ಲೈಫ್ ಸ್ಟೈಲ್

ಪಕ್ಷಿಗಳ ತಾಣ ಈ ‘ಶುಕವನ’ದಲ್ಲೊಂದು ಸುತ್ತು..!

Published

on

ಮೈಸೂರಿನಲ್ಲಿರುವ 'ಶುಕವನ'

ಮೈಸೂರು ಎಂದರೆ ನಮಗೆ ನೆನಪಿಗೆ ಬರುವುದು ಚಾಮುಂಡಿ ಬೆಟ್ಟ, ಅರಮನೆ,ಕಾರಂಜಿ ಕೆರೆ,ಕುಕ್ಕರಳ್ಳಿ ಕೆರೆ, ಮೃಗಾಲಯ ಹೀಗೆ ಇನ್ನೂ ಹಲವು. ಹಾಗೆ ಇಲ್ಲಿನ ಅವಧೂತ ಪೀಠವು ಕೂಡಾ ಒಂದು. ಈ ಸ್ಥಳವು ಎಷ್ಟೋ ಜನರಿಗೆ ತಿಳಿದಿಲ್ಲ. ಈ ಅವಧೂತ ಪೀಠವು ಚಾಮುಂಡಿ ಬೆಟ್ಟಕ್ಕೆ ಹೋಗುವ ಸಾಲು ಮೆಟ್ಟಿಲುಗಳ ದಾರಿಯಲ್ಲಿದೆ.

ಈ ಅವಧೂತ ಪೀಠದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ನಿರ್ಮಿಸಿರುವ ಒಂದು ಶುಕವನ’ ಮತ್ತು ಬ್ನೊಸಾಯಿ ಉದ್ಯಾನವಿದೆ. ಈ ವನವನ್ನು 2012 ರಲ್ಲಿ ಆರಂಭಿಸಲಾಯಿತು. ಒಂದು ಎಕರೆ ಜಾಗವನ್ನು ಇದಕ್ಕಾಗಿ ಬಳಸಲಾಗಿದೆ .

ಶುಕವನ

‘ಶುಕವನ’ ಆಶ್ರಮದ ಆವರಣದೊಳಗಿನ ಗಿಣಿಗಳ ಉದ್ಯಾನ. ಪಕ್ಷಿಗಳ ಪುನರ್ವಸತಿ ಕೇಂದ್ರ. ಜಗತ್ತಿನಾದ್ಯಂತದ ಅದೆಷ್ಟೋ ಜಾತಿಯ ಬಣ್ಣಬಣ್ಣದ ಗಿಳಿಗಳಿಗೆ ಇಲ್ಲಿ ನೆಲೆಯಾಗಿದೆ. ಗಿಣಿಗಳು ಮಾತ್ರವಲ್ಲದೆ ಬೇರೆ ಬೇರೆ ಜಾತಿಯ ಪಕ್ಷಿಗಳನ್ನೂ ಇಲ್ಲಿ ವಿಶೇಷ ಆರೈಕೆ ನೀಡಿ ಪೋಷಿಸಲಾಗುತ್ತದೆ. ಸ್ವತಃ ಸ್ವಾಮೀಜಿಯವರೇ ಇವುಗಳ ಆರೈಕೆಗೆ ನಿಲ್ಲುತ್ತಾರೆಂಬುದು ವಿಶೇಷ. ಪಕ್ಷಿಗಳ ಸಂಗದಲ್ಲಿ ಗಿಣಿಗಳಿಗೆ ವಿಶೇಷ ಬಗೆಯಲ್ಲಿ ಮಾತನಾಡುವುದನ್ನೂ ಕಲಿಸಿದ ಹೆಗ್ಗಳಿಕೆ ಸ್ವಾಮೀಜಿಯವರದ್ದು.

470ಕ್ಕೂ ಹೆಚ್ಚು ಅಪರೂಪದ ಪ್ರಭೇದದ 2 ಸಾವಿರಕ್ಕೂ ಪಕ್ಷಿಗಳಿಗೆ ಆಶ್ರಯ ಕಲ್ಪಿಸಿರುವ ಶುಕವನ ಗಿನ್ನಿಸ್ ಪುಸ್ತಕದಲ್ಲೂ ದಾಖಲಾಗಿದೆ. ಎಲ್ಲಾ ಹಕ್ಕಿಗಳ ಚಿಲಿಪಿಲಿ, ವಿವಿಧ ರೀತಿಯ ಕೂಗುಗಳು ಕೇಳಲು ಮನಸ್ಸಿಗೆ ತುಂಬ ಸಂತೋಷವನ್ನು ನೀಡುತ್ತದೆ.ಅಲ್ಲಿ ಇರುವ ಎಲ್ಲಾ ಪಕ್ಷಿಗಳಿಗು ಹೆಸರು ಇದೇ. ಕೆಲವೊಂದು ಪಕ್ಷಿಗಳು ನಾವು ಮಾತನಾಡಿಸಿದಾಗ ಪ್ರತಿಕ್ರಿಯೆ ತೋರಿಸುತ್ತವೆ.

ಈ ಜಾಗದಲ್ಲಿ ಸಾಮಾನ್ಯ ಜನಗಳಿಗೆ ಪಕ್ಷಿಗಳ ಜೊತೆ ಬೆರೆತು ಆನಂದವನ್ನು ಹೊಂದಲು ಹಾಗೂ ಪೋಟೋ ತೆಗಿಸಿ ಕೊಳ್ಳಲು ಒಂದು ಅನುಕೂಲ ಮಾಡಿದಾರೆ. ನಮ್ಮ ಕೈಯಲ್ಲಿ ಹಣ್ಣಿನ ಚೂರಿರುವ ತಟ್ಟೆ ಕೊಡುತ್ತಾರೆ,ಅದನ್ನು ಹಿಡಿದು ಒಳ ಹೊಗುತ್ತಿದಂತೆ ಪಕ್ಷಿಗಳು ನಮ್ಮ ಮೇಲೆ ಹಾಗೂ ನಾವು ಹಿಡಿದಿರುವ ತಟ್ಟೆಯ ಮೇಲೆ ಬಂದು ಕುಳಿತ್ತುಕೊಳುತ್ತವೆ. ಆ ಕ್ಷಣ ಎಲ್ಲರಿಗೂ ತುಂಬ ಖುಷಿ ಯನ್ನು ಕೊಡುತ್ತದೆ.

ಮೆಕಾವ್(ಸ್ಕಾರ್ಲೆಟ್ ಮೆಕಾವ್, ಮಿಲಿಟರಿ ಮೆಕಾವ್, ಶಮ್ ರಾಕ್ ಮೆಕಾವ್), ಲಾರಿಕೀಟ್ , ಕಾಂಗೊ ಆಫ್ರಿಕನ್ ಗ್ರೇ ಗಿಳಿ, ಮಿಚೆಲ್ ಕೊಕಾಟೂ…ಇನ್ನೂ ಹಲವು ಬಗೆಯ ಪಕ್ಷಿಗಳು ತಮ್ಮ ಗಾತ್ರ, ವಿವಿಧ ಬಣ್ಣ, ಕೊಕ್ಕು, ಅವು ಮಾಡುವ ಕಲರವ ಎಲ್ಲರ ಗಮನ ಸೆಳೆಯುತ್ತದೆ. ಈ ಗಿಳಿಗಳು ಸಾಮಾನ್ಯವಾಗಿ 25-50 ವರ್ಷಗಳವರೆಗೆ ಬದುಕುತ್ತವೆ. ಇದುವರೆಗೆ ಸತ್ತ ಹಕ್ಕಿಗಳಲ್ಲಿ ಅತ್ಯಂತ ಮುದಿಯಾದ ಹಕ್ಕಿ 83 ವರ್ಷ ಬದುಕಿತ್ತು ಎನ್ನುವ ಮಾಹಿತಿಯು ಇದೆ.

ಪಕ್ಷಿಗಳಿಗೆ ಪ್ರತಿದಿನವೂ ಬೀಜಗಳು, ಕಾಳುಗಳು, ಹಣ್ಣುಗಳನ್ನು ಕೊಡುತ್ತಾರೆ. ಹಗಲಿನಲ್ಲಿ ಹಕ್ಕಿಗಳನ್ನು ಗೂಡಿನಿಂದ ವನದಲ್ಲೆ ಹಾರಾಡಲು ಬಿಡುತ್ತಾರೆ, ಅವು ಹಾರಾಡಿದ ನಂತರ ತಮ್ಮ ಗೂಡಿಗೆ ತಾವಾಗಿಯೇ ಮರಳುತ್ತವೆಂತೆ, ದಾರಿ ತಪ್ಪಿದವುಗಳನ್ನು ಸಿಬ್ಬಂದಿ ಗೂಡಿಗೆ ಮರಳಿಸುತ್ತಾರೆ.

ಬೋನ್ಸಾಯ್ ಉದ್ಯಾನ

ಶುಕವನದ ಪಕ್ಕದಲ್ಲೇ ಕುಬ್ಜವಾಗಿ ಬೆಳೆಸಿದ ಮರಗಳು ಹಾಗೂ ಗಿಡಗಳನ್ನು ಈ ಬೋನ್ಸಾಯ್ ಉದ್ಯಾನದಲ್ಲಿ ನೋಡ ಬಹುದಾಗಿದೆ. ಈ ಉದ್ಯಾನವನ್ನು 2005ರಲ್ಲಿ ತೆರೆಯಲಾಯಿತು. ಇಲ್ಲಿ ಬೆಳೆಸಿರುವ ವಿವಿಧ ಬೋನ್ಸಾಯ್ ಗಿಡಗಳಿಂದ ಈ ಉದ್ಯಾನವನ ಗಿನ್ನಿಸ್ ಪುಸ್ತಕದ ದಾಖಲೆಗಳಲ್ಲಿ ಸೇರಿದೆ.

ಇಲ್ಲಿ ಅಶ್ವತ್ಥ , ವಟವೃಕ್ಷ , ಬಿಲ್ವ, ಅಶೋಕ ವೃಕ್ಷಗಳು, ಸಪೋಟ, ಕಿತ್ತಳೆ, ನಿಂಬೆ, ಸೀತಫಲ, ಇನ್ನೂ ಹಲವು ವೃಕ್ಷ ಹಾಗು ಹಣ್ಣುಗಳ ಕುಬ್ಜ ಗಿಡಗಳನ್ನು ನಾವು ನೋಡ ಬಹುದು. ಸುತ್ತ ಮುತ್ತ ಹಲವು ಕೊಳಗಳು ಹಾಗೂ ಕಾರಂಜಿಗಳು ಇವೇ. ಹಾಗೂ ಜೊತೆಗೆ ಕೆಲವು ಆಲಂಕಾರಿಕ ಮತ್ತು ಔಷಧೀಯ ಗಿಡಗಳನ್ನು ಕಾಣಬಹುದು. ಪ್ಲಾಸ್ಟಿಕ್ ಫ್ರೀ ಜಾಗವಾಗಿದೆ. ಮೈಸೂರಿಗೆ ಹೋದವರು ನೋಡಲೇ ಬೇಕಾದ ಜಾಗವಿದು.

ಸೌಮ್ಯ ಅಶೋಕ್
ಬೆಂಗಳೂರು

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version