ದಿನದ ಸುದ್ದಿ
ಸಾಹಿತ್ಯ ಬಳಗದಿಂದ ಸಿದ್ಧಗಂಗಾ ಶ್ರೀಗಳಿಗೆ ‘ಶ್ರದ್ಧಾಂಜಲಿ’
ಸುದ್ದಿದಿನ, ದಾವಣಗೆರೆ : ಇಲ್ಲಿನ ವಿನೋಬ ನಗರದ 3ನೇ ಮೇನ್ 8ನೇ ಕ್ರಾಸ್ ನಲ್ಲಿರುವ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ನ ಕೇಂದ್ರ ಕಚೇರಿಯಲ್ಲಿ ಇಂದು ಸಂಜೆ 6.30ಕ್ಕೆ ದಾವಣಗೆರೆಯ ಸಾಹಿತಿಗಳು ಸಭೆ ಸೇರಿ ನಡೆದಾಡುವ ದೇವರು ಸಿದ್ಧಗಂಗೆಯ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಯೋಗ ಜೀವನ, ಕಾಯಕ ನಿಷ್ಠೆ, ಸಾಮಾಜಿಕ, ಶೈಕ್ಷಣಿಕ ಕೊಡುಗೆ ಸ್ಮರಿಸಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಶ್ರದ್ಧಾಂಜಲಿ ಸಭೆಯಲ್ಲಿ ಕವಿಗಳಾದ ರಾಜಶೇಖರ್ ಗುಂಡಗಟ್ಟಿ, ಶಿವಯೋಗಿ ಹಿರೇಮಠ್, ರಾಜೇಂದ್ರ ಪ್ರಸಾದ್ ನೀಲಗುಂದ, ಮಹಾಂತೇಶ್ ನಿಟ್ಟೂರು, ಗೀತಾ ತಿಪ್ಪೇಸ್ವಾಮಿ, ವೀರೇಶ್, ತಾರೇಶ್ ಅಣಬೇರು, ಗಂಗಾಧರ ಬಿ.ಎಲ್ ನಿಟ್ಟೂರ್, ವೀರಭದ್ರಪ್ಪ ತೆಲಗಿ, ಕೆ.ಎಂ.ಚಂದ್ರಶೇಖರಯ್ಯ ಸೇರಿದಂತೆ ಇತರರು ಹಾಜರಿದ್ದು ನುಡಿ ನಮನ ಸಲ್ಲಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401