ದಿನದ ಸುದ್ದಿ

ದಾವಣಗೆರೆ | ಸಿದ್ದಗಂಗಾ ಶಾಲೆಯ ಮಕ್ಕಳು ಬಿಡಿಸಿದ ರಂಗೋಲಿಯಲ್ಲಿ ಅರಳಿದ ಶ್ರೀಗಳು..!

Published

on

ಸುದ್ದಿದಿನ, ದಾವಣಗೆರೆ : ನಗರದ ಸಿದ್ದಗಂಗಾ ವಿದ್ಯಾಸಂಸ್ಥೆಯ ಮಕ್ಕಳು ಇಂದು ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ಬಾಮೀಜಿಗಳ ಚಿತ್ರವನ್ನು ಬೃಹತ್ ರಂಗೋಲಿಯ ಮೂಲಕ ಬಿಡಿಸಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಶಾಲೆಯ ಆವರಣದಲ್ಲಿ ಸುಮಾರು 90 ಅಡಿ ಅಗಲ, 90 ಅಡಿ ಉದ್ದದ ರಂಗೋಲಿಯು ಜನಮನ ಸೆಳೆಯಿತು. ಶಾಲೆಯ 9 ಮತ್ತು 10 ನೇ ತರಗತಿಯ ಮಕ್ಕಳು ಚಿತ್ರಕಲಾ ಶಿಕ್ಷಕರ ನೆರವಿಂದ ರಂಗೋಲಿ ಬಿಡಿಸಿದರು. ಈ ರಂಗೋಲಿಯು 100 ಕೆಜಿ ಕಾರ್ಬನ್ ಪುಡಿ ಬಳಸಿ ಬಿಡಿಸಿದ್ದಾಗಿದ್ದು ತುಂಬಾ ಆಕರ್ಷಣೀಯವಾಗಿದೆ.

ಶಾಲೆಯ ವಿದ್ಯಾರ್ಥಿಗಳು ಇಂದು ಬೆಳಗ್ಗೆ (ಬುಧವಾರ) 11:30 ರಿಂದ 1:30ರವರೆಗೆ ಈ ರಂಗೋಲಿಯನ್ನು ಬಿಡಿಸಿದ್ದು, ದ್ರೋಣ್ ಕ್ಯಾಮೆರಾ ಮೂಲಕ ಈ ಅದ್ಭುತ ರಂಗೋಲಿಯನ್ನು ಸೆರೆಹಿಡಿಯಲಾಗಿದೆ. ಶ್ರೀಗಳ ಈ ರಂಗೋಲಿಯು ಮೂರು ದಿನಗಳ ಕಾಲ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುತ್ತದೆ ಎಂದು ವಿದ್ಯಾಸಂಸ್ಥೆಯವರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version