಪುಸ್ತಕವನ್ನು ತೆಗೆದುಕೊಂಡು ಕೂತರೇ,ಮಕ್ಕಳೂ ಸಹ ಪುಸ್ತಕ ತೆಗೆದುಕೊಂಡು ಕುಳಿತುಕೊಳ್ಳುತ್ತಾರೆ.ಟಿವಿ ನೋಡಿದರೆ,ಅವರೂ ಟಿವಿ ನೋಡುತ್ತಾ ಕೂರುತ್ತಾರೆ.ಅದು ಪ್ರತಿಯೊಬ್ಬ ತಾಯಿಯ ಅನುಕರಣೆಯಲ್ಲಿ ಅಡಗಿರುತ್ತದೆ.ಪುರುಷರು(ಗಂಡ) ಏನೂ ಮಾಡುವುದಿಲ್ಲ.ಅವರು ತಂದು ಹಾಕಿ ಹೊರಗಡೆ ಹೋಗಿ ಬಿಡುತ್ತಾರಷ್ಟೇ,(ತುಸು-ನಸುನಕ್ಕು) ಅದು ಅನುಕರಣೆ ತಾಯಿಕಡೆ ಇರುತ್ತದೆ.
ತಾಯಿಯಾಗಿ ಸುಸಜ್ಜಿತವಾಗಿ ವಿದ್ಯೆ-ಬುದ್ಧಿ,ಸಂಸ್ಕೃತಿ ಮಕ್ಕಳಿಗೆ ಕಲಿಸಿದೇವೆಂದರೆ,ಮಕ್ಕಳು ತಮ್ಮಿಂದ ಅಚಾನಕವಾಗಿ ಕಲಿಯುತ್ತಾರೆ.ತಾಯಿಗಳಾದ ನಾವೇ ಏನೂ ಕಲಿಸದೇ ಬರೀ ಟಿವಿ ನೋಡೋದು,ನೌಕರಸ್ಥ ತಾಯಿಯವರು ಉದ್ಯೋಗಕ್ಕೇನೆ ಸೀಮಿತವಾಗಿ ಮಕ್ಕಳಿಗೆ ನಮಗೆ ಆಗುವುದಿಲ್ಲ,ಓದಿರಿ,ಬರೆಯಿರಿ ಅಂದರೆ ಪಾಪ ಮಕ್ಕಳು ಏನೂ ಮಾಡಲಸಾಧ್ಯ.ಸಣ್ಣ ಮಕ್ಕಳಿಗೆ ನಾವು ಒತ್ತಡದ ಜೀವನದಲ್ಲಿಯೂ ಸ್ವಲ್ಪ ಹೇಳಬೇಕು.ತಳಪಾಯ ದುರಸ್ತಿ ಮಾಡಿ,ಒಳ್ಳೆಯ ಮಾರ್ಗದರ್ಶನ ನಾವು ನೀಡಿದರೆ ಮಕ್ಕಳ ಕೈ ಹಿಡಿಯುವವರೇ ಯಾರಿಲ್ಲ ಅದಕ್ಕೆ ನಮ್ಮ ಮಕ್ಕಳಿಗೆ ಸರಿಯಾಗಿ ಕಲಿಸಬೇಕು.
ಈ ಹೆಣ್ಣುಮಕ್ಕಳು(ಪ್ರೌಢಶಾಲಾ-ಮಕ್ಕಳು) ಇದಾರಲ್ಲ,ಈ ದೇಶದ ಪ್ರಜೆಗಳು.ತೊಟ್ಟಿಲು ತೂಗುವ ಇವರ ಕೈಗಳು,ಜಗತ್ತನೇ ತೂಗುತ್ತದೆ. ಏನೋ ಒಂದು ತಾರತಮ್ಯಕ್ಕೆ ಹೆಣ್ಣು ಹುಟ್ಟಬಾರದೆಂದು ಹೇಳುತ್ತಾರೆ.ಮೊದಲು ಹೆಣ್ಣಾಗಬೇಕು.ಹೆಣ್ಣಿನಿಂದಲೇ ಜಗತ್ತು,ಹೆಣ್ಣಿನಿಂದಲೇ ಸರ್ವಸ್ವ.ಆ ಹೆಣ್ಣು ನಮಗೆ ಎಷ್ಟು ಮಹತ್ವವೆಂದರೆ,ಗಂಡುಮಕ್ಕಳಿಗಿಂತ ಹೆಣ್ಣುಮಕ್ಕಳಿರಬೇಕು.ಒಂದು ಮಾದರಿಯಾಗುತ್ತಾರೆ.ಕಷ್ಟಕ್ಕೂ-ಸುಖಕ್ಕೂ ಹೆಣ್ಮಕ್ಕಳು ಆಗುತ್ತಾರೆ,ಗಂಡುಮಕ್ಕಳು ಆಗುವುದಿಲ್ಲ.ಸತ್ತರೆ ಗಂಡು ಮಕ್ಕಳು ದೂರಹೋಗಿ ಕೂರುತ್ತಾರೆ,ಹೆಣ್ಮಕ್ಕಳು ಕೂಡುತ್ತಾರೇನೂ.?
ಅದಕ್ಕೆ ಹೆಣ್ಣು-ಗಂಡೆಂಬ ತಾರತಮ್ಯ ಮಾಡದಿರಿ.ನಮಗೆ ಹೆಣ್ಣುಮಕ್ಕಳು-ಗಂಡುಮಕ್ಕಳೂ ಬೇಕು.ಅಷ್ಟೇ ಚಿಕ್ಕ-ಚೊಕ್ಕ ಸಂಸಾರದ ಜೀವನ ಮಾಡಿಕೊಂಡು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕೆಂದು ಕೇಳಿಕೊಳ್ಳುತ್ತೇನೆ.
ಪದವಿ,ಸರ್ಟಿಫೀಕೇಟ್ ಇಲ್ಲದ ಮಹಿಳೆಯೂ ಸಾಧಿಸಬಹುದೆಂದು ಹೆಣ್ಣು ಅಬಲೆಯಲ್ಲ ಸಬಲೆ ಎಂದು ತೋರಿಸಿ ಇಂದು ನಮ್ಮ ಮುಂದೆ ಮಾದರಿಯಾಗಿ ನಿಂತಿದ್ದಾರೆ.ಪ್ರಚಾರದಿಂದ ದೂರ ಇರುವ ಶೋಭಾ ಗುನ್ನಾಪೂರ ಅಮ್ಮನವರು ಎಲೆ ಮರೆಯ ಕಾಯಿಯಂತೆ ತಮ್ಮ ಕೆಲಸ ಪ್ರೀತಿಯಿಂದ ಮಾಡುತ್ತಾ ಸಾಗಿದ್ದಾರೆ,ಸಾಗುತ್ತಿದ್ದಾರೆಯೂ ಕೂಡ..ಅವರ ಸೇವೆಯೂ,ಹೀಗೆಯೇ ಸಾಗುತ್ತಾ ಅವಿಸ್ಮರಣೀಯವಾಗಿ ಇತಿಹಾಸದ ಪುಟಗಳಲ್ಲಿ ಸೇರಲಿ ಎನ್ನುತ್ತಾ..!
–ಶಿವರಾಜ್ ಮೋತಿ
ಪದವಿ ವಿಧ್ಯಾರ್ಥಿ
ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243